Wednesday, April 22, 2026
Homeರಾಜಕೀಯ'ಮೋದಿ ಭಯೋತ್ಪಾದಕ' ಎಂಬ ಖರ್ಗೆ ಹೇಳಿಕೆ ಸಮರ್ಥಿಸಿಕೊಂಡ ಬಿ.ಕೆ.ಹರಿಪ್ರಸಾದ್‌

‘ಮೋದಿ ಭಯೋತ್ಪಾದಕ’ ಎಂಬ ಖರ್ಗೆ ಹೇಳಿಕೆ ಸಮರ್ಥಿಸಿಕೊಂಡ ಬಿ.ಕೆ.ಹರಿಪ್ರಸಾದ್‌

B.K. Hariprasad defends Kharge's statement that 'Modi is a terrorist'

ಬೆಂಗಳೂರು,ಏ.22- ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್‌ ಕಿ ಬಾತ್‌ನಲ್ಲಿ ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್‌‍ ಪಕ್ಷವನ್ನು ಟೀಕಿಸುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದರು. ಅದರ ವಿರುದ್ಧ ದೂರು ನೀಡಲಾಗಿದೆ. ಅದಕ್ಕೆ ಪ್ರತಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ದೂರು ನೀಡಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್‌‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಟೀಕಿಸಿರುವುದನ್ನು ಸಮರ್ಥಿಸಿಕೊಂಡರು. 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಸಿಬಿಐ, ಇಡಿಗಳನ್ನು ಬಳಸಿಕೊಂಡು ದೇಶದ ಜನರನ್ನು ಭಯ ಬೀಳಿಸುತ್ತಿದ್ದಾರೆ ಎಂದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌‍.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್‌ ಹೆಗ್ಡೆ ಹಾಗೂ ಸಿ.ಜೆ.ರಾಯ್‌ ಅವರು ಆತಹತ್ಯೆ ಮಾಡಿಕೊಂಡಿದ್ದು ಜಾರಿನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ದಾಳಿಗಳಿಂದಾಗಿ ಎಂದರು.

ಖರ್ಗೆ ಅವರ ಹೇಳಿಕೆಗಳನ್ನು ದೊಡ್ಡದು ಮಾಡುತ್ತಿರುವ ಬಿಜೆಪಿಯವರು 2014 ರಿಂದ ಪ್ರಧಾನಿ ನರೇಂದ್ರ ಮೋದಿ ಆಡಿರುವ ಅಣಿಮುತ್ತುಗಳನ್ನು ಸ್ವಲ್ಪ ನೆನಪಿಸಿಕೊಳ್ಳಲಿ. ವಿರೋಧ ಪಕ್ಷಗಳನ್ನು ದೇಶ ದ್ರೋಹಿಗಳು ಎಂದು ಟೀಕಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಯವರು ದೇಶ ದ್ರೋಹಿಗಳು ಎಂದು ಹೇಳಬೇಕಿತ್ತು. ಅದನ್ನು ಬಿಟ್ಟು ವಿರೋಧ ಪಕ್ಷಗಳ ವಿರುದ್ಧ ಹಾಗೂ ಅವರ ಪಕ್ಷವನ್ನು ಬೆಂಬಲಿಸದವರ ವಿರುದ್ಧ ಮೋದಿ ಹಲವು ಬಾರಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

50 ಕೋಟಿ ಗರ್ಲ್‌ಫ್ರೆಂಡ್‌, ಕಾಂಗ್ರೆಸ್‌‍ ವಿಧವೆ, ಜೆರ್ಸಿ ಹಸು ಎಂದೆಲ್ಲಾ ಮೋದಿ ಮಾತನಾಡುವಾಗ ಬಿಜೆಪಿಯವರು ಏಕೆ ಪ್ರಶ್ನಿಸಿರಲಿಲ್ಲ. ಮಾಲೆಗಾಂವ್‌, ಸಂಜೋತ ಸ್ಫೋಟ ಪ್ರಕರಣಗಳನ್ನು ಭಯೋತ್ಪಾದಕ ಕೃತ್ಯಗಳು ಎಂದು ನ್ಯಾಯಾಲಯ ಹೇಳಿದೆ.

ಪಶ್ಚಿಮಬಂಗಾಳದ ಚುನಾವಣೆಯಲ್ಲಿ ಮೋದಿ ಅವರು ಪ್ರಚಾರ ಮಾಡುವಾಗ ಚರಂಡಿಯ ಮೇಲೆ ರೌಡಿಗಳು ಕುಳಿತು ಕಿರುಚುವಂತೆ ದೀದಿ ಓ ದೀದಿ ಎಂದು ಕೂಗಿದರು. ಗಡಿಪಾರು ಶಿಕ್ಷೆಗೊಳಗಾಗಿ, ಈಗ ಕೇಂದ್ರ ಸಚಿವರಾಗಿರುವ ವ್ಯಕ್ತಿ ಮಮತಾ ಬ್ಯಾನರ್ಜಿ ಅವರನ್ನು ಏಕವಚನದಲ್ಲಿ ಕರೆಯುತ್ತಿದ್ದಾರೆ. ಇಂತಹ ವಿಚಾರಗಳನ್ನು ಪ್ರಶ್ನೆ ಮಾಡಬಾರದೇ ಎಂದರು.

ಕಾಂಗ್ರೆಸ್‌‍ ವಿರುದ್ಧ ಟೀಕೆ ಮಾಡಲು ಬಿಜೆಪಿಯವರಿಗೆ ಯಾವುದೇ ವಿಚಾರಗಳಿಲ್ಲ. ಹೀಗಾಗಿ ಖರ್ಗೆ ಅವರ ಹೇಳಿಕೆಯನ್ನು ವಿವಾದ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

RELATED ARTICLES

Latest News