ಸಂಕಷ್ಟದಲ್ಲಿರುವ ಶ್ರೀಲಂಕಾ ನೆರವಿಗೆ ಭಾರತ ಬದ್ಧ ; ಜೈಶಂಕರ್

ನವದೆಹಲಿ,ಮಾ.18-ಸಂಕಷ್ಟದಲ್ಲಿರುವ ನೆರೆಹೊರೆ ದೇಶಗಳ ನೆರವಿಗೆ ಭಾರತ ಸದಾ ಮುಂದಿರುತ್ತದೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿಯಲ್ಲಿ ನಡೆದ ದಿ ಎಕ್ಸಿಬಿಷನ್ ಆಫ್ ಶ್ರೀಲಂಕಾದ ಆರ್ಕಿಟೆಕ್ಟ್ ‘ಜೆಫ್ರಿ ಬಾವಾ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಕ್ತವು ನೀರಿಗಿಂತ ದಪ್ಪಗಿರುತ್ತದೆ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಜೈಶಂಕರ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತವು ತನ್ನ ನೈಬರ್‍ಹುಡ್ ಫಸ್ಟ್ ನೀತಿಯಡಿಯಲ್ಲಿ, ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾಕ್ಕೆ ಸಹಾಯ ಮಾಡಲು […]

ಭಾರತ ಮಾನವೀಯತೆ ಪರ ಸದಾ ನಿಲ್ಲುತ್ತದೆ: ಜೈಶಂಕರ್

ನವದೆಹಲಿ,ಫೆ.8- ಟರ್ಕಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಭಾರತ ಮಾನವೀಯತೆ ಪರವಾಗಿ ನಿಲ್ಲುತ್ತದೆ. ಸಂಕಷ್ಟದಲ್ಲಿರುವ ಆ ದೇಶಕ್ಕೆ ನೆರವಾಗುತ್ತದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದರು. ಟರ್ಕಿಗೆ ಪರಿಹಾರ ಒದಗಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಸುದೈವ ಕುಟುಂಬಕಂ ನೀತಿಯ ಪ್ರಕಾರ ಭಾರತವು ಮಾನವೀಯತೆ ಪರ ಸದಾ ನಿಲ್ಲುತ್ತದೆ. ಪ್ರಕತಿ ವಿಕೋಪದಂತಹ ಸಂದರ್ಭದಲ್ಲಿ ಅವರಿಗೆ ನೆರವಾಗುವುದು ಎಂದರು. ಭೂಕಂಪ ಪೀಡಿತ ಟರ್ಕಿ ರಾಷ್ಟ್ರಕ್ಕೆ ಭಾರತ ಇಲ್ಲಿಯವರೆಗೆ 30 ಹಾಸಿಗೆಗಳ ಕ್ಷೇತ್ರ ಆಸ್ಪತ್ರೆಯನ್ನು ಸ್ಥಾಪಿಸಲು ಎನ್‍ಡಿಆರ್‍ಫ್ ಸಿಬ್ಬಂದಿ […]

ಅರಾಜಕತೆಯಲ್ಲಿ ಮುಳುಗಿದ ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದ ಭಾರತ

ತಿರುವನಂತಪುರಂ,ಜು.10-ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಭಾರತ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ. ವಿದೇಶಿ ವಿನಿಮಯ ಕೊರತೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಉಲ್ಬಣಗೊಂಡಿವೆ. ದೇಶದ ಅಧ್ಯಕ್ಷರ ಸರ್ಕಾರಿ ಬಂಗಲೆಯನ್ನು ಜನ ಆಕ್ರಮಿಸಿಕೊಂಡಿದ್ದಾರೆ. ಪ್ರಧಾನಿಯವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಯ ರಾಷ್ಟ್ರದ ಬೆಳವಣಿಗೆಗಳ ಬಗ್ಗೆ ತಿರುವನಂತಪುರಂನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಜೈಶಂಕರ್ ಅವರು, ಸದ್ಯಕ್ಕೆ ಅಲ್ಲಿ ನಿರಾಶ್ರಿತರಾಗುವಂತಹ […]