Homeರಾಷ್ಟ್ರೀಯಕಪೂರ್ತಲಾ ಜೈಲಿನಲ್ಲಿ ಘರ್ಷಣೆ: ಮೂವರಿಗೆ ಗಾಯ, ಅಶ್ರುವಾಯು ಪ್ರಯೋಗಿಸಿ ಲಾಠಿಚಾರ್ಜ್‌

ಕಪೂರ್ತಲಾ ಜೈಲಿನಲ್ಲಿ ಘರ್ಷಣೆ: ಮೂವರಿಗೆ ಗಾಯ, ಅಶ್ರುವಾಯು ಪ್ರಯೋಗಿಸಿ ಲಾಠಿಚಾರ್ಜ್‌

ಚಂಡೀಗಢ,ಮೇ.24: ಪಂಜಾಬ್‌ನ ಕಪೂರ್ತಲಾ ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಗಲಾಟೆ ಘರ್ಷಣೆಗೆ ತಿರುಗಿದ ಬಳಿಕ ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿ ಲಾಠಿಚಾರ್ಜ್‌ ನಡೆಸಿದ್ದಾರೆ. ಈ ಘಟನೆಯಲ್ಲಿ ಲಾಠಿಚಾರ್ಜ್‌ ವೇಳೆ ಇಬ್ಬರು ಕೈದಿಗಳಿಗೆ ಗಾಯಗಳಾಗಿದ್ದು, ಮತ್ತೊಬ್ಬ ಕೈದಿಗೆ ಅಶ್ರುವಾಯು ಶೆಲ್‌ ತಗುಲಿ ಗಾಯವಾಗಿದೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ತಡರಾತ್ರಿ ಜೈಲಿನ ಬ್ಲಾಕ್‌‍-4ರಲ್ಲಿ ಕೆಲ ಕೈದಿಗಳ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿ ಜಗಳ ಆರಂಭವಾಗಿದೆ.ಅಧು ನಂತರ ಘರ್ಷಣೆಗೆ ತಿರುಗಿದೆ.
ಜೈಲು ಅಧಿಕಾರಿಗಳು ಪರಿಸ್ಥಿತಿ ಶಾಂತಗೊಳಿಸಲು ಮಧ್ಯಪ್ರವೇಶಿಸಿದರೂ, ಕೆಲವು ಕೈದಿಗಳು ಅಧಿಕಾರಿಗಳೊಂದಿಗೆ ತಳ್ಳಾಟ ನಡೆಸಲು ಮುಂದಾಗಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲ ಕೈದಿಗಳು ಬ್ಯಾರಕ್‌ನಿಂದ ಹೊರಬಂದು ಮೇಲ್ಛಾವಣಿಗೆ ಏರಿದ್ದು, ಕೆಲವರು ಬಟ್ಟೆಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಭಾರೀ ಪ್ರಮಾಣದ ಪೊಲೀಸ್‌‍ ಪಡೆ ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಶ್ರುವಾಯು ಶೆಲ್‌ಗಳು ಮತ್ತು ಲಾಠಿಚಾರ್ಜ್‌ ನಡೆಸಲಾಗಿದೆ.

ಈ ಘಟನೆಯಲ್ಲಿ ಜೈಲು ಸಿಬ್ಬಂದಿ ಅಥವಾ ಪೊಲೀಸ್‌‍ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಾಲಂಧರ್‌ ವಲಯದ ಡಿಐಜಿ ನವೀನ್‌ ಅವರು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜೈಲು ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ.

RELATED ARTICLES

Latest News