ಸಿಯಾಟಲ್, ಜೂ.20- ಗಾಯಗೊಂಡಿದ್ದ ಪ್ರಮುಖ ಆಟಗಾರ ಕ್ರಿಶ್ಚಿಯನ್ ಪುಲಿಸಿಕ್ ಅವರ ಅನುಪಸ್ಥಿತಿಯಲ್ಲೂ ಅಮೆರಿಕ ತಂಡವು ಆಸ್ಟ್ರೇಲಿಯಾವನ್ನು 2-0 ಗೋಲುಗಳಿಂದ ಸೋಲಿಸಿ ವಿಶ್ವಕಪ್ನ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ ತಂಡವು ತನ್ನ ಬಲಿಷ್ಠ ಆಟಗಾರರ ಬಳಗದಿಂದ ಕೇವಲ ಎರಡು ಪಂದ್ಯಗಳಲ್ಲೇ ನಾಕೌಟ್ ಹಂತದ ಸ್ಥಾನವನ್ನು ಖಚಿತಪಡಿಸಿಕೊಂಡಿತು.
1994ರಲ್ಲಿ ವಿಶ್ವಕಪ್ ಆತಿಥ್ಯ ವಹಿಸಿದ್ದಾಗ ಅಮೆರಿಕ ತಂಡವು ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳಲ್ಲಿ ಒಂದಾಗಿ ಮುಂದಿನ ಹಂತಕ್ಕೇರಿತ್ತು. ಬಳಿಕ 16ರ ಸುತ್ತಿನಲ್ಲಿ ಚಾಂಪಿಯನ್ ಆಗಿದ್ದ ಬ್ರೆಜಿಲ್ ವಿರುದ್ಧ ಸೋತಿತ್ತು.
ಇಟಲಿಯ ಪರ ಆಡುತ್ತಿರುವ ಕ್ರಿಸ್ಟಿಯನ್ ಪುಲಿಸಿಕ್ ಅವರು ಕಾಲಿನ ಸ್ನಾಯು ಗಾಯದ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದರು. ಅವರು ಅಮೆರಿಕ ಪರ 87 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 33 ಗೋಲುಗಳನ್ನು ಗಳಿಸಿದ್ದಾರೆ. ಪುಲಿಸಿಕ್ ಅದ್ಭುತ ಆಟಗಾರ. ಅವರು ತಂಡಕ್ಕೆ ಗುಣಮಟ್ಟದ ಆಟ ಮತ್ತು ನಾಯಕತ್ವ ನೀಡುತ್ತಾರೆ. ಆದರೆ ಅವರು ಇಲ್ಲದಿದ್ದರೂ ನಾವು ಉತ್ತಮ ಪ್ರದರ್ಶನ ನೀಡಿ ಫಲಿತಾಂಶ ಸಾಧಿಸಬಲ್ಲೆವು ಎಂಬುದನ್ನು ಇಂದು ತೋರಿಸಿದ್ದೇವೆ ಎಂದು ಹೇಳಿದರು.
21 ವರ್ಷದ ಯುವ ಆಟಗಾರ ಅಲೆಕ್್ಸಫ್ರೀಮನ್ ಪರ 43ನೇ ನಿಮಿಷದಲ್ಲಿ ಅಮೆರಿಕಕ್ಕೆ ಮುನ್ನಡೆ ತಂದುಕೊಟ್ಟರು. ಸೆರ್ಗಿನೊ ಡೆಸ್ಟ್ ಅವರ ಡಿಫ್ಲೆಕ್ಟ್ ಆದ ಶಾಟ್ಗೆ ಹೆಡರ್ ಮೂಲಕ ಗೋಲು ಗಳಿಸಿದ ಅವರು ತಮ ವಿಶ್ವಕಪ್ ವೃತ್ತಿಜೀವನದ ಮೊದಲ ಗೋಲು ದಾಖಲಿಸಿದರು. ವಿಡಿಯೊ ಪರಿಶೀಲನೆಯ ಬಳಿಕ ಗೋಲನ್ನು ಮಾನ್ಯಗೊಳಿಸಲಾಯಿತು. ಅಮೆರಿಕ ತಂಡವು 11ನೇ ನಿಮಿಷದಲ್ಲೇ 1-0 ಮುನ್ನಡೆ ಸಾಧಿಸಿತು. ಎಡಭಾಗದಿಂದ ಫೋಲರಿನ್ ಬಾಲೋಗನ್ ನೀಡಿದ ಪಾಸ್ನ್ನು ಸ್ಟ್ರೈಕರ್ ಸ್ವೀಕರಿಸುವ ಮುನ್ನವೇ, ಆಸ್ಟ್ರೇಲಿಯಾ ತಂಡದ ರಕ್ಷಣಾ ಆಟಗಾರ ಅವರಿಂದ ಚೆಂಡು ಡಿಫ್ಲೆಕ್ಟ್ ಆಗಿ ಸ್ವಂತ ಗೋಲು ಆಗಿ ಪರಿವರ್ತನೆಯಾಯಿತು.
ನಾನು ಯಾವಾಗಲೂ ಅಪಾಯಕಾರಿಯಾಗಿ ಆಡಿ ಅವಕಾಶಗಳನ್ನು ಸೃಷ್ಟಿಸಲು ಬಯಸುತ್ತೇನೆ. ಗೋಲು ನಾನೇ ಗಳಿಸಬೇಕೆಂದಿಲ್ಲ. ನನ್ನ ಪ್ರಯತ್ನದಿಂದ ಎದುರಾಳಿ ತಪ್ಪು ಮಾಡಿ ನಮಗೆ ಮುನ್ನಡೆ ಸಿಕ್ಕರೆ ಅದೂ ನನಗೆ ಗೋಲು ಗಳಿಸಿದಷ್ಟೇ ಸಂತೋಷ. ಪಂದ್ಯದ ಆರಂಭದಲ್ಲೇ ಮುನ್ನಡೆ ಸಿಕ್ಕಿದ್ದು ತಂಡಕ್ಕೆ ಉತ್ತಮ ಆತವಿಶ್ವಾಸ ನೀಡಿತು ಎಂದು ಬಾಲೋಗನ್ ಹೇಳಿದರು. ಈ ಗೆಲುವಿನೊಂದಿಗೆ ಅಮೆರಿಕ ತಂಡವು ವಿಶ್ವಕಪ್ನ ನಾಕೌಟ್ ಹಂತದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪಂದ್ಯವನ್ನುಆಸ್ಟ್ರೇಲಿಯಾ ಹೀನಾಯವಾಗಿ ಸೋತು ನಿರಾಶೆ ಅನುಭವಿಸಿತು.
