Homeರಾಷ್ಟ್ರೀಯ131 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು

131 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು

President Droupadi Murmu presents 131 Padma awards at Rashtrapati Bhavan

ನವದೆಹಲಿ, ಮೇ 26: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 131 ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಪ್ರಶಸ್ತಿ ಪ್ರದಾನ ಮಾಡಿದರು.
ಐದು ಪದ್ಮವಿಭೂಷಣ, 13 ಪದ್ಮಭೂಷಣ ಹಾಗೂ 113 ಪದಶ್ರೀ ಪ್ರಶಸ್ತಿ ಸೇರಿದಂತೆ 131 ಸಾಧಕರಿಕರಿಗೆ ರಾಷ್ಟ್ರಪತಿ ಭವನದಲ್ಲಿಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಬಾರಿಯ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಒಟ್ಟು 19 ಮಹಿಳೆಯರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಆರು ವಿದೇಶಿಯರು, ಅನಿವಾಸಿ ಭಾರತೀಯರು ಇರುವುದು ವಿಶೇಷವಾಗಿದೆ. ತಮಜೀವಿತಾವಧಿಯಲ್ಲಿ ಸಾಧನೆ ತೋರಿದ 16 ಸಾಧಕರಿಗೆ ಮರಣೋತ್ತರ ಗೌರವ ನೀಡಲಾಗಿದೆ.

ಕಲೆ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಸಾಮಾಜಿಕ ಕಾರ್ಯ, ಕ್ರೀಡೆ, ವ್ಯವಹಾರ, ಕೈಗಾರಿಕೆ ಮತ್ತು ನಾಗರಿಕ ಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ದೇಶದ ಪ್ರಗತಿಗೆ ಶ್ರಮಿಸಿದ ಗಣ್ಯರನ್ನು ಗುರುತಿಸಿ ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸಿ ಪ್ರದಾನ ಮಾಡಿದರು. ಅವರ ಪತ್ನಿ ಹೇಮಾ ಮಾಲಿನಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್‌ ಮತ್ತು ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್‌ ಸೇರಿದಂತೆ 13 ಮಂದಿ ಇತರ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಲ್ಲಿದ್ದರು. ಪದ್ಮ ವಿಭೂಷಣ ಪ್ರಶಸ್ತಿಗಳು; ಧರ್ಮೇಂದ್ರ ಸಿಂಗ್‌ ಡಿಯೋಲ್‌‍, ಕೆ ಟಿ ಥಾಮಸ್‌‍, ಎನ್‌ ರಾಜಮ್‌‍, ಪಿ ನಾರಾಯಣನ್‌‍, ವಿ.ಎಸ್‌‍. ಅಚ್ಯುತಾನಂದನ್‌ ಅವರಿಗೆ ಪದವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮಭೂಷಣ;
ಅಲ್ಕಾ ಯಾಜ್ಞಕ್‌‍, ಭಗತ್‌ ಸಿಂಗ್‌ ಕೋಶ್ಯಾರಿ, ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ, ಮಮ್ಮುಟ್ಟಿ, ಡಾ. ನೋರಿ ದತ್ತಾತ್ರೇಯುಡು, ಪಿಯೂಷ್‌ ಪಾಂಡೆ, ಎಸ್‌‍ ಕೆ ಎಂ ಮೈಲಾನಂದನ್‌‍, ಶತಾವಧಾನಿ ಆರ್‌ ಗಣೇಶ್‌‍, ಶಿಬು ಸೊರೆನ್‌‍, ಉದಯ್‌ ಕೊಟಕ್‌‍, ವಿ. ಕೆ. ಮಲ್ಹೋತ್ರಾ, ವೆಲ್ಲಪ್ಪಳ್ಳಿ ನಟೇಶನ್‌‍, ವಿಜಯ್‌ ಅಮೃತರಾಜ್‌ ಅವರಿಗೆ ಪದಭೂಷಣ ಪ್ರಶಸ್ತಿಗಳು ಸಂದಿವೆ.

ಪದ್ಮಶ್ರೀ ಪ್ರಶಸ್ತಿಗಳು;
ಮುತ್ತುನಾಯಗಂ, ಅನಿಲ್‌ ಕುಮಾರ್‌ ರಸ್ತೋಗಿ, ಅಂಕೇಗೌಡ ಎಂ., ಅರ್ಮಿಡಾ ಫೆರ್ನಾಂಡಿಸ್‌‍, ಅರವಿಂದ್‌ ವೈದ್ಯ, ಅಶೋಕ್‌ ಖಾಡೆ, ಅಶೋಕ್‌ ಕುಮಾರ್‌ ಸಿಂಗ್‌‍, ಅಶೋಕ್‌ ಕುಮಾರ್‌ ಹಲ್ದಾರ್‌ ಬಲದೇವ್‌ ಸಿಂಗ್‌‍, ಭರತ್‌ ಸಿಂಗ್‌ ಭಾರ್ತಿ ಸೇರಿ 113 ಮಂದಿಗೆ ಪದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

RELATED ARTICLES

Latest News