Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-11-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-11-2026)

ನಿತ್ಯ ನೀತಿ : ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಮತ್ತೊಬ್ಬರ ಕೈ ಹಿಡಿಯುವುದನ್ನು ಕಲಿಸುತ್ತದೆಯೇ ವಿನಃ ಕಾಲು ಹಿಡಿಯುವುದನ್ನಲ್ಲ.

ಪಂಚಾಂಗ : ಬುಧವಾರ, 25-11-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಕೃಷ್ಣ / ತಿಥಿ: ಪ್ರತಿಪದಾ / ನಕ್ಷತ್ರ: ರೋಹಿಣಿ / ಯೋಗ: ಶಿವ / ಕರಣ: ಬಾಲವ
ಸೂರ್ಯೋದಯ – ಬೆ.6.22
ಸೂರ್ಯಾಸ್ತ – 05.50
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಲೇವಾದೇವಿ ವ್ಯವಹಾರವನ್ನು ಆಲೋಚನೆ ಮಾಡಿ ಮುಂದುವರೆಸುವುದು ಒಳಿತು.
ವೃಷಭ: ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳ ದಿರುವುದರಿಂದ ಸ್ನೇಹಿತರು ಕೋಪಗೊಳ್ಳಬಹುದು.
ಮಿಥುನ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.

ಕಟಕ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.
ಸಿಂಹ: ಆಪತ್ಕಾಲದಲ್ಲಿ ಮಿತ್ರರಿಂದ ಸಹಾಯ ದೊರೆಯಲಿದೆ.
ಕನ್ಯಾ: ಯಂತ್ರೋಪಕಣ ಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.

ತುಲಾ: ದುಷ್ಟ ಜನರ ಸಹವಾಸದಿಂದ ದೂರವಿರುವುದು ಒಳಿತು.
ವೃಶ್ಚಿಕ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ಧನುಸ್ಸು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.

ಮಕರ: ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.
ಕುಂಭ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.
ಮೀನ: ಉನ್ನತ ಸ್ಥಾನಮಾನ ದೊರೆಯಲಿದೆ. ನಿಮ್ಮ ಕನಸು ನನಸಾಗಲಿದೆ.

RELATED ARTICLES

Latest News