ಅಡಿಕೆ ಪೇಟ, ಹಾರ ತೊಡಿಸಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ತುಮಕೂರು/ಗುಬ್ಬಿ,ಫೆ.6- ಐತಿಹಾಸಿಕ ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಅಡಿಕೆ ಹಾರ ಹಾಗೂ ಅಡಿಕೆ ಪೇಟ ತೊಡಿಸಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು. ಗುಬ್ಬಿ ತಾಲ್ಲೂಕಿನ ಚಿಕ್ಕೋನಹಳ್ಳಿ ಗ್ರಾಮದ ನಟರಾಜ್ ಎಂಬುವರು 1.5 ಕೆಜಿ ತೂಕದ ಉಂಡೆ ಅಡಿಕೆಯಿಂದ ಹಾರ ಹಾಗೂ 300 ಗ್ರಾಂ ತೂಕದ ಪೇಟವನ್ನು ತಯಾರಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‍ನಲ್ಲಿ ಹೆಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದ ಉದ್ಘಾಟನೆಗೆ ಇಂದು ಆಗಮಿಸಿದ […]

ಕಲ್ಪತರು ನಾಡನ್ನು ವಿಶ್ವ ಮಟ್ಟಕ್ಕೆ ಕೊಂಡೋಯ್ದ ಹೆಲಿಕಾಪ್ಟರ್ ತಯಾರಿಕಾ ಘಟಕ

ತುಮಕೂರು,ಫೆ.6- ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಗೊಳಿಸಿದ ಭಾರತದ ಅತಿದೊಡ್ಡ ಎಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಹೊಸ ಮೈಲುಗಲ್ಲು ಸ್ಥಾಪಿಸಿದ್ದು ಕಲ್ಪತರು ನಾಡನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದೆ. ಪ್ರಧಾನಿ ನರೇಂದ್ರ ಮೋದಿ ಮೊದಲನೇ ಅವಧಿಯ ಅಧಿಕಾರದಲ್ಲಿ 2016ರ ಜನವರಿ 3ರಂದು ಈ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ 2018 ರಿಂದಲೇ, ಲೋಹದ ಹಕ್ಕಿಗಳ ಹಾರಾಟದ ಭರವಸೆ ನೀಡಿದರು. ಆದರೆ 7 ವರ್ಷದ ಬಳಿಕ ಕಾರ್ಯಾರಂಭವಾಗುತ್ತಿದೆ. ಪ್ರಧಾನಿ ಮೋದಿ ಅವರೇ ಶಂಕುಸ್ಥಾಪನೆ ಮಾಡಿ, ಲೋಕಾರ್ಪಣೆ […]

ಬೆಂಗಳೂರಲ್ಲಿ ರಾಕೆಟ್ ಎಂಜಿನ್ ಉತ್ಪಾದನಾ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಬೆಂಗಳೂರು, ಸೆ. 27- ರಾಕೆಟ್ ಎಂಜಿನ್ ಅನ್ನು ಒಂದೇ ಸೂರಿನಡಿ ಸಂಪೂರ್ಣವಾಗಿ ಉತ್ಪಾದನೆ ಮಾಡುವ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರಿನಲ್ಲಿಂದು ಉದ್ಘಾಟಿಸಿದರು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು (ಐಸಿಎಂಎಫ್) ಸ್ಥಾಪಿಸಿದೆ. ಸುಮಾರು 4,500 ಚದರ ಮೀಟರ್ ವಿಸ್ತೀರ್ಣದಲ್ಲಿ 70 ಕ್ಕೂ ಹೆಚ್ಚು ಹೈಟೆಕ್ ಉಪಕರಣಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ರಾಕೆಟ್‍ಗಳ ಕ್ರಯೋಜೆನಿಕ್ (ಸಿಇ20) ಮತ್ತು ಸೆಮಿ-ಕ್ರಯೋಜೆನಿಕ್ (ಎಸ್‍ಇ2000) ಎಂಜಿನ್‍ಗಳ […]