ಬೆಂಗಳೂರು, ಜೂ.25- ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮವು, 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿ ಬಸ್ ಪಾಸ್ಗಳನ್ನು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ಇದೇ 29 ರಿಂದ ವಿತರಿಸಲಾಗುತ್ತಿದೆ.
ಸರ್ಕಾರವು ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಹಾಗೂ ಈಗಾಗಲೇ ಶುಲ್ಕ ಪಾವತಿಸಿಕೊಂಡು ವಿತರಿಸಿರುವ, ವಿದ್ಯಾರ್ಥಿ ಬಸ್ ಪಾಸ್ನ ಮೊತ್ತವನ್ನು ಮರು-ಪಾವತಿಸಲು ಅನುಮೋದನೆ ನೀಡಿ ಆದೇಶಿಸಿದೆ.
ಇದೇ 29 ರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಶುಲ್ಕ ಪಾವತಿಸಿ, ಬಸ್ಪಾಸ್ಗಳನ್ನು ಪಡೆದಿರುವ ವಿದ್ಯಾರ್ಥಿಗಳು ಪಾಸಿನ ಶುಲ್ಕ ಮರುಪಾವತಿ ಪಡೆಯಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಲು ಕೋರಲಾಗಿದೆ.
2026-27ನೇ ಸಾಲಿನಲ್ಲಿ ಶುಲ್ಕ ಪಾವತಿಸಿ ಬಸ್ ಪಾಸುಗಳನ್ನು ಪಡೆದಿರುವ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗಾಗಿ ಸರ್ಕಾರದ ಸೇವಾಸಿಂಧು ಪೋರ್ಟಲ್ನಲ್ಲಿ ಒದಗಿಸಿರುವ ಲಿಂಕ್ ಮುಖಾಂತರ ಮೊಬೈಲ್ ಸಂಖ್ಯೆ/OTP ನಮೂದಿಸಿ, ಅರ್ಜಿ ಸಲ್ಲಿಸಬೇಕು. ಸೇವಾಸಿಂಧು ಪೋರ್ಟಲ್ ಐಡಿ : (https://sevasindhuservices.karnataka.gov.in/buspassservices/) ಆಗಿದೆ.
ವಿದ್ಯಾರ್ಥಿಗಳು ಆಧಾರ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಬೇಕು.ವಿದ್ಯಾರ್ಥಿಗಳು ತಮ ಅಥವಾ ತಮ ಪೋಷಕರ ಬ್ಯಾಂಕ್ಖಾತೆ ವಿವರಗಳನ್ನು ತಂತ್ರಾಂಶದಲ್ಲಿನಮೂದಿಸುವುದು ಹಾಗೂ ಅರ್ಜಿಯನ್ನು ಸಲ್ಲಿಸುವುದು.
ಅರ್ಜಿಯನ್ನು ಸಲ್ಲಿಸಿದ 7 ದಿನಗಳ ಒಳಗೆ ವಿದ್ಯಾರ್ಥಿಗಳ ಬ್ಯಾಂಕ್ಖಾತೆಗೆ NEFT / RTGS ಮೂಲಕ ಪಾಸ್ ಮೊತ್ತ ಮರು ಪಾವತಿಯಾಗುತ್ತದೆ ಹಾಗೂ ಬ್ಯಾಂಕ್ ಖಾತೆಗೆ ಮೊತ್ತ ಮರುಪಾವತಿಯಾಗಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಎಸ್ಎಂಎಸ್ರವಾನೆಯಾಗುತ್ತದೆ.ವಿದ್ಯಾಥಿಗಳಿಗೆ ಬಸ್ಪಾಸಿನ ಮರು-ಪಾವತಿ ಮೊತ್ತ ಬ್ಯಾಂಕ್ಖಾತೆಗೆ ನೇರವಾಗಿ ಆನ್ಲೈನ್ ಮೂಲಕ ಜಮಾ ಆಗುತ್ತದೆ. ಆದುದರಿಂದ, ವಿದ್ಯಾರ್ಥಿಗಳು ವಿದ್ಯಾರ್ಥಿ ಪಾಸಿನ ಮೊತ್ತವನ್ನು ಮರು-ಪಾವತಿ ಪಡೆಯುವ ಸಂಬಂಧ ಯಾವುದೇ ಕೌಂಟರ್ಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
