ಬೆಂಗಳೂರು,ಜೂ.17- ಭಾರತದಲ್ಲಿ ಒಂದು ಲೀಟರ್ ಹಾಲಿನ 55ರಿಂದ 75 ರೂ.ಗಳಿರಬಹುದು. ಆದರೆ ಕ್ಯಾಲಿಫೋರ್ನಿಯಾದಲ್ಲಿ ಒಂದು ಲೀಟರ್ ಹಾಲಿನ ಬೆಲೆ ಸುಮಾರು 450 ರೂ.ಗಳು. !
ಲಾಸ್ ಏಂಜಲೀಸ್ ಮೂಲದ ಉದ್ಯಮಿ ಚೈಗುಯ್ ಎಂದು ಕರೆಯಲ್ಪಡುವ ಪ್ರಭಾಕರ್ ಪ್ರಸಾದ್ ಅವರು, ಭಾರತದಲ್ಲಿ ತಮ ಸ್ಥಳೀಯ ಹಾಲು ವ್ಯಾಪಾರಿಯೊಂದಿಗೆ ನಡೆಸಿದ ಸಂಭಾಷಣೆಯ ಒಂದು ತುಣುಕಿನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಒಂದು ಲೀಟರ್ ಹಾಲಿನ ಬೆಲೆ ಸುಮಾರು 450 ರೂ. ಎಂದು ತಿಳಿದಾಗ ಮಾರಾಟಗಾರ ಅಚ್ಚರಿಗೊಂಡು, ಚೈಗುಯ್ ಕ್ಯಾಲಿಫೋರ್ನಿಯಾದಲ್ಲಿ 1 ಲೀಟರ್ ಹಾಲಿಗೆ 450 ರೂಪಾಯಿ ಪಾವತಿಸುತ್ತಾನೆಂದು ಇನ್ಸ್ಟಾಗ್ರಾಮ್ನಲ್ಲಿ ಸ್ಥಳೀಯ ವ್ಯಾಪ್ಯಾರಿ ಪೋಸ್ಟ್ ಮಾಡಿದ್ದಾರೆ.
ಭಾರತದಲ್ಲಿ ಹಾಲು ವ್ಯಾಪಾರಿಯೊಂದಿಗಿನ ಸಂಭಾಷಣೆಯಲ್ಲಿ, ಹಾಲು ಮಾರಾಟಗಾರನು ಒಂದು ಕಪ್ಗೆ ಎಷ್ಟು ಶುಲ್ಕ ವಿಧಿಸುತ್ತಾನೆ ಎಂದು ಕೇಳಿದಾಗ, ಪ್ರಸಾದ್ ಅವರು ಸುಮಾರು 900ಕ್ಕೆ ಮಾರಾಟ ಮಾಡುತ್ತಾರೆ ಎಂದು ಹೇಳಿದ್ದಾನೆ. ಹಾಲು ವ್ಯಾಪಾರಿ ಆಶ್ಚರ್ಯಚಕಿತರಾಗುತ್ತಾರೆ.
