Homeರಾಜ್ಯಎಸ್‌‍.ಎಂ.ಕೃಷ್ಣ ಚಾರಿಟಬಲ್‌ ಟ್ರಸ್ಟ್‌ಗೆ ರಘುವೀರ್‌ಗೌಡ ಅವರಿಂದ 3 ಲಕ್ಷ ರೂ. ದೇಣಿಗೆ

ಎಸ್‌‍.ಎಂ.ಕೃಷ್ಣ ಚಾರಿಟಬಲ್‌ ಟ್ರಸ್ಟ್‌ಗೆ ರಘುವೀರ್‌ಗೌಡ ಅವರಿಂದ 3 ಲಕ್ಷ ರೂ. ದೇಣಿಗೆ

ಬೆಂಗಳೂರು, ಮೇ 23- ಸಮಾಜ ಸೇವೆ ಹಾಗೂ ಜನಹಿತಕಾರಿ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಿಂತಿರುವ ಎಸ್‌‍.ಎಂ.ಕೃಷ್ಣ ಚಾರಿಟಬಲ್‌ ಟ್ರಸ್ಟ್‌ಗೆ ರಾಜಾಜಿನಗರ ರಘುವೀರ್‌ ಎಸ್‌‍.ಗೌಡ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ 3 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಬೆಂಗಳೂರು ನಗರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ, ಆಧುನಿಕ ಬೆಂಗಳೂರಾಗಿ ರೂಪಿಸಿದ ದೂರದೃಷ್ಟಿ ನಾಯಕತ್ವದ ಧುರೀಣ ಎಸ್‌‍.ಎಂ.ಕೃಷ್ಣ ಅವರ ಮಹತ್ಕಾರ್ಯಗಳನ್ನು ಸರಿಸಿ ಭವಿಷ್ಯದ ಪೀಳಿಗೆಗೆ ಅವರ ಕಾರ್ಯಗಳು ಪ್ರೇರಣೆಯಾಗಲಿ ಎಂಬ ನಿಟ್ಟಿನಲ್ಲಿ ರಘುವೀರ್‌ಗೌಡ ಅವರು ಎಸ್‌‍.ಎಂ.ಕೃಷ್ಣ ಚಾರಿಟಬಲ್‌ ಟ್ರಸ್ಟ್‌ಗೆ 3 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಎಸ್‌‍.ಎಂ.ಕೃಷ್ಣ ನಾಯಕತ್ವದಲ್ಲಿ ಬೆಂಗಳೂರು ಮೂಲಸೌಕರ್ಯ, ತಂತ್ರಜ್ಞಾನ, ಬಂಡವಾಳ ಹೂಡಿಕೆ, ಶಿಕ್ಷಣ ಹಾಗೂ ಜಾಗತಿಕ ಮಾನ್ಯತೆಯಲ್ಲಿ ಅಪಾರ ಬೆಳವಣಿಗೆ ಕಂಡಿತು.

ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಭಾರತದ ಸಿಲಿಕಾನ್‌ ವ್ಯಾಲಿ ಎಂದು ಪ್ರಸಿದ್ಧಿಗೊಂಡಿತು. ಲಕ್ಷಾಂತರ ಜನರಿಗೆ ಅವಕಾಶಗಳ ಕೇಂದ್ರವಾಗಿ ತೆರೆದುಕೊಂಡಿತು. ಅಭಿವೃದ್ಧಿ, ನಾಯಕತ್ವ ಮತ್ತು ಜನಸೇವೆಯ ಅವರ ಆದರ್ಶಗಳು ಮುಂದಿನ ಪೀಳಿಗೆಗಳಿಗೆ ಸದಾ ಪ್ರೇರಣೆಯಾಗಿರಲಿ ಎಂದು ರಘುವೀರ್‌ಗೌಡ ಸರಿಸಿದ್ದಾರೆ.

Raghuveer Gowda donates S.M. Krishna Charitable Trust

RELATED ARTICLES

Latest News