ಬೆಂಗಳೂರು, ಜ.31- ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಅವರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಎಲ್ಲಾ ದೃಷ್ಟಿಕೋನದಿಂದಲೂ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾ ತನಾಡಿರುವ ಅವರು, ಆತಹತ್ಯೆ ಪ್ರಕರಣಕ್ಕೆ ಸೀಮಿತವಾಗಿ ಗೃಹ ಇಲಾಖೆ ತನಿಖೆ ನಡೆಸಲಿದೆ. ಸದ್ಯಕ್ಕೆ ರಾಜಕೀಯ ದೃಷ್ಟಿಕೋನದಿಂದ ನಾನು ಹೇಳಿಕೆ ನೀಡಲು ಬಯಸುವುದಿಲ್ಲ ಎಂದಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥರಾದ ಸಿ.ಜೆ.ರಾಯ್ ಅವರ ಸಂಸ್ಥೆಯ ಮೇಲೆ ಡಿಸೆಂಬರ್ ತಿಂಗಳಿನಲ್ಲೇ ಆದಾಯ ತೆರಿಗೆ ದಾಳಿಯಾಗಿತ್ತು. 60 ದಿನಗಳ ಒಳಗಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿದೆ. ಅದಕ್ಕಾಗಿ ಫೆಬ್ರವರಿ 4 ರ ಒಳಗಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಲು ರಾಯ್ ಹೇಳಿಕೆ ದಾಖಲಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಂದಿದ್ದು.
ಮೂರು ದಿನಗಳ ಹಿಂದಷ್ಟೇ ದುಬೈನಿಂದ ಆಗಮಿಸಿದ್ದ ರಾಯ್ ಆದಾಯ ತೆರಿಗೆ ಅಧಿಕಾರಿಗಳಿಗೆ ಸಹಕರಿಸಿದ್ದರು. ಈ ನಡುವೆ ಐದು ನಿಮಿಷ ಸಮಯ ಕೇಳಿ ಕಚೇರಿಯಲ್ಲಿನ ತಮ ಕೊಠಡಿಗೆ ಹೋದ ರಾಯ್ 20 ನಿಮಿಷವಾದರೂ ಬರದೇ ಇದ್ದಾಗ ಬಾಗಿಲು ಹೊಡೆದು ನೋಡಲಾಗಿದೆ. ಅಲ್ಲಿ ಅವರು ಆತಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಆತಹತ್ಯೆಯಾಗಿದೆ ಎಂದು ರಾಯ್ ಅವರ ಸಹೋದರ ಹೇಳಿದ್ದಾರೆ. ಪೊಲೀಸರು ಆ ದೃಷ್ಟಿಕೋನದಿಂದ ಪ್ರಕರಣವನ್ನು ನೋಡುವುದಿಲ್ಲ. ಆತಹತ್ಯೆಗೆ ಇರುವ ಕಾರಣಗಳ ಪೂರ್ವಪರಗಳನ್ನು ಪರಿಶೀಲನೆ ಮಾಡುತ್ತಾರೆ. ತನಿಖೆಯ ಬಳಿಕ ತಿಳಿದು ಬರುವ ಅಂಶಗಳನ್ನು ಆಧರಿಸಿ ಮುಂದಿನ ವಿಚಾರಣೆ ನಡೆಯಲಿದೆ ಎಂದರು.
ತಾವು ಗೃಹ ಸಚಿವನಾಗಿ ಈ ಹಂತದಲ್ಲಿ ರಾಜಕೀಯ ದೃಷ್ಟಿಕೋನದಿಂದ ಪ್ರಕರಣವನ್ನು ಪರಿಗಣಿಸುವುದಿಲ್ಲ. ಮೊದಲಿಗೆ ಯಾವೆಲ್ಲಾ ಅಂಶಗಳು ಪತ್ತೆಯಾಗಲಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಪೊಲೀಸರ ತನಿಖೆಯಲ್ಲಿ ಕಂಡುಬರುವ ಪ್ರಮುಖ ವಿಚಾರಗಳನ್ನು ಆಧರಿಸಿ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.
ರಾಯ್ ಪ್ರಕರಣದಲ್ಲಿ ದಾಳಿ ಮಾಡಿರುವ ಆದಾಯ ತೆರಿಗೆ ಅಧಿಕಾರಿಗಳು, ತಂಡದಲ್ಲಿ ಯಾರೆಲ್ಲಾ ಇದ್ದರು ಎಂಬುದು ತಮಗೆ ಗೊತ್ತಿಲ್ಲ. ತನಿಖೆಯಲ್ಲಿ ಎಲ್ಲವೂ ತಿಳಿದು ಬರಲಿದೆ ಎಂದು ಹೇಳಿದರು.
ವರ್ಗಾವಣೆಗೆ ಲಂಚ ಪಡೆಯಲ್ಲ:
ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್್ಸಪೆಕ್ಟರ್ ಗೋವಿಂದರಾಜು ಅವರನ್ನು ಅಮಾನತುಗೊಳಿಸಲಾಗಿದೆ. ಮುಂದೆ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಇತ್ತೀಚಿಗೆ ನಡೆದ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮೇಳನದಲ್ಲಿ ಭ್ರಷ್ಟಾಚಾರದ ವಿರುದ್ಧವಾಗಿ ಕಠಿಣ ಮಾತುಗಳಲ್ಲಿ ನಾನು ಮತ್ತು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದೇವೆ. ಭ್ರಷ್ಟಾಚಾರ ಅಥವಾ ಕಾನೂನು ಬಾಹಿರ ಕೃತ್ಯಗಳು ನಡೆದ ಮೇಲೆ ಕ್ರಮ ಕೈಗೊಳ್ಳುವುದು ಒಂದು ಭಾಗವಾದರೆ ಇಂತಹ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇವು. ಪದೇಪದೇ ಇಂತಹ ಘಟನೆಗಳು ನಡೆಯುವುದರಿಂದ ಇಲಾಖೆಗೆ ಮತ್ತು ಸರ್ಕಾರಕ್ಕೆ ಮುಜುಗರವಾಗುತ್ತಿದೆ. ವಿವಿಧ ಕಾರಣಗಳಿಗೆ 100 ಕ್ಕೂ ಹೆಚ್ಚು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ಭ್ರಷ್ಟಚಾರ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸುವುದಕ್ಕೆ ಕಡಿವಾಣ ಹಾಕಲು ಎಲ್ಲಾ ಘಟಕಗಳ ಮುಖ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇವೆ. ಜೊತೆಗೆ ಹಿರಿಯ ಅಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದರು.
ಸರ್ಕಾರ ಏನೇ ಸೂಚನೆ ನೀಡಿದರೂ, ಅದಕ್ಕೂ ಮುನ್ನಾ ಪೊಲೀಸ್ ಅಧಿಕಾರಿಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬ ಅರಿವು ಖುದ್ದು ಅವರಲ್ಲಿ ಇರಬೇಕು. ಇಂತಹ ಘಟನೆಗಳು ಏಕೆ ನಡೆಯುತ್ತವೆ ಎಂಬುದನ್ನು ಅಧ್ಯಯನ ನಡೆಸುವ ಅಗತ್ಯ ಇದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಲಂಚ ಪಡೆಯುವುದು ನನ್ನ ಹಂತದಲ್ಲಿ ನಡೆಯದಂತೆ ನಾನು ಎಚ್ಚರದಿಂದ ಇದ್ದೇನೆ. ಆದರೆ ಬೇರೆ ಬೇರೆ ಹಂತದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿಲ್ಲ. ಜನ ನಮನ್ನು ಮತ ಹಾಕಿ ಗೆಲ್ಲಿಸಿದ್ದಾರೆ. ಅವರಿಗೆ ಜವಾಬ್ದಾರಿಯುತವಾದ ಸರ್ಕಾರ ನೀಡುವುದು ನಮ ಕರ್ತವ್ಯ ಎಂದರು.
ಪೊಲೀಸ್ ಇನ್್ಸಪೆಕ್ಟರ್ ಮತ್ತು ಸಬ್ಇನ್್ಸಪೆಕ್ಟರ್ಗಳ ವರ್ಗಾವಣೆಗೆ ಎರಡು ವರ್ಷಗಳ ಕಾಲಾವಧಿ ನಿಗದಿ ಮಾಡಿರುವುದಕ್ಕೆ ಕೆಲ ಶಾಸಕರು ಬೆಂಬಲ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ಬದಲಾವಣೆ ಮಾಡಿ ಒಂದು ವರ್ಷಕ್ಕೆ ಸೀಮಿತ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಮಾದಕ ವಸ್ತು ಸಿಕ್ಕಿಲ್ಲ:
ಮಾದಕ ವಸ್ತುಗಳ ಹಾವಳಿ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ದಿನನಿತ್ಯ ದಾಳಿಗಳಾಗುತ್ತಿವೆ, ಹಲವಾರು ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಕಳ್ಳ ಸಾಗಾಣಿಕೆ. ಹೈಡ್ರೋ ಗಾಂಜಾ ಥೈಲ್ಯಾಂಡ್ ಬರುತ್ತಿದೆ ಎಂದರು.
ಮೈಸೂರಿನಲ್ಲಿ ಫಿನೈಲ್ ಫ್ಯಾಕ್ಟರಿ ಆರಂಭಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಅಲ್ಲಿ ಮಾದಕ ವಸ್ತು ತಯಾರಿಕೆ ಮಾಡುತ್ತಿದ್ದಾಗಿ ಹೇಳಲಾಗಿದೆ. ಕರ್ನಾಟಕದ ವ್ಯಕ್ತಿಯೊಬ್ಬನ ಕಾರಿನಲ್ಲಿ ಮಾದಕ ವಸ್ತುಗಳಿದ್ದವು ಎಂದು ಗುಜರಾತ್ ಪೊಲೀಸರು ಪತ್ತೆ ಹಚ್ಚಿ, ಬಂಧಿನ ಜಾಡು ಹಿಡಿದು ಬಂದಾಗ ಮೈಸೂರಿನಲ್ಲಿ ಉತ್ಪಾದನಾ ಫ್ಯಾಕ್ಟರಿ ಇರುವುದು ಕಂಡು ಬಂದಿದೆ ಎಂದರು.
ಗುಜರಾತ್ ಪೊಲೀಸರು ಪತ್ರಿಕಾ ಹೇಳಿಕೆ ನೀಡಿ, ಕರ್ನಾಟಕದಲ್ಲಿ ದಾಳಿ ಮಾಡಿದಾಗ ಮಾದಕ ವಸ್ತು ಸಿಕ್ಕಿದೆ ಎಂದು ಹೇಳಿದ್ದಾರೆ. ನಮ ಪೊಲೀಸರ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಯಾವುದೇ ಮಾದಕ ವಸ್ತುಗಳು ಸಿಕ್ಕಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
