Homeರಾಷ್ಟ್ರೀಯನನ್ನ ಮೇಲೆ ಒತ್ತಡ ಹಾಕಿ 'ಕೇಸರಿ ಭಯೋತ್ಪಾದನೆ' ಎಂದು ಹೇಳಿಸಿತ್ತು ಕಾಂಗ್ರೆಸ್ ಹೈಕಮಾಂಡ್ : ಶಿಂಧೆ

ನನ್ನ ಮೇಲೆ ಒತ್ತಡ ಹಾಕಿ ‘ಕೇಸರಿ ಭಯೋತ್ಪಾದನೆ’ ಎಂದು ಹೇಳಿಸಿತ್ತು ಕಾಂಗ್ರೆಸ್ ಹೈಕಮಾಂಡ್ : ಶಿಂಧೆ

Congress high command pressured me and called me 'saffron terrorism': Shinde

ನವದೆಹಲಿ,ಜೂ.15- ದೇಶದಲ್ಲಿ ಆರ್‌ಎಸ್‌‍ಎಸ್‌‍ ಮತ್ತು ಬಿಜೆಪಿಯವರು ಕೇಸರಿ ಭಯೋತ್ಪಾದನೆ ಹರಡುತ್ತಿದ್ದಾರೆ ಎಂದು ಹೇಳಿದ್ದ ಕೇಂದ್ರದ ಮಾಜಿ ಗೃಹಸಚಿವ ಸುಶೀಲ್‌ಕುಮಾರ್‌ ಶಿಂಧೆ ಈಗ ಉಲ್ಟಾ ಹೊಡೆದಿದ್ದಾರೆ.

ಇದು ನಾನು ವೈಯಕ್ತಿಕವಾಗಿ ನೀಡಿದ ಹೇಳಿಕೆಯಾಗಿರಲಿಲ್ಲ ಬದಲಿಗೆ ಕಾಂಗ್ರೆಸ್‌‍ ಪಕ್ಷ ನನ್ನ ಮೇಲೆ ಒತ್ತಡ ಹಾಕಿ ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ ಬೆಂಬಲಿಗರು ದೇಶದಲ್ಲಿ ಕೇಸರಿ ಭಯೋತ್ಪಾದನೆ ಸೃಷ್ಟಿಸುತ್ತಿದ್ದಾರೆ ಎಂದು ನನ್ನ ಮೇಲೆ ಒತ್ತಡ ಹಾಕಿ ಹೇಳಿಸಿದ್ದರೂ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ತಮ ಆತಕಥೆಯಾದ ಸತಿ ಅನ್‌್ಸಸತಿ ಕೃತಿಯಲ್ಲಿ, 2013ರ ಜೈಪುರ ಚಿಂತನ ಶಿಬಿರದಲ್ಲಿ ತಾವು ನೀಡಿದ್ದ ಕೇಸರಿ ಭಯೋತ್ಪಾದನೆ ಕುರಿತ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.2013ರಲ್ಲಿ ಗೃಹ ಸಚಿವರಾಗಿದ್ದಾಗ, ಆರ್‌ಎಸ್‌‍ಎಸ್‌‍ ಮತ್ತು ಬಿಜೆಪಿಯವರು ದೇಶದಲ್ಲಿ ಕೇಸರಿ ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ ಎಂಬ ಹೇಳಿಕೆಯನ್ನು ತಾವು ನೀಡಿದ್ದರು. ಆದರೆ ಇದು ಸ್ವಯಂಪ್ರೇರಿತವಾಗಿ ನೀಡಿದ ಹೇಳಿಕೆಯಾಗಿರಲಿಲ್ಲ ಎಂದು ಶಿಂಧೆ ಈಗ ಒಪ್ಪಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಪಕ್ಷದ ನಾಯಕತ್ವವು ತಮಗೆ ನೀಡಿದ ನಿರ್ದೇಶನದ ಮೇರೆಗೆ ತಾವು ಆ ಹೇಳಿಕೆಯನ್ನು ನೀಡಬೇಕಾಯಿತು ಎಂದು ಶಿಂಧೆ ತಮ ಪುಸ್ತಕದಲ್ಲಿ ಬರೆದಿದ್ದಾರೆ. ಆ ಹೇಳಿಕೆಯನ್ನು ನೀಡಲು ತಮಗೆ ಇಷ್ಟವಿರಲಿಲ್ಲ ಎಂಬ ಸುಳಿವನ್ನು ಅವರು ತಮ ಆತಕಥೆಯಲ್ಲಿ ನೀಡಿದ್ದಾರೆ.

ಸುಶೀಲ್‌ಕುಮಾರ್‌ ಶಿಂಧೆ ಸೇರಿದಂತೆ ಕಾಂಗ್ರೆಸ್‌‍ನ ಕೆಲವು ನಾಯಕರು ಹಿಂದೂ ಸಂಘಟನೆಗಳ ಚಟುವಟಿಕೆಗಳನ್ನು ಉಲ್ಲೇಖಿಸಲು ಕೇಸರಿ ಭಯೋತ್ಪಾದನೆ ಅಥವಾ ಹಿಂದೂ ಭಯೋತ್ಪಾದನೆ ಎಂಬ ಪದಗಳನ್ನು ಬಳಸಿದ್ದರು.

ಈ ಹೇಳಿಕೆಯು ನಂತರದ ದಿನಗಳಲ್ಲಿ ರಾಜಕೀಯವಾಗಿ ಭಾರೀ ವಿವಾದಕ್ಕೆ ಕಾರಣವಾಗಿತ್ತು ಮತ್ತು ಬಿಜೆಪಿ ಈ ವಿಚಾರವನ್ನು ಕಾಂಗ್ರೆಸ್‌‍ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಸುಶೀಲ್‌ಕುಮಾರ್‌ ಶಿಂಧೆ ಅವರು ಸಂಘ ಪರಿವಾರ ಮತ್ತು ಬಿಜೆಪಿ ತಮ ಶಿಬಿರಗಳಲ್ಲಿ ಕೇಸರಿ ಭಯೋತ್ಪಾದನೆ ಹರಡುತ್ತಿವೆ ಎಂದು ಆರೋಪಿಸಿದ್ದರು. ಇದು ಆ ಸಮಯದಲ್ಲಿ ಭಾರೀ ರಾಜಕೀಯ ವಿವಾದವನ್ನು ಸೃಷ್ಟಿಸಿತ್ತು.

ಈ ಹೇಳಿಕೆಯು ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ನಿಂದ ತೀವ್ರ ವಿರೋಧ ಎದುರಿಸಿತು. ತರುವಾಯ ಶಿಂಧೆ ಅವರು ತಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರೂ, ಅದು ರಾಜಕೀಯವಾಗಿ ಬಹಳ ಚರ್ಚೆಗೊಳಗಾಯಿತು. ಕೇಸರಿ ಭಯೋತ್ಪಾದನೆ ಪದಬಳಕೆ ಮತ್ತು ಕಾಂಗ್ರೆಸ್‌‍ ಪಕ್ಷದ ಮೇಲಾದ ದುಷ್ಪರಿಣಾಮ ಭಾರತೀಯ ರಾಜಕೀಯ ಇತಿಹಾಸದಲ್ಲಿ ಕೇಸರಿ ಭಯೋತ್ಪಾದನೆ ಎಂಬ ಪದಗುಚ್ಛವು ಅತ್ಯಂತ ವಿವಾದಾತಕವಾಗಿ ಉಳಿದುಕೊಂಡಿದೆ.

ಈ ಪದವು ಕೇವಲ ರಾಜಕೀಯ ಚರ್ಚೆಯಲ್ಲದೆ, ಒಂದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌‍ ಪಕ್ಷದ ವರ್ಚಸ್ಸಿನ ಮೇಲೆ ಮತ್ತು ಮತ ಬ್ಯಾಂಕ್‌ ಮೇಲೆ ಗಂಭೀರ ಪರಿಣಾಮ ಬೀರಿದ ಅಂಶವಾಗಿದೆ.
2013ರ ಜನವರಿಯಲ್ಲಿ ಜೈಪುರದಲ್ಲಿ ನಡೆದ ಕಾಂಗ್ರೆಸ್‌‍ನ ಚಿಂತನ ಶಿಬಿರದಲ್ಲಿ, ಅಂದಿನ ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್‌ ಶಿಂಧೆ ಅವರು ಆರ್‌ಎಸ್‌‍ಎಸ್‌‍ ಮತ್ತು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಆರ್‌ಎಸ್‌‍ಎಸ್‌‍ ಮತ್ತು ಬಿಜೆಪಿ ತಮ ತರಬೇತಿ ಶಿಬಿರಗಳ ಮೂಲಕ ಕೇಸರಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿವೆ. ದೇಶದಲ್ಲಿ ಕೋಮುಗಲಭೆಗಳನ್ನು ಪ್ರಚೋದಿಸುತ್ತಿವೆ ಎಂದು ಟೀಕಿಸಿದ್ದರು. ಆಗಿನ ಯುಪಿಎ ಸರ್ಕಾರವು ಮುಸ್ಲಿಂ ಮತದಾರರನ್ನು ಓಲೈಸಲು ಮತ್ತು ಆರ್‌ಎಸ್‌‍ಎಸ್‌‍ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸಲು ಈ ಅಸ್ತ್ರವನ್ನು ಬಳಸಿಕೊಂಡಿತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು.

ಕಾಂಗ್ರೆಸ್‌‍ಗೆ ರಾಜಕೀಯ ಹೊಡೆತ
ಈ ಹೇಳಿಕೆಯು ಕಾಂಗ್ರೆಸ್‌‍ ಪಕ್ಷಕ್ಕೆ ಹಲವಾರು ರೀತಿಯಲ್ಲಿ ಮುಳುವಾಯಿತು. ದೇಶದ ಬಹುಸಂಖ್ಯಾತ ಮತದಾರರಲ್ಲಿ, ಕಾಂಗ್ರೆಸ್‌‍ ಪಕ್ಷವು ಮತದಾರರ ಓಲೈಕೆ ಮಾಡುತ್ತಿದೆ ಮತ್ತು ಹಿಂದೂ ಧರ್ಮದ ವಿರುದ್ಧ ನಿಲುವು ಹೊಂದಿದೆ ಎಂಬ ಭಾವನೆ ಬಲಗೊಳ್ಳಲು ಇದು ಕಾರಣವಾಯಿತು.

ಬಿಜೆಪಿಗೆ ಪ್ರಬಲ ಅಸ್ತ್ರ
ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದರು. ದೇಶಭಕ್ತಿಯ ಸಂಕೇತವಾದ ಕೇಸರಿಯನ್ನು ಭಯೋತ್ಪಾದನೆಗೆ ಹೋಲಿಸಿದ ಕಾಂಗ್ರೆಸ್‌‍ನ ನಡೆಯನ್ನು ಬಿಜೆಪಿ ರಾಷ್ಟ್ರೀಯ ಅವಮಾನ ಎಂದು ಬಿಂಬಿಸಿತು. ಇದು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸಂಘಟಿತವಾಗಲು ದೊಡ್ಡ ಪ್ರೇರಣೆಯಾಯಿತು.

ಆರ್‌ಎಸ್‌‍ಎಸ್‌‍ ಮತ್ತು ಹಿಂದೂ ಸಂಘಟನೆಗಳು ಈ ವಿಷಯವನ್ನು ಜನಸಾಮಾನ್ಯರಲ್ಲಿ ತಮ ಅಸಿತೆಯ ಪ್ರಶ್ನೆಯಾಗಿ ತೆಗೆದುಕೊಂಡು ಹೋದವು. ಇದು ದೇಶಾದ್ಯಂತ ಕಾಂಗ್ರೆಸ್‌‍ ವಿರುದ್ಧದ ಆಕ್ರೋಶಕ್ಕೆ ನಾಂದಿ ಹಾಡಿತು.

2014ರ ಲೋಕಸಭಾ ಚುನಾವಣೆ
2014ರ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅನುಭವಿಸಿದ ಹೀನಾಯ ಸೋಲಿಗೆ ಈ ಹೇಳಿಕೆಯು ಪರೋಕ್ಷವಾಗಿ ಕಾರಣವಾಯಿತು. ಹಿಂದೂ ಮತದಾರರ ಧ್ರುವೀಕರಣವು ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿತು. ಸುಶೀಲ್‌ಕುಮಾರ್‌ ಶಿಂಧೆ ಅವರು ರಾಜಕೀಯ ಗಿಮಿಕ್‌ ಆಗಿ ಬಳಸಿದ ಕೇಸರಿ ಭಯೋತ್ಪಾದನೆ ಎಂಬ ಪದವು ಕಾಂಗ್ರೆಸ್‌‍ಗೆ ಬೂಮರಾಂಗ್‌ ಆಗಿ ಪರಿಣಮಿಸಿತು. ಆಡಳಿತಾರೂಢ ಪಕ್ಷವಾಗಿದ್ದಾಗ ಆತುರದ ಮತ್ತು ತರ್ಕಬದ್ಧವಲ್ಲದ ಹೇಳಿಕೆಗಳು ಹೇಗೆ ಒಂದು ರಾಷ್ಟ್ರೀಯ ಪಕ್ಷದ ತಳಪಾಯವನ್ನು ಅಲುಗಾಡಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ಕಾಲಾನಂತರದಲ್ಲಿ ಕಾಂಗ್ರೆಸ್‌‍ ನಾಯಕರು ಈ ಪದ ಬಳಕೆ ಬಗ್ಗೆ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದರೂ, ಸಾರ್ವಜನಿಕರ ಮನಸ್ಸಿನಲ್ಲಿ ಕಾಂಗ್ರೆಸ್‌‍ ಹಿಂದೂ ವಿರೋಧಿ ಎಂಬ ಬಿಂಬವು ಈ ಹೇಳಿಕೆಯಿಂದಾಗಿ ಆಳವಾಗಿ ಬೇರೂರಿತು.

ರಾಜಕೀಯ ವಾಕ್ಸಮರ
ಈ ಹೇಳಿಕೆಯು ಹೊರಬಿದ್ದ ನಂತರ ಬಿಜೆಪಿ ಮತ್ತು ಕಾಂಗ್ರೆಸ್‌‍ ನಡುವೆ ವಾಕ್ಸಮರ ನಡೆದಿತ್ತು. ಬಿಜೆಪಿ ನಾಯಕರು ಈ ಹೇಳಿಕೆಯನ್ನು ಆಧರಿಸಿ, ಕಾಂಗ್ರೆಸ್‌‍ ಪಕ್ಷವು ರಾಜಕೀಯ ಲಾಭಕ್ಕಾಗಿ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಲು ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುತ್ತಿದೆ ಎಂದು ಟೀಕಿಸಿದ್ದರು.

ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಹಿಂದೂಗಳನ್ನು ಭಯೋತ್ಪಾದಕರಂತೆ ಬಿಂಬಿಸಲು ಕಾಂಗ್ರೆಸ್‌‍ ಪ್ರಯತ್ನಿಸಿತು ಎಂದು ಬಿಜೆಪಿ ಆರೋಪಿಸಿತ್ತು.ಈ ಹೇಳಿಕೆಯು ಪಕ್ಷಕ್ಕೆ ಉಂಟು ಮಾಡಿದ ಹಾನಿಯನ್ನು ಅರಿತ ನಂತರ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌‍ ತನ್ನ ನಿಲುವನ್ನು ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಾಯಕರು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಮೃದು ಹಿಂದುತ್ವದ ಪಥವನ್ನು ಅನುಸರಿಸುವ ಮೂಲಕ ಈ ಹಿಂದಿನ ಹಾನಿಯನ್ನು ಸರಿಪಡಿಸಲು ಯತ್ನಿಸುತ್ತಿದೆ.

RELATED ARTICLES

Latest News