Homeರಾಷ್ಟ್ರೀಯಅತ್ಯಾಚಾರ ಪ್ರಕರಣದಲ್ಲಿ ಆಪ್‌ ಶಾಸಕನಿಗೆ ಜಾಮೀನು ಮಜೂರು

ಅತ್ಯಾಚಾರ ಪ್ರಕರಣದಲ್ಲಿ ಆಪ್‌ ಶಾಸಕನಿಗೆ ಜಾಮೀನು ಮಜೂರು

Punjab: HC grants bail to AAP MLA Pathanmajra in rape case

ಚಂಡೀಗಢ, ಮೇ 31-ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಪಂಜಾಬ್‌ನ ಆಡಳಿತಾರೂಢ ಆಮ್‌ ಆದಿ ಪಕ್ಷದ ಶಾಸಕ ಹರ್ಮೀತ್‌ ಸಿಂಗ್‌ ಪಠಾಣ್‌ಮಜಾ ಅವರಿಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯವು ಪಠಾಣ್‌ಮಜ್ರಾ ಅವರು ತಮ ಪಾಸ್‌‍ಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು ಹಾಗೂ ತಿಂಗಳಿಗೆ ಎರಡು ಬಾರಿ ಸಂಬಂಧಿತ ಪೊಲೀಸ್‌‍ ಠಾಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ.ಪಟಿಯಾಲಾದ ಸನೌರ್‌ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಿರುವ ಪಠಾಣ್‌ಮಜ್ರಾಅವರನ್ನು ಕಳೆದ ಮಾ.25ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಲಾಗಿತ್ತು.

ಕಳೆದ ವರ್ಷದ ಸೆ.2ರಿಂದ ಅವರು ಪರಾರಿಯಾಗಿದ್ದರು. ಅವರನ್ನು ಬಂಧಿಸಲು ಪಂಜಾಬ್‌ ಪೊಲೀಸರು ಹರಿಯಾಣದ ಕರ್ಣಾಲ್‌ಗೆ ತೆರಳಿದ ವೇಳೆ, ಪೊಲೀಸ್‌‍ ವಶದಿಂದ ತಪ್ಪಿಸಿಕೊಂಡಿದ್ದರು.2025ರ ಸೆಪ್ಟೆಂಬರ್‌ 1ರಂದು ಚಂಡೀಗಢದ ಸಿವಿಲ್‌ ಲೈನ್‌್ಸಪೊಲೀಸ್‌‍ ಠಾಣೆಯಲ್ಲಿ ಅವರ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್‌ ಬೆದರಿಕೆ ಆರೋಪಗಳಡಿ ಪ್ರಕರಣ ದಾಖಲಾಗಿತ್ತು.

ಜಿರಕ್‌ಪುರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿತ್ತು. ಪಠಾಣ್‌ಮಜ್ರಾ ಅವರು ತಮನ್ನು ವಿಚ್ಛೇದಿತ ವ್ಯಕ್ತಿ ಎಂದು ತಪ್ಪಾಗಿ ಪರಿಚಯಿಸಿಕೊಂಡು ತನ್ನೊಂದಿಗೆ ಸಂಬಂಧ ಬೆಳೆಸಿದ್ದು, ಈಗಾಗಲೇ ವಿವಾಹಿತರಾಗಿದ್ದರೂ 2021ರಲ್ಲಿ ತನ್ನನ್ನು ಮದುವೆಯಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

ದೂರಿನಲ್ಲಿ, 2013-14ರಲ್ಲಿ ಫೇಸ್‌‍ಬುಕ್‌‍ ಮೂಲಕ ಪಠಾಣ್‌ಮಜ್ರಾ ಅವರ ಪರಿಚಯವಾಗಿದ್ದು, ಬಳಿಕ 2021ರ ಆಗಸ್ಟ್‌ನಲ್ಲಿ ಇಬ್ಬರೂ ವಿವಾಹವಾಗಿದ್ದಾಗಿ ಮಹಿಳೆ ತಿಳಿಸಿದ್ದಾರೆ.ಆದರೆ 2022ರ ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಅವರು ಸಲ್ಲಿಸಿದ್ದ ಅಫಿಡವಿಟ್‌ ನೋಡಿದ ನಂತರವೇ, ಪಠಾಣ್‌ಮಜ್ರಾ ಅವರ ಮೊದಲ ವಿವಾಹ ಇನ್ನೂ ಜಾರಿಯಲ್ಲಿದೆ ಎಂಬುದು ತಿಳಿಯಿತು ಎಂದು ಮಹಿಳೆ ಆರೋಪಿಸಿದ್ದರು.

ಇನ್ನೊಂದೆಡೆ, ಪಠಾಣ್‌ಮಜ್ರಾ ಪರ ವಕೀಲರು ಈ ಆರೋಪಗಳು ರಾಜಕೀಯ ದ್ವೇಷದಿಂದ ಪ್ರೇರಿತವಾಗಿದ್ದು, ಅವರನ್ನು ರಾಜಕೀಯ ಕಾರಣಗಳಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು.

ನ್ಯಾಯಾಲಯ ತನ್ನ ಆದೇಶದಲ್ಲಿ, 2013-14ರಿಂದ ಸುಮಾರು ಒಂದು ದಶಕದ ಕಾಲ ದೂರುದಾರ್ತಿ ಮತ್ತು ಅರ್ಜಿದಾರರ ನಡುವೆ ದೈಹಿಕ ಸಂಬಂಧವಿದ್ದುದನ್ನು ಒಪ್ಪಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ, ದೂರುದಾರ್ತಿ ಅವರ ಮೊದಲ ವಿವಾಹದ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲವೇ ಎಂಬುದು ಚರ್ಚಾಸ್ಪದ ವಿಷಯವಾಗಿದೆ. ಅಲ್ಲದೆ, ಈ ದೀರ್ಘಕಾಲದ ಸಂಬಂಧವು ಅವರ ಒಪ್ಪಿಗೆಯಿಲ್ಲದೆ ನಡೆದಿತ್ತೆ ಅಥವಾ ಕಾನೂನುಬದ್ಧ ಪತ್ನಿ ಎಂಬ ನಂಬಿಕೆಯ ಆಧಾರದ ಮೇಲೆ ಒಪ್ಪಿಗೆ ನೀಡಲಾಗಿತ್ತೆ ಎಂಬುದೂ ವಿಚಾರಣೆಗೆ ಒಳಪಡುವ ವಿಷಯವಾಗಿದೆ ಎಂದು ಹೇಳಿದೆ.
ಪಠಾಣ್‌ಮಜ್ರಾ ಅವರು ಹಿಂದೆ ಪರಾರಿಯಾಗಿದ್ದ ಸಂಗತಿ ಮಾತ್ರ ಜಾಮೀನು ನಿರಾಕರಿಸಲು ಸಾಕಷ್ಟು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅವರು ಹಿಂದೆ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಂಡು ವಿದೇಶಕ್ಕೂ ತೆರಳಿದ್ದ ಸಂಗತಿ ನಿರಾಕರಿಸಲಾಗದು. ಆದಾಗ್ಯೂ, ಅವರು ಮರಳಿ ಬಂದು 2026ರ ಮಾರ್ಚ್‌ 24ರಂದು ಬಂಧಿತರಾಗಿದ್ದಾರೆ. ಈ ಮೊದಲು ಅವರನ್ನು ಘೋಷಿತ ಪರಾರಿ ಎಂದು ಘೋಷಿಸಲಾಗಿತ್ತು ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಇನ್ನೂ ಬಾಕಿಯಿವೆ.

ಸೂಕ್ತ ಜಾಮೀನು ಬಾಂಡ್‌ ಮತ್ತು ಶ್ಯೂರಿಟಿ ಸಲ್ಲಿಸಿದ ನಂತರ ಪಠಾಣ್‌ಮಜ್ರಾ ಅವರನ್ನು ನಿಯಮಿತ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ.ಪಾಸ್‌‍ಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸುವ ಷರತ್ತಿಗೂ ಒಳಪಟ್ಟಿತ್ತು.

RELATED ARTICLES

Latest News