Homeಅಂತಾರಾಷ್ಟ್ರೀಯಅಮೆರಿಕ ಸೇನೆಯಿಂದ ಇರಾನ್‌ ಧ್ವಜ ಹೊಂದಿದ್ದ ತೈಲ ಟ್ಯಾಂಕರ್‌ ತಪಾಸಣೆ ; ಮತ್ತಷ್ಟು ಉದ್ವಿಗ್ನತೆ ಹೆಚ್ಚಳ

ಅಮೆರಿಕ ಸೇನೆಯಿಂದ ಇರಾನ್‌ ಧ್ವಜ ಹೊಂದಿದ್ದ ತೈಲ ಟ್ಯಾಂಕರ್‌ ತಪಾಸಣೆ ; ಮತ್ತಷ್ಟು ಉದ್ವಿಗ್ನತೆ ಹೆಚ್ಚಳ

US Military: Iranian-Flagged Tanker Released After Inspection and Route Modification

ವಾಷಿಂಗ್ಟನ್‌‍, ಮೇ.21-ಅಮೆರಿಕದ ನಿರ್ಬಂಧ ಉಲ್ಲಂಘಿಸಲು ಯತ್ನಿಸಿದೆ ಎಂಬ ಶಂಕೆಯ ಮೇರೆಗೆ ಓಮನ್‌ ಕೊಲ್ಲಿಯಲ್ಲಿ ಇರಾನ್‌ ಧ್ವಜ ಹೊಂದಿದ್ದ ತೈಲ ಟ್ಯಾಂಕರ್‌ ಅನ್ನು ನಿಲ್ಲಿಸಿದ ಅಮೆರಿಕ ಸೇನೆ ಒಳ ಪ್ರವೇಶಿಸಿ ತಪಾಸಣೆ ನಡೆಸಿದೆ.

ಇರಾನ್‌ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಟ್ರಂಪ್‌ ಆಡಳಿತ ಕೈಗೊಂಡ ಇತ್ತೀಚಿನ ಕ್ರಮಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಲಾಗುತ್ತಿದೆ.ಅಮೆರಿಕದ ಪ್ರಕಾರ, ಎಂ/ಟಿ ಸೆಲೆಸ್ಟಿಯಲ್‌ ಸೀ ಎಂಬ ತೈಲ ಟ್ಯಾಂಕರ್‌ ಇರಾನ್‌ ಬಂದರಿನತ್ತ ತೆರಳಲು ಯತ್ನಿಸುತ್ತಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸಿ ಬೇರೆ ದಿಕ್ಕಿಗೆ ಕಳುಹಿಸಲಾಗಿದೆ.

ಇರಾನ್‌ ಸಾಗಾಣಿಕೆ ಮೇಲೆ ಏಪ್ರಿಲ್‌ ಮಧ್ಯಭಾಗದಲ್ಲಿ ಅಮೆರಿಕ ನಿರ್ಬಂಧ ಹೇರಿದ ಬಳಿಕ ವಾಣಿಜ್ಯ ಹಡಗೊಂದನ್ನು ತಡೆದು ಪರಿಶೀಲಿಸಿರುವ ಐದನೇ ಘಟನೆ ಇದಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಬೆಳವಣಿಗೆ, ಇರಾನ್‌ ವಿರುದ್ಧ ಮರುಸೇನಾ ದಾಳಿ ನಡೆಸುವ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಇತ್ತೀಚೆಗೆ ಘೋಷಿಸಿದ್ದ ಹಿನ್ನೆಲೆಯಲ್ಲೇ ನಡೆದಿದೆ.

ಟ್ರಂಪ್‌ ಅವರುಬಹಳ ದೊಡ್ಡ ಪ್ರಮಾಣದ ದಾಳಿನಡೆಸಲು ಯೋಜಿಸಲಾಗಿತ್ತು, ಆದರೆ ಗಲ್‌್ಫ ಪ್ರದೇಶದ ಮಿತ್ರ ರಾಷ್ಟ್ರಗಳ ಮನವಿಯ ಮೇರೆಗೆ ಮಾತುಕತೆಗಳಿಗೆ ಅವಕಾಶ ನೀಡಲು ಅದನ್ನು ಮುಂದೂಡಲಾಗಿದೆ ಎಂದು ಹೇಳಿದ್ದರು.

ಇದೇ ವೇಳೆ, ಇರಾನ್‌ ಯುದ್ಧದಿಂದ ಹಿಂದೆ ಸರಿಯುವಂತೆ ಟ್ರಂಪ್‌ ಆಡಳಿತದ ಮೇಲೆ ಒತ್ತಡ ಹೇರುವ ಮಸೂದೆಗೆ ಅಮೆರಿಕ ಸೆನೆಟ್‌ನಲ್ಲಿ ಬೆಂಬಲ ಹೆಚ್ಚುತ್ತಿರುವುದಾಗಿ ವರದಿಯಾಗಿದೆ. ಸುಮಾರು ಮೂರು ತಿಂಗಳಿನಿಂದ ಮುಂದುವರಿದಿರುವ ಯುದ್ಧ ಮತ್ತು ಉದ್ವಿಗ್ನತೆಯ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಪೆಟ್ರೋಲ್‌ ದರಗಳ ಏರಿಕೆಯಿಂದ ಅಮೆರಿಕದೊಳಗೂ ರಾಜಕೀಯ ಒತ್ತಡ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

RELATED ARTICLES
spot_img

Latest News