Homeರಾಜ್ಯದೆಹಲಿಯಲ್ಲಿ ಬೀಡುಬಿಟ್ಟ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು

ದೆಹಲಿಯಲ್ಲಿ ಬೀಡುಬಿಟ್ಟ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು

More than 20 Congress MLAs camped in Delhi

ಬೆಂಗಳೂರು, ಮೇ 26- ಸಂಪುಟ ಪುನರ್‌ರಚನೆಯಾಗಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕೆಲವರು ಕುರ್ಚಿ ಗಿಟ್ಟಿಸಿಕೊಳ್ಳಲು ದೆಹಲಿಯತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವು ಸಚಿವರು ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ ಬುಲಾವ್‌ ಮೇರೆಗೆ ತಮೊಂದಿಗೆ ಕೆಲವು ಸಚಿವರನ್ನು ಕರೆದುಕೊಂಡು ದೆಹಲಿಗೆ ತೆರಳಿದ್ದರು. ಅವರ ಬೆನ್ನ ಹಿಂದೆಯೇ ಇನ್ನೂ ಕೆಲವು ಸಚಿವರು ವಿಮಾನ ಹೇರಿ ದೆಹಲಿ ತಲುಪಿದ್ದು, ಭೌಗೋಳಿಕ ಆಧ್ಯತೆ, ಸಾಮಾಜಿಕ ನ್ಯಾಯ, ಜಾತಿವಾರು ಆಧ್ಯತೆ ಮೇಲೆ ತಮನ್ನು ಸಂಪುಟದಲ್ಲಿ ಉಳಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.

ಇನ್ನೂ ಹಿರಿಯ ಶಾಸಕರು ಸಂಪುಟ ಪುನರ್‌ ರಚನೆಯಾಗಬೇಕು. ತಮಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಶಾಸಕರಾದ ಟಿ.ಬಿ.ಜಯಚಂದ್ರ. ಪಿ.ಎಮ್‌.ಅಶೋಕ್‌, ಪುಟ್ಟರಂಗ ಶೆಟ್ಟಿ, ನಾರಾಯಣಸ್ವಾಮಿ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

RELATED ARTICLES
spot_img

Latest News