Homeರಾಷ್ಟ್ರೀಯಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಠ್‌ ನೇಮಕ

ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಠ್‌ ನೇಮಕ

Centre appoints Lt Gen Dhiraj Seth as next Chief of Army Staff

ನವದೆಹಲಿ,ಜೂ.13- ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಠ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅವರು ಜೂನ್‌ 30ರಿಂದ ಅಧಿಕಾರ ಸ್ವೀಕರಿಸಲಿದ್ದು, ಹಾಲಿ ಸೇನಾ ಮುಖ್ಯಸ್ಥ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಲಾಗಿದೆ.

ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಠ್‌ ಅವರು ಪ್ರಸ್ತುತ ಭಾರತೀಯ ಸೇನೆಯ ಉಪ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಡಿಸೆಂಬರ್‌ 1986ರಲ್ಲಿ ಭಾರತೀಯ ಸೇನೆ ವಿಭಾಗಕ್ಕೆ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು.ಸುಮಾರು 40 ವರ್ಷಗಳ ಸುದೀರ್ಘ ಸೇನಾ ಸೇವಾ ಅನುಭವ ಹೊಂದಿದ್ದಾರೆ.

ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಠ್‌ ಅವರು ತಮ ವೃತ್ತಿಜೀವನದಲ್ಲಿ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕಾರ್ಯಾಚರಣೆ, ತಂತ್ರಗಾರಿಕೆ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಸಂಸ್ಥಾಗತ ನಿರ್ವಹಣೆ ಕ್ಷೇತ್ರಗಳಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದಾರೆ.

ಭಾರತೀಯ ಸೇನೆಯ ಆಧುನೀಕರಣ ಹಾಗೂ ಭವಿಷ್ಯದ ಯುದ್ಧ ಸವಾಲುಗಳಿಗೆ ತಕ್ಕ ತಂತ್ರಜ್ಞಾನ ಅಳವಡಿಕೆಯಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ. ಕಾರ್ಯಾಚರಣೆಯ ಅಗತ್ಯಗಳನ್ನು ಹೊಸ ತಂತ್ರಜ್ಞಾನಗಳೊಂದಿಗೆ ಹೊಂದಾಣಿಕೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸೇನೆಯ ದೀರ್ಘಕಾಲೀನ ಪರಿವರ್ತನೆ ಮತ್ತು ಯುದ್ಧ ಸಾಮರ್ಥ್ಯ ವೃದ್ಧಿಗೆ ಅವರು ನೀಡಿದ ಸೇವೆಗಾಗಿ ಗುರುತಿಸಿಕೊಂಡಿದ್ದಾರೆ.

RELATED ARTICLES

Latest News