ಹುಬ್ಬಳ್ಳಿ,ಏ.22- ಬೆಂಗಳೂರಿ ನಿಂದ ಹುಬ್ಬಳ್ಳಿಗೆ ಬಂದ ಫ್ಲೈ -91 ವಿಮಾನ ಮತ್ತೆ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡ ಪರಿಣಾಮ, 2 ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಹಾರಾಡಿದ ಘಟನೆ ನಡೆದಿದೆ.
5 ದಿನಗಳ ಅಂತರದಲ್ಲಿ ಇದು 2ನೇ ಘಟನೆಯಾಗಿದೆ. ಮೊನ್ನೆಯಷ್ಟೇ ಹೈದರಾಬಾದ್‌ನಿಂದ ಹೊರಟಿದ್ದ ್ಲೖೆ91 ವಿಮಾನವು ಹವಾಮಾನ ವೈಪರಿತ್ಯ ದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೇ ಮೂರು ಗಂಟೆಗೂ ಹೆಚ್ಚು ಕಾಲ ಹಾರಾಡಿತ್ತು.
ಇದೀಗ ಬೆಂಗಳೂರಿನಿಂದ ಬಂದ ವಿಮಾನದಲ್ಲೂ ಅದೇ ರೀತಿಯ ಸಮಸ್ಯೆ ಕಾಣಿಡಿಕೊಂಡಿದೆ. ಐಇ3412 ಸಂಖ್ಯೆಯ ವಿಮಾನವು ನಿನ್ನೆ ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟಿತ್ತು. 6:50 ರ ವೇಳೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ವಿಮಾನ ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿ ತಲುಪಿದ್ರೂ, ಲ್ಯಾಂಡಿಂಗ್ ವೇಳೆ ಸಮಸ್ಯೆ ಉಂಟಾಗಿದೆ. ಇದರಿಂದ ಪ್ರಯಾಣಿಕರನ್ನ ಹೊತ್ತ ವಿಮಾನ ಸುಮಾರು 2 ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಡಿದೆ. ರಾತ್ರಿ 9:15 ಗಂಟೆಗೆ ವಿಮಾನ ಸುರಕ್ಷಿತವಾಗಿ ಇಳಿದಿದೆ.
ಬೇರೆ ವಿಮಾನಗಳಿಗೆ ಇಲ್ಲದ ಸಮಸ್ಯೆ ್ಲೖೆ91 ವಿಮಾನಗಳಿಗೆ ಏಕೆ ಆಗುತ್ತಿದೆ ಅನ್ನೋ ಪ್ರಶ್ನೆ ಎದ್ದಿದೆ. ಹೈದರಾಬಾದ್‌ನಿಂದ ಬಂದ ವಿಮಾನದಲ್ಲಿ ದೋಷ ಕಾಣಿಸಿಕೊಂಡಾಗ ಹವಾಮಾನ ವೈಪರಿತ್ಯದ ನೆಪ ಹೇಳಿತ್ತು. ಆದ್ರೆ ನಿನ್ನೆ ್ಲೖೆ91 ವಿಮಾನ ಲ್ಯಾಂಡ್ ಆಗಬೇಕಿದ್ದ ಅದೇ ಸಮಯದಲ್ಲಿ ಹಲವಾರು ್ಲೖೆಟ್‌ಗಳು ಟೇಕಾ್ ಆಗಿವೆ ಮತ್ತು ಲ್ಯಾಂಡಿಂಗ್ ಕೂಡ ಆಗಿವೆ.
ಆದ್ರೆ ಫ್ಲೈ 91 ವಿಮಾನಕ್ಕೆ ಮಾತ್ರ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡಿದ್ದು ಏಕೆ? ಅನ್ನೋ ಅನುಮಾನ ಮೂಡಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಗಿದೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಟ ನಡೆಸುವಾಗ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
