Saturday, October 26, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2024)

Horoscope

ನಿತ್ಯ ನೀತಿ : ನಾವು ಸಂತೋಷವನ್ನು ಹುಡುಕಲು ಹೋಗಬಾರದು. ನಾವಿರುವಲ್ಲಿಯೇ ಸಂತೋಷವನ್ನು ಸೃಷ್ಟಿಸಬೇಕು.

ಪಂಚಾಂಗ : ಶನಿವಾರ , 26-10-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಆಶ್ಲೇಷಾ / ಯೋಗ: ಶುಕ್ಲ / ಕರಣ: ವಣಿಜ್

ಸೂರ್ಯೋದಯ – ಬೆ.06.12
ಸೂರ್ಯಾಸ್ತ – 05.55
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಕೌಟುಂಬಿಕ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳೇ ಶತ್ರುಗಳಾಗುವರು.
ವೃಷಭ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂತಸದಿಂದ ಕೆಲಕಾಲ ಕಳೆಯುವಿರಿ.
ಮಿಥುನ: ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದೆ. ನೌಕರರಿಗೆ ಹೊಸ ವಸತಿ ವ್ಯವಸ್ಥೆಯಾಗಲಿದೆ.

ಕಟಕ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸ-ಕಾರ್ಯಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ.
ಸಿಂಹ: ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ. ಮೇಲಧಿ ಕಾರಿಗಳೊಂದಿಗೆ ಮೆಚ್ಚುಗೆ ಪಡೆಯಲು ಹೆಚ್ಚಿನ ಪ್ರಯತ್ನ ನಡೆಸಿ.
ಕನ್ಯಾ: ಕೆಲಸ-ಕಾರ್ಯ ಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳು ಅಲ್ಪ ಪ್ರಗತಿ ಕಾಣುವರು.

ತುಲಾ: ಲೇವಾದೇವಿ ವ್ಯವಹಾರಗಳು ನಿರಂತರ ವಾಗಿ ಮುಂದುವರೆಯಲಿವೆ. ಸದುದ್ದೇಶದಿಂದ ಕೆಲವು ಕೆಲಸಗಳನ್ನು ಗೌಪ್ಯವಾಗಿ ನಿರ್ವಹಿಸಿ.
ವೃಶ್ಚಿಕ: ದೂರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಮಕ್ಕಳಿಂದ ಸಂತೋಷ ಸಿಗಲಿದೆ.
ಧನುಸ್ಸು: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.

ಮಕರ: ಹೊಸದಾಗಿ ಪರಿಚಯವಾಗುವ ಉದ್ಯಮಿ ಯೊಂದಿಗೆ ವ್ಯವಹಾರ ಆರಂಭಿಸಲು ಯೋಚಿಸುವಿರಿ.
ಕುಂಭ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಮೀನ: ದಾಯಾದಿ ಕಲಹವಾಗಬಹುದು. ದೂರ ಪ್ರಯಾಣ ಮಾಡದಿರುವುದು ಒಳಿತು.

RELATED ARTICLES

Latest News