Homeರಾಜ್ಯದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿ

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿ

ಮೈಸೂರು,ಅ.12- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ 3ನೇ ಹಂತದ ಮತ್ತು ಅಂತಿಮ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಗಜಪಡೆಯ ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ ಎಂದು ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3ನೇ ಹಂತದ ತಾಲೀಮು ಯಶಸ್ವಿಯಾಗಿದ್ದು, ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ ಧನಂಜಯ, ಲಕ್ಷ್ಮಿ, ರೂಪ ಆನೆಗಳು ಭಾಗವಹಿಸಲಿವೆ ಎಂದು ಅವರು ಹೇಳಿದರು.

ಅಂಬಾರಿ ಹೊರುವ ಆನೆಯನ್ನು ಜಂಬೂಸವಾರಿಗೆ ಮೂರು ದಿನ ಇರುವಾಗಲೇ ಅಂತಿಮವಾಗಿ ಆಯ್ಕೆ ಮಾಡಲಾಗುವುದು. ಅಂಬಾರಿ ರೇಸ್‌‍ನಲ್ಲಿ 4 ಆನೆಗಳು ಪ್ರಶಾಂತ, ಸುಗ್ರೀವ, ಧನಂಜಯ ಮತ್ತು ಏಕಲವ್ಯ ಇದೆ. ಈ ನಾಲ್ಕು ಆನೆಗಳ ಪೈಕಿ ಒಂದು ಆನೆ ಅಂಬಾರಿ ಹೊರಲು ಆಯ್ಕೆಯಾಗಬಹುದು. ಈ ನಾಲ್ಕರ ಪೈಕಿ ಏಕಲವ್ಯ ಅತ್ಯಂತ ಕಿರಿಯ ಆನೆಯಾಗಿದ್ದು, ಸಮರ್ಥನಿದ್ದಾನೆ ಎಂದು ಅವರು ತಿಳಿಸಿದರು.

ಆನೆಗಳ ನಡಿಗೆ, ತಾಲೀಮಿನ ಸಮಯದಲ್ಲಿ ಮಾವುತನ ಕಮಾಂಡ್‌ ಅನ್ನು ಆನೆ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಗಮನಿಸಿ ಅಂಬಾರಿ ಆನೆಯನ್ನು ಆಯ್ಕೆ ಮಾಡಲಾಗುತ್ತದೆ. ಯಶಸ್ವಿ ಜಂಬೂಸವಾರಿಗೆ ನಮ ಇಲಾಖೆ ಹಾಗೂ ಗಜಪಡೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.

RELATED ARTICLES
spot_img

Latest News