Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-06-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-06-2026)

ನಿತ್ಯ ನೀತಿ : ಪ್ರತಿ ಕಷ್ಟವನ್ನು ಮೆಟ್ಟಿಲಾಗಿ ಪರಿವರ್ತಿಸಿಕೊಂಡು ಸಾಗಲು ಸಾಧ್ಯವಾದಾಗ ಯಶಸ್ಸು ತಾನಾಗಿಯೇ ನಮ್ಮೊಂದಿಗೆ ಬಂದು ನಿಲ್ಲುತ್ತದೆ!

ಪಂಚಾಂಗ : ಶನಿವಾರ, 20-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ನಿಜ ಜ್ಯೇಷ್ಠ ಪಕ್ಷ: ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಮಘಾ / ಯೋಗ: ವಜ್ರ / ಕರಣ: ಗರಜ

ಸೂರ್ಯೋದಯ : ಬೆ.5.55
ಸೂರ್ಯಾಸ್ತ : 06.48
ರಾಹುಕಾಲ : 9.00-10.30
ಯಮಗಂಡ ಕಾಲ : 1.00- 3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಇತರರಿಗೆ ಮುಜುಗರ ಉಂಟುಮಾಡದಿರಿ. ಮತ್ತು ಕುಟುಂಬದ ಅವಶ್ಯಕತೆಗಳಿಗೆ ಗಮನ ಕೊಡಿ.
ವೃಷಭ: ಸಂಗಾತಿಯೊಂದಿಗೆ ಚರ್ಚಿಸಿ ಹಣಕಾಸಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಿ.
ಮಿಥುನ: ಅತಿಥಿಗಳ ಆಗಮನದಿಂದಾಗಿ ಖರ್ಚು-ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗಲಿವೆ.

ಕಟಕ: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.
ಸಿಂಹ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನ ದಲ್ಲಿ ಯಶಸ್ವಿಯಾಗುತ್ತಾರೆ.
ಕನ್ಯಾ: ಆರೋಗ್ಯ ಕಾಪಾಡಿ ಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು.

ತುಲಾ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾ ಸುವಿರಿ. ಆರೋಗ್ಯದ ಕಡೆ ಗಮನ ಹರಿಸಿ.
ವೃಶ್ಚಿಕ: ನೀವು ಹಿಂದೆ ಮಾಡಿದ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ.
ಧನುಸ್ಸು: ಇಲ್ಲಸಲ್ಲದ ವಿಚಾರಗಳಿಗೆ ಕಿವಿಗೊಟ್ಟು ಮನಸ್ಸಿನ ನೆಮ್ಮದಿ ಹಾಳುಕೊಳ್ಳಬೇಡಿ.

ಮಕರ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.
ಕುಂಭ: ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ಮೀನ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಉತ್ತಮ.

RELATED ARTICLES

Latest News