Homeಇದೀಗ ಬಂದ ಸುದ್ದಿವಿಜಯೇಂದ್ರ - ಅಶೋಕ್‌ ಕಾರ್ಯವೈಖರಿ ವಿರುದ್ಧ ಬಿಜೆಪಿಯಲ್ಲೇ ಭುಗಿಲೆದ್ದ ಅಸಮಾಧಾನ

ವಿಜಯೇಂದ್ರ – ಅಶೋಕ್‌ ಕಾರ್ಯವೈಖರಿ ವಿರುದ್ಧ ಬಿಜೆಪಿಯಲ್ಲೇ ಭುಗಿಲೆದ್ದ ಅಸಮಾಧಾನ

ಬೆಂಗಳೂರು,ಜೂ.19-ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷದ ಕೆಲವು ಶಾಸಕರು ವಿಪ್‌ ಉಲ್ಲಂಘಿಸಿ ಅಡ್ಡಮತದಾನ ನಡೆಸಿರುವುದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರ ಕಾರ್ಯವೈಖರಿಯ ವಿರುದ್ಧ ಪಕ್ಷದೊಳಗೇ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಕೆಲ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ನಾಯಕತ್ವದ ವೈಫಲ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣಾ ಫಲಿತಾಂಶದ ಬೆನ್ನಲ್ಲೇ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಕೆಲವು ಸಮಯದಿಂದ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯದ ಸ್ವರಗಳು ಕೇಳಿಬರುತ್ತಿದ್ದು, ಪಕ್ಷದ ಸಂಘಟನೆಯಲ್ಲಿ ಬದಲಾವಣೆ ತರಬೇಕೆಂಬ ಆಗ್ರಹಗಳು ವ್ಯಕ್ತವಾಗಿವೆ. ಕೆಲವು ನಾಯಕರು ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು ಎಂಬ ಚರ್ಚೆಯನ್ನೂ ನಡೆಸಿದ್ದಾರೆ.2023ರ ವಿಧಾನಸಭಾ ಚುನಾವಣೆ ನಂತರ ಪ್ರತಿಪಕ್ಷದ ನಾಯಕರ ಆಯ್ಕೆಯ ಸಂದರ್ಭದಲ್ಲೇ ಪಕ್ಷದೊಳಗೆ ಭಿನ್ನಮತ ಉಂಟಾಗಿತ್ತು. ಅಂದಿನಿಂದಲೂ ಪಕ್ಷದ ಆಂತರಿಕ ನಿರ್ಧಾರಗಳ ಕುರಿತು ಕೆಲ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ.

ಇತ್ತೀಚಿನ ದಿನಗಳಲ್ಲಿ, ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಆರ್‌. ಅಶೋಕ್‌ ಅವರ ನೇತೃತ್ವದಲ್ಲಿ ಹಲವು ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಅದರಲ್ಲೂ ಪಕ್ಷದ ಶಾಸಕರ ಅಮಾನತು ಸೇರಿದಂತೆ ಕೆಲ ವಿಷಯಗಳಲ್ಲಿ ಪಕ್ಷದ ಒಳಗೇ ಭಿನ್ನಾಭಿಪ್ರಾಯಗಳು ತೀವ್ರವಾಗಿವೆ. ಪಕ್ಷದ ಶಿಸ್ತಿನ ಗೆರೆಯನ್ನು ದಾಟದ ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಮುಖಭಂಗವನ್ನು ಎದುರಿಸಿದೆ. ದೇಶದೆಲ್ಲಡೆ ಪ್ರಾದೇಶಿಕ ಪಾರ್ಟಿಗಳಲ್ಲಿ ಬಿರುಕು ಮೂಡಲು ಬಿಜೆಪಿಯ ರಾಜಕಾರಣ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿರುವ ಹೊತ್ತಿನಲ್ಲಿ, ತಮದೇ ಪಾರ್ಟಿಯಲ್ಲಿ ಕ್ರಾಸ್‌‍ ವೋಟಿಂಗ್‌, ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷದ ನಾಯಕ ಆರ್‌.ಅಶೋಕ ಅವರ ನಾಯಕತ್ವದ ಬಗ್ಗೆ, ಬಿಜೆಪಿ ಹೈಕಮಾಂಡ್‌ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಆಪ್ತರೂ ಆಗಿರುವ ವಿನಯ್‌ ಕಾರ್ತಿಕ್‌ ಪ್ರಕಾಶ್‌, ಎಲ್ಲರಿಗಿಂತ ಹೆಚ್ಚು (32) ಮತವನ್ನು ಪಡೆದು, ಚುನಾವಣಾ ರಣಕಣವನ್ನು ಹುಬ್ಬೇರುವಂತೆ ಮಾಡಿದ್ದಾರೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದರೂ, ಸ್ವಲ್ಪ ಎಡವಟ್ಟಾಗಿದ್ದರೂ, ಇನ್ನಷ್ಟು ಮುಖಭಂಗವನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತಿತ್ತು.

ಈ ಚುನಾವಣೆಯಲ್ಲಿ, ಯಾರು ಯಾರಿಗೆ ಮತವನ್ನು ಹಾಕಬೇಕು, ಯಾರಿಗೆ ಎಷ್ಟು ಮತವನ್ನು ಹಾಕಬೇಕು ಎನ್ನುವ ವಿಚಾರದಲ್ಲಿ ಬಿಜೆಪಿಯಲ್ಲಿ ಕೊನೇ ಗಳಿಗೆಯವರೆಗೂ ಗೊಂದಲವಿತ್ತು ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕೆಲವರು ಒಬ್ಬರಿಗೆ 30 ಮತಗಳು ಎನ್ನುತ್ತಿದ್ದರೆ ಮತ್ತೊಬ್ಬರು 29 ಮತ ಎನ್ನುತ್ತಿದ್ದರು. ರಾಜ್ಯಾಧ್ಯಕ್ಷರ ಬದಲಾವಣೆಯ ಸುದ್ದಿ, ರಾಜ್ಯ ಬಿಜೆಪಿಯಲ್ಲಿ ಬಲವಾಗಿ ಹರಿದಾಡುತ್ತಿರುವ ಈ ಸಮಯದಲ್ಲಿ, ವಿಜಯೇಂದ್ರಗೆ ವೈಯಕ್ತಿಕವಾಗಿ ಆದ ಸೆಟ್‌ೞಬ್ಯಾಕ್‌ ಇದು ವ್ಯಾಖ್ಯಾನಿಸಲಾಗುತ್ತಿದೆ. ಈ ವಿದ್ಯಮಾನ, ಹೈಕಮಾಂಡ್‌ ಅಂಗಣದಲ್ಲಿ ಯಾವ ರೀತಿ ತಿರುವನ್ನು ಪಡೆಯುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರು ಯಾರು ಎನ್ನುವ ಕೆಲವೊಂದು ಹೆಸರುಗಳು ಓಡಾಡುತ್ತಿದೆ. ಆದರೆ, ಇದು ಗೌಪ್ಯ ಮತದಾನದ ಪದ್ದತಿ ಮತ್ತು ಹೆಸರನ್ನು ಬಿಜೆಪಿ ಪ್ರಮುಖರು ಇನ್ನೂ ಬಹಿರಂಗ ಪಡಿಸಲಿಲ್ಲ. ಬಿಜೆಪಿಯ ಮೀರ್‌ ಸಾದಿಕ್‌ ಯಾರು ಎನ್ನುವುದನ್ನು ಸದ್ಯದಲ್ಲೇ ಪತ್ತೆ ಹಚ್ಚುವುದಾಗಿ ಆರ್‌.ಅಶೋಕ್‌ ಹೇಳಿದ್ದಾರೆ. ಒಟ್ಟು ಅಡ್ಡಮತದಾನವಾಗಿದ್ದದ್ದು ಎಷ್ಟು ಎನ್ನುವ ಬಗ್ಗೆಯೂ ಬಿಜೆಪಿ ನಾಯಕರಲ್ಲಿ ಗೊಂದಲವಿದೆ.

ಕೆಲವರು ಮೂವರು, ಇನ್ನು ಕೆಲವರು ನಾಲ್ಕು ಅಂತಿದ್ದಾರೆ. ಒಟ್ಟಿನಲ್ಲಿ, ಬಿಜೆಪಿ – ಜೆಡಿಎಸ್‌‍ ಸೇರಿ ಹನ್ನೊಂದು ಅಡ್ಡಮತದಾನಗಳಾಗಿವೆ.ಾಜ್ಯ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ, ಹೊಂದಾಣಿಕೆ ರಾಜಕೀಯದ ಬಗ್ಗೆ ಭಾರೀ ಅಸಮಾಧಾವಿದೆ. ಇಂತಹ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ಸಿನ ಐದನೇ ಅಭ್ಯರ್ಥಿಗೆ 32 ಮತಗಳು ಬೀಳಲು ಹೇಗೆ ಸಾಧ್ಯ? ಈ ಅಡ್ಡ ಮತದಾನದ ಹಿನ್ನಡೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವವರು ಯಾರು? ಈ ಚುನಾವಣೆಯಲ್ಲೂ ಹೊಂದಾಣಿಕೆ ನಡೆದಿದೆಯಾ ಎನ್ನುವ ಪ್ರಶ್ನೆ, ಬಿಜೆಪಿಗರಿಗೆ ಆರಂಭವಾಗಿದೆ.

ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಅಡ್ಜಸ್ಟ್ಮೆಂಟ್‌ ಪಾಲಿಟಿಕ್‌್ಸ ಬಗ್ಗೆ ಉಲ್ಲೇಖಿಸುತ್ತಲೇ ಇರುತ್ತಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಗೆ ಮತವನ್ನು ಹಾಕಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನು, ಟ್ರೈನಿಂಗ್‌ ಕೊಟ್ಟರೂ, ಬಿಜೆಪಿಯ ಒಬ್ಬರ ಮತ ಅಸಿಂಧುಗೊಂಡಿದ್ದು ಹೇಗೆ ಎನ್ನುವುದು ಚರ್ಚೆಯ ವಿಷಯವಾಗಿದೆ.

RELATED ARTICLES

Latest News