ಬೆಂಗಳೂರು, ಏ.23-ಇಂದು ಬೆಳಗ್ಗೆ ಸರಗಳ್ಳರು ಇಬ್ಬರು ಮಹಿಳೆಯರ ಸರ ಎಗರಿಸಿರುವ ಘಟನೆ ವರದಿಯಾಗಿದೆ.ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ದ ಪಾರ್ಕ್ ಬಳಿ ದಾಕ್ಷಾಯಿಣಿ ಎಂಬುವವರು ಇಂದು ಬೆಳಗ್ಗೆ 6.45 ರ ಸುಮಾರಿನಲ್ಲಿ ನಡೆದು ಹೋಗು ತ್ತಿದ್ದಾಗ ಇಬ್ಬರು ಸರಗಳ್ಳರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ 50 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ದಾಕ್ಷಾಯಿಣಿ ಅವರು ಸಹಾಯಕ್ಕಾಗಿ ಕೂಗಿಕೊಂಡ ರಾದರೂ ಯಾವುದೇ ಪ್ರಯೋಜನ ವಾಗಿಲ್ಲ. ಅಷ್ಟರಲ್ಲಾಗಲೇ ಸರಗಳ್ಳರು ಕಣರೆಯಾಗಿದ್ದರು.ಇದಾದ ಕೇವಲ 15 ನಿಮಿಷದಲ್ಲಿ (7 ಗಂಟೆ ಸುಮಾರಿಗೆ) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಬಿಡಿಎ ಪಾರ್ಕ್ ಸಮೀಪದ ಓಬಿಸಿ ಹಾಸ್ಟೆಲ್ ಬಳಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಸರಗಳ್ಳರು 6 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಆಯಾಯ ಠಾಣಾ ಪೊಲೀಸರು ಸರಗಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
