Homeರಾಷ್ಟ್ರೀಯಶೇ.68 ರಷ್ಟು ಕುಟುಂಬ ಸದಸ್ಯರಿಂದಲೇ ಹಿರಿಯ ನಾಗರಿಕರ ಮೇಲೆ ದೌರ್ಜನ್ಯ

ಶೇ.68 ರಷ್ಟು ಕುಟುಂಬ ಸದಸ್ಯರಿಂದಲೇ ಹಿರಿಯ ನಾಗರಿಕರ ಮೇಲೆ ದೌರ್ಜನ್ಯ

68% of senior citizens are abused by family members

ಬೆಂಗಳೂರು,ಜೂ.16- ಕುಟುಂಬ ಸದಸ್ಯರಿಂದಲೇ ಹಿರಿಯ ನಾಗರಿಕರು ದೌರ್ಜನ್ಯಕ್ಕೆ ಒಳಗಾಗಿರುವುದು ಅಧ್ಯಯನದ ಪ್ರಕಾರ ಕಂಡು ಬಂದಿದೆ.ಶೇ.42 ಪ್ರಕರಣಗಳಲ್ಲಿ ಮಕ್ಕಳಿಂದ (ಮಗ ಅಥವಾ ಮಗಳು) ಹಾಗೂ ಶೇ.29 ಪ್ರಕರಣಗಳಲ್ಲಿ ಸೊಸೆಯಂದಿರಿಂದ ದೌರ್ಜನ್ಯ ಎಸೆಗಲಾಗಿದೆ ಎಂಬುವುದು ಗೊತ್ತಾಗಿದೆ.

ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನದ ಅಂಗವಾಗಿ ನೈಟಿಂಗೇಲ್ಸ್ ಮೆಡಿಕಲ್‌ ಟ್ರಸ್‌್ಟ ಮತ್ತು ಹಿರಿಯರ ಸಹಾಯವಾಣಿ ವತಿಯಿಂದ ನಗರ ಪೊಲೀಸ್‌ ಆಯುಕ್ತರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲವಾರು ಹಿರಿಯ ನಾಗರಿಕರು ಪಾಲ್ಗೊಂಡು ತಮ್ಮ ನೋವನ್ನು ಹಂಚಿಕೊಂಡರು.

ಹಿರಿಯ ಮೇಲಿನ ದೌರ್ಜನ್ಯ, ಹೆಚ್ಚುತ್ತಿರುವ ಸಮಸ್ಯೆ ಮತ್ತು ಅದನ್ನು ತಡೆಗಟ್ಟಲು ಅಗತ್ಯವಿರುವ ಸಕಾರಾತ್ಮಕ ಕ್ರಮಗಳ ಕುರಿತು ಚರ್ಚಿಸಲಾಯಿತು.ಹಿರಿಯರ ಸಹಾಯವಾಣಿ ವತಿಯಿಂದ 2023 ರಿಂದ ಇದುವರೆಗೆ ನಡೆಸಲಾದ ಮೂರು ವರ್ಷದ ಅಧ್ಯಯನದ ಪ್ರಕಾರ ಶೇ.68 ಪ್ರಕರಣಗಳು ಕುಟುಂಬ ಸದಸ್ಯರಿಂದಲೇ ನಡೆದ ದೌರ್ಜನ್ಯಕ್ಕೆ ಸಂಭಂದಿಸಿದ್ದವು ಎಂಬುವುದು ತಿಳಿದು ಬಂದಿದೆ.

ಈ ಪೈಕಿ ಮಾನಸಿಕ ದೌರ್ಜನ್ಯ ಅತ್ಯಂತ ಸಾಮಾನ್ಯ ರೂಪವಾಗಿರುವುದು ವಿಷಾದಕರ. ಈ ಸಂದರ್ಭದಲ್ಲಿ ಕುಟುಂಬದ ವ್ಯವಸ್ಥೆ, ಆರೈಕೆಯ ಹೊರೆ, ಆರ್ಥಿಕ ಒತ್ತಡ, ಸಾಮಾಜಿಕ ಏಕಾಂಗಿತನ, ಸಾಮಾಜಿಕ ಬೆಂಬಲ ಜಾಲಗಳ ಕುಸಿತ ಸೇರಿದಂತೆ ಹಿರಿಯರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಚರ್ಚೆ ನಡೆಸಿ ನ್ಯಾಯ ಒದಗಿಸುವಲ್ಲಿ ಎದುರಾಗುವ ಸವಾಲುಗಳ ಕುರಿತು ಹಾಗೂ ಕಾನೂನು ನೆರವು, ಮಧ್ಯಸ್ಥಿಕೆ, ಪರ್ಯಾಯ ವಿವಾದ ಪರಿಹಾರ ಸೇವೆಗಳ ಕುರಿತು ಮಾಹಿತಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ಸೈಬರ್‌ ವಂಚನೆ ಮತ್ತು ಮೋಸಗಳಿಂದ ಹಿರಿಯರನ್ನು ರಕ್ಷಿಸಲು ಡಿಜಿಟಲ್‌ ಸಾಕ್ಷರತೆ ಹೆಚ್ಚಿಸುವ ಅಗತ್ಯದ ಬಗ್ಗೆ ಹಿರಿಯರಿಗೆ ಮನವರಿಕೆ ಮಾಡಿಕೊಡಲಾಯಿತು. ಹಿರಿಯ ನಾಗರಿಕರು ಸೇರಿದಂತೆ ದುರ್ಬಲ ವರ್ಗದ ನಾಗರಿಕರಿಗೆ ನೆರವು ನೀಡುವ ಉದ್ದೇಶದಿಂದ ಜಾರಿಯಲ್ಲಿರುವ ಆಸರೆ ಮತ್ತು ಱಱಮನೆ ಮನೆಗೆ ಪೊಲೀಸ್‌ೞೞ ಸಮುದಾಯ ಪೊಲೀಸ್‌ ಕಾರ್ಯಕ್ರಮಗಳ ಮಹತ್ವವನ್ನು ಪೂರ್ವ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರಮೇಶ್‌ ಅವರು ವಿವರಿಸಿದರು.

ಹಿರಿಯರ ಮೇಲಿನ ದೌರ್ಜನ್ಯ, ನಿರ್ಲಕ್ಷ, ತ್ಯಜನೆ, ಕಿರುಕುಳ ಅಥವಾ ಸಂಕಷ್ಟಕ್ಕೆ ಸಂಬಂಽಸಿದ ದೂರುಗಳಿದ್ದಲ್ಲಿ ಉಚಿತ ಸಹಾಯವಾಣಿ 1090 ಅಥವಾ 080-23352833 ಸಂಪರ್ಕಿಸಬಹುದಾಗಿದೆ.

RELATED ARTICLES

Latest News