Homeಅಂತಾರಾಷ್ಟ್ರೀಯಕೆಂಪು ಬ್ರಾ, ಎನ್‌ವಿಡಿಯಾ ಧ್ವಜ, ರಕ್ತದ ಕಲೆ ಇರುವ AI ಫೋಟೋ ಮೂಲಕ ಜೆನ್ಸನ್ ಹುವಾಂಗ್‌...

ಕೆಂಪು ಬ್ರಾ, ಎನ್‌ವಿಡಿಯಾ ಧ್ವಜ, ರಕ್ತದ ಕಲೆ ಇರುವ AI ಫೋಟೋ ಮೂಲಕ ಜೆನ್ಸನ್ ಹುವಾಂಗ್‌ ಸ್ವಾಗತಿಸಿದ ಟ್ರಂಪ್

ವಾಷಿಂಗ್ಟನ್: ನವೆಂಬರ್ 24: ವಿಶ್ವದ ಪ್ರಮುಖ ಚಿಪ್ ತಯಾರಿಕಾ ಕಂಪನಿಯಾದ ಎನ್‌ವಿಡಿಯಾದ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕಗೊಂಡ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಚಿತ್ರ ಎಐ ಚಿತ್ರವೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರೂತ್ ಸೋಶಿಯಲ್’ನಲ್ಲಿ ಹಂಚಿಕೊಂಡಿರುವ ಈ ಎಐ ಚಿತ್ರದಲ್ಲಿ ಜೆನ್ಸನ್ ಹುವಾಂಗ್ ಕೈಯಲ್ಲಿ ಕೆಂಪು ಬಣ್ಣದ ಬ್ರಾ ಹಿಡಿದುಕೊಂಡಿದ್ದು, ಹಿನ್ನಲೆಯಲ್ಲಿ ಎನ್‌ವಿಡಿಯಾ ಧ್ವಜವಿದೆ. ಅವರ ಮುಖದ ಮೇಲೆ ರಕ್ತದ ಕಲೆಗಳಿದ್ದು, ಸುತ್ತಲೂ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ರಕ್ಷಣೆ ನೀಡುತ್ತಿರುವಂತೆ ಚಿತ್ರಿಸಲಾಗಿದೆ.

2024ರ ಜುಲೈನಲ್ಲಿ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಟ್ರಂಪ್ ಅವರ ಮೇಲೆ ನಡೆದಿದ್ದ ಹತ್ಯೆ ಯತ್ನದ ನಂತರ ಅವರು ರಕ್ತಸಿಕ್ತ ಮುಖದೊಂದಿಗೆ ಮುಷ್ಟಿ ಎತ್ತಿ ನಿಂತಿದ್ದ ಚಿತ್ರವನ್ನು ಈ ಎಐ ಚಿತ್ರ ನೆನಪಿಸುತ್ತದೆ.

ಹುವಾಂಗ್ ಮರುನೇಮಕಕ್ಕೆ ಟ್ರಂಪ್ ಸಂತಸ

ಜೆನ್ಸನ್ ಹುವಾಂಗ್ ಅವರು ನವೆಂಬರ್ 12ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಚೀನಾಕ್ಕೆ ಬೇಹುಗಾರಿಕೆ ನಡೆಸುತ್ತಿರುವ ಶಂಕೆ ಎದುರಿಸುತ್ತಿರುವ ಮಹಿಳೆಯೊಂದಿಗಿನ ಸಂಬಂಧದ ವಿವಾದ ಈ ಬೆಳವಣಿಗೆಗೆ ಕಾರಣವಾಗಿತ್ತು ಎಂದು ವರದಿಯಾಗಿದೆ. ಈ ಪ್ರಕರಣವು ಎನ್‌ವಿಡಿಯಾದ ಆಡಳಿತ ಮಂಡಳಿ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ವಲಯದಲ್ಲೂ ಚರ್ಚೆಗೆ ಕಾರಣವಾಗಿತ್ತು.

ಆದರೆ ಸೋಮವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಎನ್‌ವಿಡಿಯಾ ಆಡಳಿತ ಮಂಡಳಿಯು ಹುವಾಂಗ್ ಅವರನ್ನು ಮತ್ತೆ ಕಂಪನಿಯ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಮಂಡಳಿಯ ಸದಸ್ಯರನ್ನಾಗಿ ನೇಮಿಸಲು ಸರ್ವಾನುಮತದಿಂದ ನಿರ್ಧರಿಸಿತು.

ಟ್ರಂಪ್ ನೇರ ಮಧ್ಯಸ್ಥಿಕೆ?

ಹುವಾಂಗ್ ಅವರನ್ನು ಮತ್ತೆ ನೇಮಿಸುವ ನಿರ್ಧಾರದ ಹಿಂದೆ ತಮ್ಮ ಪಾತ್ರವಿದೆ ಎಂದು ಟ್ರಂಪ್ ಹೇಳಿದ್ದಾರೆ. ಎನ್‌ವಿಡಿಯಾ ಆಡಳಿತ ಮಂಡಳಿಯೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಮಾತುಕತೆ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ. “ಎನ್‌ವಿಡಿಯಾ ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ಅದ್ಭುತವಾದದ್ದು. ಇದು ಸರಿಯಾದ ಮತ್ತು ಸೂಕ್ತ ನಿರ್ಧಾರ” ಎಂದು ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ.

ಹುವಾಂಗ್ ಮರುನೇಮಕದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅಮೆರಿಕದ ಷೇರು ಮಾರುಕಟ್ಟೆಯಲ್ಲೂ ಸಂಚಲನ ಉಂಟಾಗಿದೆ. ಎನ್‌ವಿಡಿಯಾ ಷೇರುಗಳು ಸುಮಾರು ಶೇ.35ರಷ್ಟು ಏರಿಕೆ ಕಂಡರೆ, ತಂತ್ರಜ್ಞಾನ ಆಧಾರಿತ ನಾಸ್ಡಾಕ್ ಸೂಚ್ಯಂಕ ಸುಮಾರು ಶೇ.7ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. ಎನ್‌ವಿಡಿಯಾ ಆಡಳಿತ ಮಂಡಳಿಯ ಅಧ್ಯಕ್ಷ ಹಾರ್ವೆ ಜೋನ್ಸ್ ಅವರು, ಕಂಪನಿಯನ್ನು ಮುನ್ನಡೆಸಲು ಜೆನ್ಸನ್ ಹುವಾಂಗ್ ಅವರೇ ಸೂಕ್ತ ವ್ಯಕ್ತಿ ಎಂದು ತಿಳಿಸಿದ್ದಾರೆ.

RELATED ARTICLES

Latest News