Homeಮನರಂಜನೆಹಿರಿಯ ನಟ ದೊಡ್ಡಣ್ಣ ಅವರ ನಿಧನದ ಸುಳ್ಳು ಸುದ್ದಿ ವೈರಲ್‌

ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಸುಳ್ಳು ಸುದ್ದಿ ವೈರಲ್‌

Fake news of veteran actor Doddanna's death goes viral

ಬೆಂಗಳೂರು,ಜೂ.12- ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ, ಈ ವದಂತಿಗೆ ಸ್ವತಃ ದೊಡ್ಡಣ್ಣ ಅವರೇ ತೆರೆ ಎಳೆದಿದ್ದು, ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ, ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಫೇಸ್ಬುಕ್‌ನ ಪಬ್ಲಿಕ್‌ ಫ್ರೆಂಡ್‌ ಪುಟದಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಪೋಸ್ಟರ್‌ ಹಂಚಿಕೊಳ್ಳಲಾಗಿತ್ತು. ದೊಡ್ಡಣ್ಣ ಇನ್ನಿಲ್ಲ ಎಂಬ ಈ ಎಡಿಟೆಡ್‌ ಪೋಸ್ಟ್‌ ನೋಡಿ ಅಭಿಮಾನಿಗಳು ಮತ್ತು ಆಪ್ತರು ಆತಂಕಕ್ಕೊಳಗಾಗಿದ್ದರು. ಆದರೆ ನಟ ದೊಡ್ಡಣ್ಣ ಅವರು ಆರಾಮಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ನೂರು ವರ್ಷ ಇರ್ತೀನಿ:
ಸುದ್ದಿ ತಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ದೊಡ್ಡಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಸಂಪೂರ್ಣವಾಗಿ ಆರಾಮಾಗಿದ್ದೇನೆ. ಮನೆಯಲ್ಲಿ ಟೀ ಕುಡಿಯುತ್ತಾ ಟಿವಿ ನೋಡುತ್ತಿದ್ದೇನೆ. ನನಗೇನೂ ಆಗಿಲ್ಲ. ನಿಮೆಲ್ಲರ ಆಶೀರ್ವಾದದಿಂದ ನೂರು ವರ್ಷ ಇರ್ತೀನಿ. ಇಷ್ಟೊಂದು ಸಲ ಸಾಯಿಸ್ತಾರೆ? ನಾನು ಚೆನ್ನಾಗಿದ್ದೀನಿ ಎಂದು ಹೇಳಿ ನಕ್ಕುಬಿಟ್ಟರು.

ರಾತ್ರಿಯೇ ಶೂಟಿಂಗ್‌ ಮುಗಿಸಿ ಮನೆಗೆ ಬಂದಿದ್ದ ದೊಡ್ಡಣ್ಣ, ಬೆಳಿಗ್ಗೆಯಿಂದ ಸಾವಿರಾರು ಫೋನ್‌ ಕರೆಗಳು ಬರುತ್ತಿರುವುದನ್ನು ತಿಳಿಸಿದರು. ನನಗೆ ಫೋನ್‌ ಕರೆಗಳೇ ಬರುತ್ತಿವೆ. ಯಾರೋ ಅವಿವೇಕಿಗಳು ನನ್ನ ನಿಧನದ ಪೋಸ್ಟ್‌ ಮಾಡಿದ್ದಾರೆ. ಅಂಥವರಿಗೆ ಬೆಂಡತ್ತಿ ಶಿಕ್ಷೆ ಕೊಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾವು ವಿಡಿಯೋ ಮೂಲಕವೂ ಸ್ಪಷ್ಟನೆ ನೀಡಿದ್ದು, ನಾನು ಚೆನ್ನಾಗಿದ್ದೇನೆ. ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಮತ್ತು ಶೇರ್‌ ಮಾಡಬೇಡಿ. ಇದೊಂದು ದೊಡ್ಡ ವಿಕೃತಿ ಎಂದು ಹೇಳಿದ್ದಾರೆ.
ಹಿರಿಯ ಕಲಾವಿದರ ಬಗ್ಗೆ ಪದೇ ಪದೇ ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಕೂಡ ಆಗ್ರಹಿಸಿದ್ದಾರೆ.

ಈ ಘಟನೆಯಿಂದ ಸ್ಯಾಂಡವುಡ್‌ನ ಹಲವಾರು ಹಿರಿಯರು ಬೇಸರ ವ್ಯಕ್ತಪಡಿಸಿದ್ದು, ಇಂತಹ ನಕಲಿ ಸುದ್ದಿಗಳು ಕಲಾವಿದರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ.

RELATED ARTICLES
spot_img

Latest News