ಬೆಂಗಳೂರು,ಜೂ.23-ಪಿಜಿಯೊಳಗೆ ಕಾಲು ತೊಳೆಯುತ್ತಿದ್ದ ಪ್ರಶ್ನಿಸಿದ ಪಿಜಿ ಮಾಲೀಕನನ್ನೇ ಬ್ಯಾಟ್ನಿಂದ ಹೊಡೆದು ಇಬ್ಬರು ವಿದ್ಯಾರ್ಥಿಗಳು ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಓಎಂಆರ್ ಲೇಔಟ್ ಕಸ್ತೂರಿನಗರ ಮುಖ್ಯರಸ್ತೆಯಲ್ಲಿರುವ ಲಕ್ಷ್ಮೀನರಸಿಂಹ ಪಿಜಿ ಮಾಲೀಕ ಮದೇವ್ ಮ್ಯಾಟ್್ಲ (37) ಕೊಲೆಯಾದವರು.ಪಿಜಿಯಲ್ಲಿ ನೆಲೆಸಿರುವ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿ ರಾಕೇಶ್ (21) ಹಾಗೂ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಡಾನ್ ಬ್ರೈಟ್ ಸನ್ (20) ನಿನ್ನೆ ಸಂಜೆ 6.30 ರ ಸುಮಾರಿನಲ್ಲಿ ಪಿಜಿಯ ಒಳಗಿನ ನಲ್ಲಿಯ ನೀರನ್ನು ಬಳಸಿ ಕಾಲು ತೊಳೆಯುತ್ತಿದ್ದರು.
ಸೆಕ್ಯೂರಿಟಿ ಗಾರ್ಡ್ ಗಮನಿಸಿ ರೂಮ್ನಲ್ಲಿ ಕಾಲು ತೊಳೆಯಬಾರದೆಂದು ಹೇಳಿದ್ದಾರೆ. ಗಲಾಟೆಯಾಗುತ್ತಿರುವುದು ಗಮನಿಸಿ ಮಾಲೀಕ ಮದೇವ್ ಮ್ಯಾಟ್್ಲ ಬಂದಿದ್ದಾರೆ.
ಆ ಸಂದರ್ಭದಲ್ಲಿ ಅವರುಗಳ ನಡುವೆ ವಾಗ್ವಾದ ನಡೆದಿದೆ. ಪಿಜಿ ಮಾಲೀಕರು ಹೊಡೆಯಲು ಬ್ಯಾಟ್ ತಂದಿರುವುದನ್ನು ಗಮನಿಸಿ ವಿದ್ಯಾರ್ಥಿಗಳು ಅದೇ ಬ್ಯಾಟ್ ಅನ್ನು ಕಸಿದುಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಇದರಿಂದ ಗಾಬರಿಯಾದ ಈ ಇಬ್ಬರು ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಸುದ್ದಿ ತಿಳಿದು ರಾಮಮೂರ್ತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
