ಬೆಂಗಳೂರು, ಫೆ.5- ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾದ ರಕ್ಷಣಾ ಇಲಾಖೆಯ ಪ್ರತಿಷ್ಠಿತ ಹೆಚ್‌ಎಎಲ್ (ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್)ನ ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕನ್ನಡಿಗ ಕೋಟಾ ರವಿ ಅವರು ಆಯ್ಕೆಯಾಗಿದ್ದಾರೆ. ಕಾರ್ಯಾಚರಣೆ ವಿಭಾಗದ ನಿರ್ದೇಶಕರಾಗಿರುವ ಇವರು ಮುಂದಿನ ಏಪ್ರಿಲ್‌ನಿಂದ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಹೆಚ್‌ಎಎಲ್‌ನ ನೂತನ ಅಧ್ಯಕ್ಷರನ್ನಾಗಿ ನೇಮಿಸಲು ಪಿಇಎಸ್‌ಬಿ ಶಿಫಾರಸು ಮಾಡಿದೆ.ವೈಮಾನಿಕ, ರಕ್ಷಣಾ ಉಪಕರಣಗಳು ಮತ್ತು ಅತ್ಯಾಧುನಿಕ ಸಾಧನಗಳ ಪರೀಕ್ಷೆ ಹಾಗೂ ಸಂಶೋಧನಾ ವಲಯಗಳಲ್ಲಿ ಸೇವೆ ಸಲ್ಲಿಸಿರುವ ಇವರು ಅಪಾರ ಪರಿಣತಿ ಹೊಂದಿದ್ದಾರೆ.
ಪ್ರಸ್ತುತ ಹೆಚ್‌ಎಎಲ್ ಆರಂಭಿಸುತ್ತಿರುವ ರೋಟೋ ಕ್ರಾಫ್‌್ಟ , ಯುದ್ಧ ವಿಮಾನಗಳು, ಡ್ರೋನ್ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕೋಟಾ ರವಿ ಅವರು ವಹಿಸಲಿದ್ದಾರೆ.ಪ್ರತಿಷ್ಠಿತ ಹೆಚ್‌ಎಎಲ್ ಸಂಸ್ಥೆಗೆ ಕರ್ನಾಟಕದ ಕೋಟಾ ರವಿ ಅವರು ನೇಮಕವಾಗಿರುವುದು ರಾಜ್ಯ ಹಾಗೂ ಕನ್ನಡಿಗರಿಗೆ ಹೆಮೆಯ ವಿಷಯವಾಗಿದೆ.
