ಜನಪ್ರಿಯ ಬಜೆಟ್ ಮಂಡನೆಗೆ ತಲೆನೋವಾದ ಬಂಡವಾಳ ವೆಚ್ಚ ಇಳಿಕೆ

ಬೆಂಗಳೂರು,ಫೆ.2- ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಪ್ರಸಕ್ತ 2023-24 ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯದ್ದು ಚುನಾವಣೆ ಬಜೆಟ್ ಆಗಲಿದ್ದು, ಜನಪರ ಆಯವ್ಯಯ ಮಂಡನೆ ಮಾಡಲಿದ್ದೇನೆ ಎಂದು ಸಿಎಂ ಬೊಮ್ಮಾಯಿ ಈಗಾಗಲೇ ತಿಳಿಸಿದ್ದಾರೆ. ಆದರೆ, ಈ ಬಾರಿಯ ಬಜೆಟ್ನಲ್ಲಿ ಸಿಎಂಗೆ ದೊಡ್ಡ ತಲೆನೋವಾಗಿರುವುದು ಬದ್ಧ ವೆಚ್ಚ. ಬದ್ಧ ವೆಚ್ಚ ಉಲ್ಬಣಗೊಳ್ಳುವುದರಿಂದ ಇತ್ತ ಆಸ್ತಿಗಳನ್ನು ಸೃಜಿಸುವ ಬಂಡವಾಳ ವೆಚ್ಚ ಗಣನೀಯ ವಾಗಿ ಕುಂಠಿತವಾಗಲಿದೆ. ಸಿಎಂ ಬೊಮ್ಮಾಯಿ ಫೆ.17ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣೆ […]