ಈಸ್ಟ್ ರುದರ್‌ಫೋಡ್,ಜೂ.28- ಜೂಡ್ ಬೆಲ್ಲಿಂಗ್‌ಹ್ಯಾಮ್ ಮತ್ತು ಹ್ಯಾರಿ ಕೇನ್ ಗಳಿಸಿದ ದ್ವಿತೀಯಾರ್ಧದ ಆರಂಭಿಕ ಗೋಲುಗಳ ನೆರವಿನಿಂದ ಇಂಗ್ಲೆಂಡ್, ಪನಾಮಾವನ್ನು 2-0 ಗೋಲುಗಳಿಂದ ಮಣಿಸಿ ಫಿಫಾ ವಿಶ್ವಕಪ್‌ನ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್ ಹಂತಕ್ಕೆ ಪ್ರವೇಶಿಸಿದೆ.
ಮಳೆಯ ನಡುವೆಯೂ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಅಭಿಮಾನಿಗಳ ಭಾರೀ ಬೆಂಬಲದ ನಡುವೆ ನಡೆದ ಪಂದ್ಯದಲ್ಲಿ, ಮೊದಲಾರ್ಧದಲ್ಲಿ ಎರಡೂ ತಂಡಗಳು ಸಮಭಲದ ಆಟ ಕಂಡುಬಂದು.
ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಮೊದಲಾರ್ಧದಲ್ಲಿ ಕೇವಲ 10 ಬಾರಿ ಮಾತ್ರ ಚೆಂಡನ್ನು ಸ್ಪರ್ಶಿಸಿದ್ದು ಅಂಗಳದಲ್ಲಿದ್ದ ಎಲ್ಲ ಆಟಗಾರರಿಗಿಂತ ಕಡಿಮೆ ದಾಖಲೆಯಾಗಿತ್ತು.ಆದರೆ ದ್ವಿತೀಯಾರ್ಧದ 62ನೇ ನಿಮಿಷದಲ್ಲಿ ಬುಕಾಯೊ ಸಾಕಾ ನೀಡಿದ ಕಾರ್ನರ್ ಕಿಕ್ ಅನ್ನು ಜೂಡ್ ಬೆಲ್ಲಿಂಗ್‌ಹ್ಯಾಮ್ ಗೋಲಾಗಿ ಪರಿವರ್ತಿಸಿ ಇಂಗ್ಲೆಂಡ್‌ಗೆ ಮುನ್ನಡೆ ತಂದುಕೊಟ್ಟರು. ಇದು ವಿಶ್ವಕಪ್‌ನಲ್ಲಿ ಅವರ ಮೂರನೇ ಗೋಲು ಹಾಗೂ ಈ ವರ್ಷದ ಟೂರ್ನಿಯಲ್ಲಿ ಎರಡನೇ ಗೋಲು ಆಗಿದೆ.
ನಂತರ ಚಂಡಿನ ಮೇಲೆ ಹಿಡಿತ ಸಾಧಿಸಿ ಜಾಣೆ ಅಕ್ರಮ ನಡೆಸಿತು ಇದರಿಂದ ಮತ್ತೆ ಐದು ನಿಮಿಷಗಳ ಬಳಿಕ, ಬೆಲ್ಲಿಂಗ್‌ಹ್ಯಾಮ್ ಎಡಭಾಗದಿಂದ ನೀಡಿದ ಕ್ರಾಸ್‌ಗೆ ಹ್ಯಾರಿ ಕೇನ್ ಅದ್ಭುತ ಹೆಡರ್ ಮೂಲಕ ಗೋಲು ಬಾರಿಸಿ ಇಂಗ್ಲೆಂಡ್‌ನ ಮುನ್ನಡೆಯನ್ನು 2-0 ಕ್ಕೆ ಹೆಚ್ಚಿಸಿದರು. ಈ ಗೋಲಿನೊಂದಿಗೆ ಕೇನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ 82ನೇ ಗೋಲು ದಾಖಲಿಸಿದರೆ, ವಿಶ್ವಕಪ್‌ನಲ್ಲಿ ಇದು ಅವರ 11ನೇ ಗೋಲು.
ಗ್ಯಾರಿ ಲಿನೇಕ ಅವರ 10 ಗೋಲುಗಳ ದಾಖಲೆಯನ್ನು ಹಿಂದಿಕ್ಕಿ ಇಂಗ್ಲೆಂಡ್‌ನ ಪರ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರಎಂಬ ಹೊಸ ದಾಖಲೆ ಬರೆದರು. ನಂತರ ಪನಾಮ ಆಟಗಾರರೂ ಕೂಡ ಕೆಲವೊಂದು ಅದ್ಬುತ ಹೊಡೆತಗಳ ಮೂಲಕ ಗೋಲಿಗಾಗಿ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.ಇಂಗ್ಲೆಂಡ್ ಜಯ ಗಳಿಸುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದರು.
ಘಾನಾವನ್ನು 2-1ರಿಂದ ಮಣಿಸಿದ ಕ್ರೊಯೇಷ್ಯಾ ನಾಕೌಟ್ ಹಂತಕ್ಕೆ
ಫಿಲಡೆಲ್ಫಿಯಾ, ಜೂ.28-ಕುತೂಹಲ ಕೆರಳಿದ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿ ಘಾನಾ ತಂಡವನ್ನು 2-1 ಗೋಲುಗಳಿಂದ ಮಣಿಸಿ ಕ್ರೊಯೇಷ್ಯಾಜಯಗಳಿಸುವ ಮೂಲಕ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.ನಿಕೊಲಾ ವ್ಲಾಸಿಕ್ ಹಾಗೂ ಲುಕಾ ಸುಚಿಚ್ ಗಳಿಸಿದ ಗೋಲುಗಳ ನೆರವಿನಿಂದ ಕ್ರೊಯೇಷ್ಯಾ ಫಿಫಾ ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ.ಪಂದ್ಯದ 83ನೇ ನಿಮಿಷದಲ್ಲಿ ನಾಯಕ ಲುಕಾ ಮೊಡ್ರಿಚ್ ನೀಡಿದ ಕಾರ್ನರ್ ಕಿಕ್‌ಗೆ ನಿಕೊಲಾ ವ್ಲಾಸಿಕ್ ಹೆಡರ್ ಮೂಲಕ ಗೋಲು ದಾಖಲಿಸಿ ಕ್ರೊಯೇಷ್ಯಾಗೆ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ ಕ್ರೊಯೇಷ್ಯಾ ಎಲ್ ಗುಂಪುನಲ್ಲಿ ಇಂಗ್ಲೆಂಡ್ ನಂತರ ಎರಡನೇ ಸ್ಥಾನ ಪಡೆದು ನಾಕೌಟ್ ಹಂತಕ್ಕೇರಿತು. ಕ್ರೊಯೇಷ್ಯಾ ಪರ 31ನೇ ನಿಮಿಷದಲ್ಲಿ ಚಂಡಿನ ಮೇಲೆ ಹಿಡಿತ ಸಾಧಿಸಿದ ಲುಕಾ ಸುಚಿಚ್ ಪೆನಾಲ್ಟಿ ಬಾಕ್‌್ಸನ ಹೊರಗಿನಿಂದ ಸಿಡಿಸಿದ ಪ್ರಬಲ ಶಾಟ್ ಗೋಲಾಗಿ ಪರಿವರ್ತನೆಯಾಗಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟಿತು. ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಎರಡನೇ ಗೋಲಾಗಿದೆ.
ನಂತರ ಘಾನಾ ಪರ 73ನೇ ನಿಮಿಷದಲ್ಲಿ ಡೆರಿಕ್ ಲಕಾಸೆನ್ ಸಮಬಲದ ಗೋಲು ಗಳಿಸಿದರು.ಆದರೆ ಆಪ್‌ಸೈಡ್ ಎಂದು ಕ್ರೊಯೇಷ್ಯಾ ವಾದಿಸಿದರು ಆದರೆ ವಿಡಿಯೊ ಪರಿಶೀಲನೆಯ ಬಳಿಕ ಗೋಲಿಗೆ ಮಾನ್ಯತೆ ದೊರೆತಿದ್ದು, ಪಂದ್ಯ 1-1ಕ್ಕೆ ಸಮಬಲಗೊಂಡಿತು.ಆದರೆ ಕೆಲವೇ ಕ್ಷಣಗಳಲ್ಲಿ ವ್ಲಾಸಿಕ್ ಗಳಿಸಿದ ಗೋಲು ಕ್ರೊಯೇಷ್ಯಾಗೆ ಅಮೂಲ್ಯ ಜಯ ತಂದುಕೊಟ್ಟಿತು.
ಮೊದಲಾರ್ಧದಲ್ಲೇ ಕ್ರೊಯೇಷ್ಯಾ ಹೆಚ್ಚಿನ ಅಂತರದ ಮುನ್ನಡೆ ಸಾಧಿಸುವ ಅವಕಾಶಗಳನ್ನು ಪಡೆದಿತ್ತು. ವ್ಲಾಸಿಕ್ ಅವರ ಒಂದು ಶಾಟ್ ಗೋಲ್‌ಪೋಸ್ಟ್‌ಗೆ ತಾಗಿ ಹೊರಬಿದ್ದರೆ, ಮೊಡ್ರಿಚ್ ನೀಡಿದ ಫ್ರೀಕಿಕ್ ಅನ್ನು ಮರಿನ್ ಪೊಂಗ್ರಾಚಿಕ್ ಹೆಡರ್ ಮೂಲಕ ಗೋಲು ಗಳಿಸಲು ವಿಫಲರಾದರು.
ಘಾನಾ ಪರ ಆಂಟೊಯ್‌್ನ ಸೆಮೆನ್ಯೊ ಮೊದಲಾರ್ಧದ ಅಂತ್ಯದಲ್ಲಿ ಸಮಬಲ ಸಾಧಿಸುವ ಸುವರ್ಣಾವಕಾಶವನ್ನು ಅಲ್ಪ ಅಂತರದಲ್ಲಿ ಕೈಚೆಲ್ಲಿದರು.ಕಳೆದ ಋತುವಿನಲ್ಲಿ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ 17 ಗೋಲುಗಳನ್ನು ಗಳಿಸಿದ್ದ ಸೆಮೆನ್ಯೊ, ಈ ವಿಶ್ವಕಪ್‌ನಲ್ಲಿ ಪನಾಮಾ, ಇಂಗ್ಲೆಂಡ್ ಹಾಗೂ ಕ್ರೊಯೇಷ್ಯಾ ವಿರುದ್ಧದ ಮೂರು ಪಂದ್ಯಗಳಲ್ಲೂ ಗೋಲು ಗಳಿಸಲು ವಿಫಲರಾದರು. ಆದಾಗ್ಯೂ, ಘಾನಾ ಈಗಾಗಲೇ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿರುವುದರಿಂದ, ಮುಂದಿನ ಪಂದ್ಯಗಳಲ್ಲಿ ಸೆಮೆನ್ಯೊಗೆ ತಮ್ಮ ಗೋಲು ಖಾತೆ ತೆರೆಯುವ ಮತ್ತೊಂದು ಅವಕಾಶ ಲಭಿಸಲಿದೆ.
ಉಜ್ಬೇಕಿಸ್ತಾನ ವಿರುದ್ಧ 3-1 ಜಯ ಸಾಧಿಸಿದ ಕಾಂಗೋ ಮೊದಲ ಭಾರಿಗೆ ನಾಕೌಟ್ ಹಂತಕ್ಕೆ
ಅಟ್ಲಾಂಟಾ, ಜೂ.28-ಯೋಆನೆ ವಿಸ್ಸಾಅವರ ಎರಡು ಗೋಲುಗಳು ಹಾಗೂ ಫಿಸ್ಟನ್ ಮಯೆಲೆ ಅವರ ನಿರ್ಣಾಯಕ ಗೋಲಿನ ನೆರವಿನಿಂದ ಕಾಂಗೋ, ಉಜ್ಬೇಕಿಸ್ತಾನವನ್ನು 3-1 ಗೋಲುಗಳಿಂದ ಮಣಿಸಿ ಫಿಫಾ ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಮೊದಲ ಬಾರಿಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಕಾಂಗೋ ಪ್ರಭಲ ಇಂಗ್ಲೆಂಡ್ ವಿರುದ್ಧದ ನಾಕೌಟ್ ಪಂದ್ಯಕ್ಕೆಅರ್ಹತೆ ಪಡೆದುಕೊಂಡಿದೆ.
ಪಂದ್ಯದ 10ನೇ ನಿಮಿಷದಲ್ಲಿ ಉಜ್ಬೇಕಿಸ್ತಾನದ ಎಲ್ಡೋರ್ ಶೊಮುರೊಡೊವ್ ಗಳಿಸಿದ ಗೋಲಿನಿಂದ ಶುಭಾರಂಭ ಮಾಡಲಾಗಿತ್ತು ಮೊದಲಾರ್ಥದಲ್ಲಿ 1-0 ಅಂತದಲ್ಲಿ ಹಿಡಿತ ಸಾಧಿಸಲಾಗಿತ್ತು.ಆದರೆ ದ್ವಿತೀಯಾರ್ಧದಲ್ಲಿ ಕಾಂಗೋ ಅದ್ಭುತ ಪುನರಾಗಮನ ಮಾಡಿ 68ನೇ ನಿಮಿಷದಲ್ಲಿ ಉಜ್ಬೇಕಿಸ್ತಾನದ ಅಬ್ದುಕೋದಿರ್ ಖುಸಾನೋವ್ ಮಾಡಿದ ಫೌಲ್‌ಗೆ ಪೆನಾಲ್ಟಿ ದೊರೆತಿದ್ದು, ಯೋಆನೆ ವಿಸ್ಸಾಅದನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿ ಸಮಬಲ ಸಾಧಿಸಿದರು.
ನಂತರ 78ನೇ ನಿಮಿಷದಲ್ಲಿ, ಬದಲಿ ಆಟಗಾರ ಫಿಸ್ಟನ್ ಮಯೆಲೆ ಉತ್ತಮ ಆಟ ಪ್ರದರ್ಶಿಸಿ ಲೕಈಲಾಚಾಲವಾಗಿ ಚೆಂಡನ್ನು ಗೋಲಿನೊಳಗೆ ತಳ್ಳಿ ಕಾಂಗೋಗೆ 2-1 ಮುನ್ನಡೆ ತಂದುಕೊಟ್ಟರು. ಈ ಗೋಲಿನ ಸಂಭ್ರಮದಲ್ಲಿ ಬೆಂಚ್‌ನಲ್ಲಿದ್ದ ಆಟಗಾರರೂ ಮೈದಾನಕ್ಕಿಳಿದು ಸಂಭ್ರಮಿಸಿದರು.ನಿಗದಿತ ಸಮಯ ಮುಗಿದು ಹೆಚ್ಚುವರಿ ಸಮಯದಲ್ಲಿ ವಿಸ್ಸಾ ಮತ್ತೊಂದು ಅದ್ಭುತ ಕರ್ವಿಂಗ್ ಶಾಟ್ ಮೂಲಕ ಗೋಲು ಗಳಿಸಿ ಕಾಂಗೋದ 3-1 ಜಯವನ್ನು ಖಚಿತಪಡಿಸಿದರು.
ನಮಗೆ ಡ್ರಾ ಸಾಕಾಗುತ್ತಿರಲಿಲ್ಲ. ಗೆಲುವು ಅನಿವಾರ್ಯವಾಗಿತ್ತು. ಆದ್ದರಿಂದ ಕೊನೆಯವರೆಗೂ ಹೋರಾಡಿದೆವು ಎಂದು ಮಯೆಲೆ ಹೇಳಿದರು.ಎರಡು ಗೋಲುಗಳ ಗಳಿಸಿದ ನಾಯಕ ವಿಸ್ಸಾ ಪ್ರತಿಕ್ರಿಯೆ ನೀಡಿ ಈ ಕ್ಷಣಕ್ಕಾಗಿ ನಾವು ಬಹಳ ಕಷ್ಟಪಟ್ಟಿದ್ದೇವೆ. ನಮ ತಂಡದ ಪ್ರತಿಯೊಬ್ಬ ಆಟಗಾರ ಮತ್ತು ಕಾಂಗೋ ದೇಶದ ಜನರು ಈ ಸಾಧನೆಯ ಬಗ್ಗೆ ಹೆಮ್ಮೆಪಡಬೇಕು ಎಂದು ಹೇಳಿದರು.
ತರಬೇತುದಾರ ಸೆಬಾಸ್ಟಿಯನ್ ಡೆಸಾಬ್ರೆ ಗೋಲು ಬಿಟ್ಟುಕೊಟ್ಟರೂ ನಮ ತಂಡ ಹೋರಾಟ ಬಿಡುವುದಿಲ್ಲ. ದೃಢಸಂಕಲ್ಪದಿಂದ ಪುನರಾಗಮನ ಮಾಡುವ ಸಾಮರ್ಥ್ಯ ನಮಲ್ಲಿದೆ, ಎಂದು ಹೇಳಿದರು.
ಈ ಪಂದ್ಯಕ್ಕೂ ಮುನ್ನ ಕಾಂಗೋ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ವಿರುದ್ಧ 1-1 ಡ್ರಾ ಸಾಧಿಸಿ ಅಚ್ಚರಿ ಮೂಡಿಸಿತ್ತು. ಬಳಿಕ ಉಜ್ಬೇಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳಲ್ಲಿ ಒಂದಾಗಿ ನಾಕೌಟ್ ಹಂತಕ್ಕೇರಿದೆ.
ಇನ್ನೊಂದೆಡೆ, ವಿಶ್ವಕಪ್‌ಗೆ ಮೊದಲ ಬಾರಿಗೆ ಅರ್ಹತೆ ಪಡೆದಿದ್ದ ಉಜ್ಬೇಕಿಸ್ತಾನದ ಅಭಿಯಾನ ಮೂರು ಪಂದ್ಯಗಳಲ್ಲೂ ಸೋಲಿನೊಂದಿಗೆ ಅಂತ್ಯಗೊಂಡಿತು. ಈ ಟೂರ್ನಿಯ ಅನುಭವ ಭವಿಷ್ಯದಲ್ಲಿ ನಮ್ಮ ತಂಡಕ್ಕೆ ಹೆಚ್ಚಿನ ಪ್ರೇರಣೆ ನೀಡಲಿದೆ, ಎಂದು ಉಜ್ಬೇಕಿಸ್ತಾನದ ತರಬೇತುದಾರ ಫಾಬಿಯೊ ಕನ್ನವಾರೊ ಹೇಳಿದರು.
