Homeಬೆಂಗಳೂರುವಿದೇಶದಿಂದ ಪಾರ್ಸಲ್‌ನಲ್ಲಿ ಬಂದ 2.32 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

ವಿದೇಶದಿಂದ ಪಾರ್ಸಲ್‌ನಲ್ಲಿ ಬಂದ 2.32 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

Hydro cannabis worth Rs 2.32 crore seized in parcel from abroad

ಬೆಂಗಳೂರು, ಮೇ 26-ನಗರದ ಅಂತರರಾಷ್ಟ್ರೀಯ ಅಂಚೆ ಕಚೇರಿಗೆ ವಿದೇಶದಿಂದ ಅನುಮಾನಾಸ್ಪದ ಪಾರ್ಸಲ್‌ ಬಂದಿರುವ ಬಗ್ಗೆ ಮಾಹಿತಿ ಪಡೆದು ಸಿಸಿಬಿಯ ಮಾದಕ ವಸ್ತು ನಿಗ್ರಹದಳ ಪೊಲೀಸರು ದಾಳಿ ಮಾಡಿ 2.32 ಕೋಟಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕೆಂಪೇಗೌಡ ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿರುವ ಅಂತರರಾಷ್ಟ್ರೀಯ ಅಂಚೆ ಕಚೇರಿಗೆ ನಿಷೇಧಿತ ಮಾದಕ ವಸ್ತುಗಳಿರುವ ಮೂರು ಬಾಕ್‌್ಸಗಳು ಬಂದಿರುವುದಾಗಿ ಕಸ್ಟಮ್ಸೌ ಅಧಿಕಾರಿಗಳು ಸಿಸಿಬಿಗೆ ಮಾಹಿತಿಯನ್ನು ನೀಡಿರುತ್ತಾರೆ.

ಈ ಮಾಹಿತಿಯನ್ನಾಧರಿಸಿ ಸಿಸಿಬಿ ಪೊಲೀಸರು ಅಂಚೆ ಕಚೇರಿಯ ಮೇಲೆ ದಾಳಿ ಮಾಡಿ ವಿದೇಶದಿಂದ ಬಂದಿದ್ದ 3 ಕೆಜಿ 312 ಗ್ರಾಂನ ನಿಷೇಧಿತ ಮಾದಕ ವಸ್ತು ಹೈಡ್ರೋಗಾಂಜಾವಿರುವ ಮೂರು ಬಾಕ್‌್ಸಗಳನ್ನು ವಶಪಡಿಸಿಕೊಂಡಿದ್ದು, ಇದರ ಮಾರುಕಟ್ಟೆ ಮೌಲ್ಯ 2.32 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ವಿದೇಶದಿಂದ ಮಾದಕ ವಸ್ತುಗಳಿರುವ ಬಾಕ್ಸ್ ಗಳನ್ನು ತರಿಸಿಕೊಂಡಿದ್ದ ಮೂವರು ವ್ಯಕ್ತಿಗಳ ಪತ್ತೆಗಾಗಿ ಕೆಂಪೇಗೌಡ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

8 ಲಕ್ಷ ಮೌಲ್ಯದ ಗಾಂಜಾ ಜಪ್ತಿ:
ಜೆಬಿನಗರ ಠಾಣೆ ಪೊಲೀಸರು ಹೊರ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿ 8 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.ಟನಲ್‌ ರಸ್ತೆಯಲ್ಲಿ ಕೇರಳ ರಾಜ್ಯದ ನೋಂದಣಿಯಿರುವ ಕಾರೊಂದರಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಠಾಣೆಯಲ್ಲಿ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ಹೊರ ರಾಜ್ಯದ ಇಬ್ಬರು ವ್ಯಕ್ತಿಗಳನ್ನು 27 ಗ್ರಾಂ ಎಂಡಿಎಂಎ, 1 ಕೆಜಿ 272 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರಿನ ಸಮೇತ ಬಂಧಿಸಲಾಗಿದ್ದು, ಇವುಗಳ ಒಟ್ಟು ಮೌಲ್ಯ 8 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

RELATED ARTICLES

Latest News