Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-06-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-06-2026)

Today's Horoscope

ನಿತ್ಯ ನೀತಿ : ಕತ್ತಲೆಯನ್ನು ಮೀರಿ ಬೆಳಕು ನೀಡುವುದರಿಂದಲೇ ದೀಪಕ್ಕೆ ಬೆಲೆ. ಹಾಗೇ ಕಷ್ಟಗಳನ್ನು ಮೀರಿ ಬೆಳೆದು ನಿಂತಾಗಲೇ ಬದುಕಿಗೊಂದು ಬೆಲೆ.

ಪಂಚಾಂಗ : ಬುಧವಾರ, 17-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ನಿಜ ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಪುನರ್ವಸು / ಯೋಗ: ಧ್ರುವ / ಕರಣ: ತೈತಿಲ
ಸೂರ್ಯೋದಯ – ಬೆ.5.55
ಸೂರ್ಯಾಸ್ತ – 06.48
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ವೃಷಭ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಿಥುನ: ಕಾರ್ಯ ಸಾಮರ್ಥ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.

ಕಟಕ: ಯಂತ್ರೋಪಕಣ ಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.
ಸಿಂಹ: ಉನ್ನತ ಮಟ್ಟದಲ್ಲಿ ಕಾರ್ಯನಿರ್ವ ಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.
ಕನ್ಯಾ: ಸಣ್ಣ ತಪ್ಪುಗಳಾಗ ಬಹುದು. ಇದರಿಂದ ಉನ್ನತ ಅ ಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳುವರು. ಎಚ್ಚರಿಕೆಯಿಂದಿರಿ.

ತುಲಾ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವೃಶ್ಚಿಕ: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ.
ಧನುಸ್ಸು: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳ ಬಹುದು. ಆದ್ದರಿಂದ ಜಾಗ್ರತೆಯಿಂದಿರಿ.

ಮಕರ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.
ಕುಂಭ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.
ಮೀನ: ಉದ್ಯೋಗ ಬದಲಾವಣೆಗೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳು ಸಿಗಲಿವೆ.

RELATED ARTICLES
spot_img

Latest News