Wednesday, April 22, 2026
Homeರಾಜ್ಯಭಯೋತ್ಪಾದನೆಯಿಂದ ನಮ್ಮ ಚೈತನ್ಯ ಬಲಹೀನಗೊಳಿಸಲಾಗದು : ಹೆಚ್ಡಿಕೆ

ಭಯೋತ್ಪಾದನೆಯಿಂದ ನಮ್ಮ ಚೈತನ್ಯ ಬಲಹೀನಗೊಳಿಸಲಾಗದು : ಹೆಚ್ಡಿಕೆ

Terrorism cannot weaken our spirit: HDK

ನವದೆಹಲಿ,ಏ.22- ಭಯೋತ್ಪಾದನೆಯು ನಮ್ಮ ಚೈತನ್ಯವನ್ನು ಎಂದಿಗೂ ಬಲಹೀನ ಗೊಳಿಸಲಾರದು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ತಮ ಎಕ್‌್ಸ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಭಯೋತ್ಪಾದನೆಯು ನಮ ಶಾಂತಿ, ಪ್ರಗತಿ ಮತ್ತು ರಾಷ್ಟ್ರೀಯ ಏಕತೆಯ ಹಾದಿಗೆ ತಡೆಯೊಡ್ಡಲಾರದು. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಾಯಕ, ಬಲಿಷ್ಠ ನಾಯಕತ್ವದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ ಬದ್ಧತೆಯು ದೃಢವಾಗಿ ಮತ್ತು ರಾಜಿಯಾಗದೆ ಉಳಿದಿದೆ ಎಂದಿದ್ದಾರೆ.

ಒಂದು ವರ್ಷ ಕಳೆದರೂ ಆ ಕ್ರೂರ, ಪೈಶಾಚಿಕ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನೋವು, ನೆನಪು ಭಾರತದ ಆತಸಾಕ್ಷಿಯ ಮೇಲೆ ಭಾರವಾಗಿ ತೂಗುತ್ತಲೇ ಇದೆ. ಆ ಸಂದರ್ಭದಲ್ಲಿ ಪಾತಕಿಗಳಿಗೆ ಬಲಿಯಾದ 26 ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತೇನೆ. ಅವರ ನೆನಪು ಭಯೋತ್ಪಾದನೆ ವಿರುದ್ಧದ ಹೋರಾಟದ ನಮ ಧೃಢಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತಲೇ ಇದೆ ಎಂದು ಭಾವಿಸಿರುವುದಾಗಿ ಅವರು ತಿಳಿಸಿದ್ದಾರೆ.

RELATED ARTICLES

Latest News