ನವದೆಹಲಿ, ಫೆ.24 -ಇಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಪಾಸ್‌ಪೋರ್ಟ್ ಹೊಂದಿರುವ ಮಹಿಳಾ ಪ್ರಯಾಣಿಕರೊಬ್ಬರಿಂದ ವಿದೇಶಿ ಕರೆನ್ಸಿಮತ್ತು 5.42 ಕೋಟಿ ರೂ. ಮೌಲ್ಯದ ಹಲವಾರು ಐಷಾರಾಮಿ ವಸ್ತುಗಳನ್ನು ಕಸ್ಟಮ್ಸೌಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹಾಂಗ್ ಕಾಂಗ್‌ನಿಂದ ವಿಮಾನ ನಿಲ್ದಾಣದ ಟರ್ಮಿನಲ್-3 ಕ್ಕೆ ಆಗಮಿಸಿದಾಗ ಆಕೆಯನ್ನು ತಡೆಯಲಾಯಿತು ಮತ್ತು ಆಕೆಯ ಸರಕನ್ನು ಎಕ್ಸ್ -ರೇಗೆ ಒಳಪಡಿಸಲಾಯಿತು, ನಂತರ ವಿವರವಾದ ದೈಹಿಕ ಪರೀಕ್ಷೆಗೆ ಒಳಪಡಿಸಿದಾಗ ಐಷಾರಾಮಿ ವಸ್ತುಗಳು ಪತ್ತೆಯಾಗಿವೆ ಎಂದು ಅದು ಹೇಳಿದೆ.
ವಶಪಡಿಸಿಕೊಂಡ ಚಿನ್ನ ಮತ್ತು ವಜ್ರದ ವಸ್ತುಗಳು 1.2 ಕೆಜಿ, ಬೆಳ್ಳಿ ಪಾತ್ರೆಗಳು 10 ಕೆಜಿ, ರೋಲೆಕ್‌್ಸ, ಬ್ವಲ್ಗರಿ, ಚೋಪಾರ್ಡ್ ಮತ್ತು ಕಾರ್ಟಿಯರ್‌ನಂತಹ ಜಾಗತಿಕ ಬ್ರಾಂಡ್‌ಗಳ ಐಷಾರಾಮಿ ಕೈಗಡಿಯಾರಗಳು ಮತ್ತು 9,084 ಡಾಲರ್,605 ಯುರೋ ಮತ್ತು ಹಾಂಗ್ ಕಾಂಗ್ ಡಾಲರ್ 2,540 ಅನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ 5.42 ಕೋಟಿ ರೂ. ಎಂದು ನಿರ್ಧರಿಸಲಾಗಿದೆ.ದೇಶೀಯವಾಗಿ ಖರೀದಿಸಿದ 552 ಗ್ರಾಂ ತೂಕದ ಚಿನ್ನದ ವಸ್ತುಗಳು, ಅಕೆಯ ಮೇಲೆ ಕಂಡುಬಂದಿವೆ, ಅವುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ.ಪ್ರಯಾಣಿಕನನ್ನು 1962 ರ ಕಸ್ಟಮ್ಸೌ ಕಾಯ್ದೆಯ ಸೆಕ್ಷನ್ 104 ರ ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಅದು ಹೇಳಿದೆ.
