Homeಜಿಲ್ಲಾ ಸುದ್ದಿಗಳುಸಾಲದ ಬಾಧೆ ತಾಳಲಾರದೆ ಪತ್ನಿ ಮತ್ತು ಮಗನನ್ನು ಕೊಂದು ವ್ಯಾಪಾರಿ ಆತ್ಮಹತ್ಯೆ

ಸಾಲದ ಬಾಧೆ ತಾಳಲಾರದೆ ಪತ್ನಿ ಮತ್ತು ಮಗನನ್ನು ಕೊಂದು ವ್ಯಾಪಾರಿ ಆತ್ಮಹತ್ಯೆ

Mandya : Businessman commits suicide after killing wife and son

ಮಂಡ್ಯ, ಜೂ.10- ಆರ್ಥಿಕ ಸಂಕಷ್ಟ ಹಾಗೂ ಸಾಲದ ಒತ್ತಡದಿಂದ ಮನನೊಂದ ವ್ಯಕ್ತಿಯೊಬ್ಬ ಪತ್ನಿ ಮತ್ತು ಮಗನನ್ನು ಉಸಿರುಗಟ್ಟಿಸಿ ಕೊಲೆಗೈದು, ತಾನೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ನಗರದ ನೆಹರುನಗರದಲ್ಲಿ ನಡೆದಿದೆ.

ಬಟ್ಟೆ ವ್ಯಾಪಾರ ಮಾಡುತ್ತಿದ್ದ ಪ್ರಭಾಕರ್‌ (65) ಎಂಬಾತ ಪತ್ನಿ ಜ್ಯೋತಿ (55) ಹಾಗೂ ಮಗ ಸಂತೋಷ್‌ (30) ನನ್ನು ನಿನ್ನೆ ಬೆಳಗಿನ ಜಾವ 3.30ರ ಸುಮಾರಿಗೆ ರೂಮಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ರೂಮಿನ ಬಾಗಿಲು ಹಾಕಿ ಬಳಿಕ ಮನೆಯಿಂದ ತನ್ನ ಬಟ್ಟೆ ಅಂಗಡಿಗೆ ಹೋಗಿ ಮುಂಜಾನೆಯೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್‌ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಬೆಳಗಿನ ಜಾವ 3.30ಕ್ಕೆ ಈ ಕೃತ್ಯ ನಡೆದಿದ್ದರೂ, ಮನೆಯಲ್ಲಿದ್ದ ಸೊಸೆಗೆ ಈ ವಿಷಯ ಗೊತ್ತೇಯಾಗಿಲ್ಲ. ಎಂದಿನಂತೆ ನಿನ್ನೆ ಬೆಳಗ್ಗೆ ಸೊಸೆ ತಿಂಡಿ ಸಿದ್ಧಪಡಿಸಿ ಅತ್ತೆಯನ್ನು ಎಬ್ಬಿಸಲು ಕೋಣೆಗೆ ಹೋದಾಗಲೇ ಪತಿ ಹಾಗೂ ಅತ್ತೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಇವರಿಬ್ಬರು ಯಾವ ರೀತಿ ಮೃತಪಟ್ಟಿದ್ದಾರೆಂಬುವುದು ಕಂಡು ಬಂದಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಮಾವ ಬಟ್ಟೆ ಅಂಗಡಿಯಲ್ಲಿ ಆತಹತ್ಯೆ ಮಾಡಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಸೊಸೆ ಅಘಾತಕ್ಕೊಳಗಾಗಿದ್ದಾರೆ.ಪತ್ನಿ ಜ್ಯೋತಿಯನ್ನ ವೇಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿದ್ದ ಪ್ರಭಾಕರ್‌, ಈ ವೇಳೆ ಅಲ್ಲಿಗೆ ಬಂದ ಮಗ ಸಂತೋಷ್‌ನನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸಾಲದ ಒತ್ತಡದಿಂದಲೇ ಪತ್ನಿ, ಮಗನನ್ನು ಕೊಲೆ ಮಾಡಿರುವುದಾಗಿ ಪ್ರಭಾಕರ್‌ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾನೆ.ಬಡ್ಡಿ ಕಟ್ಟಲಾಗದೆ ತೀವ್ರ ಮನನೊಂದಿದ್ದ ಬಟ್ಟೆ ವ್ಯಾಪಾರಿ ಪ್ರಭಾಕರ್‌, ಸರ್ಕಾರ ಉಚಿತ ಬಸ್‌‍ ಸೌಲಭ್ಯ ಕಲ್ಪಿಸಿರುವುದರಿಂದ ವ್ಯಾಪಾರ ಕಡಿಮೆಯಾಗಿದೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ.

ಇದರಿಂದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ, ಖಾಸಗಿ ೈನಾನ್‌್ಸನವರು ಸಾಲ ಕಟ್ಟದಿದ್ದರೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು. ಹಾಗಾಗಿ ಮನನೊಂದಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News