ಹ್ಯೂಸ್ಟನ್,ಜು.4- ಅಝೆದ್ದೀನ್ ಔನಾಹಿ ಅವರ ಅದ್ಬುತ ಆಟದ ನೆರವಿನೊಂದಿಗೆ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಕೆನಡಾವನ್ನು 3-0 ಗೋಲುಗಳಿಂದ ಮಣಿಸಿ ಮೊರಾಕೊ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿ ಇತಿಹಾಸ ಸೃಷ್ಠಿಸಿದೆ.
ಈ ಗೆಲುವಿನೊಂದಿಗೆ ಮೊರಾಕೊ, ವಿಶ್ವಕಪ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಐತಿಹಾಸಿಕ ಸಾಧನೆ ಮಾಡಿದೆ.
2022ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕನ್ ತಂಡ ಎಂಬ ದಾಖಲೆ ಬರೆದಿದ್ದ ಮೊರಾಕೊ, ಇದೀಗ ಸತತ ಎರಡನೇ ಬಾರಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ರಕ್ಷಣಾತಕ ಆಟವಾಡಿ ಗೋಲು ಗಳಿಸಲು ವಿಫಲವಾದವು ಆದರೆ 50ನೇ ನಿಮಿಷದಲ್ಲಿ ಅಶ್ರಫ್ ಹಕಿಮಿ ನೀಡಿದ ಫ್ರೀಕಿಕ್ ಪಾಸ್ ಅನ್ನು ಅಝೆದ್ದೀನ್ ಔನಾಹಿ ಪೆನಾಲ್ಟಿ ಬಾಕ್‌್ಸನ ಹೊರಗಿನಿಂದ ಚಂಡನ್ನು ಬಲವಾಗಿ ಗೋಲಿನ ಬಲೆಗೆ ಬೀಳಿಸಿ ಮೊರಾಕೊಗೆ 1-0 ಮುನ್ನಡೆ ತಂದುಕೊಟ್ಟರು.
ನಂತರ ಚುರಕಿನ ಆಟ ಕಂಡುಬಂದು ಪಂದ್ಯದ 82ನೇ ನಿಮಿಷದಲ್ಲಿ ಬ್ರಹೀಮ್ ಡಿಯಾಸ್ ಚಿಂಡಿನ ಮೇಲೆ ಹಿಡಿತ ಸಾಧಿಸಿ ಮತ್ತೊಮೆ ಔನಾಹಿಗೆ ಪಾಸ್ ನೀಡಿದಾಗ ಅವರು ಲೕಲಾಜಾಲವಾಗಿ ಗೋಲು ಭಾರಿಸಿ ತಂಡದ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು. ಹೆಚ್ಚುವರಿ ಸಮಯದ ಕೊನೆಯ ನಿಮಿಷದಲ್ಲಿ ಸೌಫಿಯಾನ್ ರಹಿಮಿ ಮತ್ತೊಂದು ಗೋಲು ದಾಖಲಿಸಿ ಮೊರಾಕೊದ ಗೆಲುವನ್ನು 3-0 ಅಂತರದಲ್ಲಿ ಖಚಿತಪಡಿಸಿದರು.
ಈ ಸೋಲಿನೊಂದಿಗೆ ಸಹ ಆತಿಥೇಯ ಕೆನಡಾದ ಐತಿಹಾಸಿಕ ವಿಶ್ವಕಪ್ ಪಯಣ ಅಂತ್ಯಗೊಂಡಿತು. ಕೆನಡಾ ತಂಡ ತನ್ನ ಮೊದಲ ನಾಕೌಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 1-0 ಗೋಲುಗಳಿಂದ ಮಣಿಸಿ ಮೊದಲ ಬಾರಿಗೆ 16ರ ಸುತ್ತಿನ ಗೆಲುವು ದಾಖಲಿಸಿತ್ತು. ಸದ್ಯ ಮೊರಾಕೊ-ಫ್ರಾನ್ಸ್ ನಡುವಿನ ಸೂಪತ್8 ನಾಕೌಟ್ ಪಂದ್ಯ ಬೋಸ್ಟನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ.
ವಿಶ್ವಕಪ್ ಫುಟ್‌ಬಾಲ್: ಎಂಬಾಪೆ ಪೆನಾಲ್ಟಿ ಗೋಲಿನಿಂದ ಫ್ರಾನ್ಸ್ ಗೆ ಗೆಲುವು; ಪರಾಗ್ವೆ ವಿರುದ್ಧ 1-0 ಜಯಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ
ಫಿಲಡೆಲ್ಫಿಯಾ,ಜು.5- ಕೈಲಿಯನ್ ಎಂಬಾಪೆ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ, ತೀವ್ರ ಬಿಸಿಯ ವಾತಾವರಣದಲ್ಲೂ ಪರಾಗ್ವೆ ವಿರುದ್ಧ 1-0 ಅಂತರದ ಗೆಲುವು ಸಾಧಿಸಿ ಸತತ ನಾಲ್ಕನೇ ಬಾರಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿತು. ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡ ಜುಲೈ 10ರಂದು ಮ್ಯಾಸಚೂಸೆಟ್ಸ್ ನ ಫಾಕ್‌್ಸಬರೋದಲ್ಲಿ ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೊರಾಕೊ ತಂಡವನ್ನು ಎದುರಿಸಲಿದೆ.
ಪಂದ್ಯದ ವೇಳೆ ಉಷ್ಣಾಂಶ ಸುಮಾರು 38 ಡಿಗ್ರಿ ಸೆಲ್ಸಿಯಸ್ ತಲುಪಿದ್ದರಿಂದ ತೀವ್ರ ಬಿಸಿಗಾಳಿ ಎಚ್ಚರಿಕೆ ಜಾರಿಯಲ್ಲಿತ್ತು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ದಿಟ್ಟ ರಕ್ಷಣಾ ಆಟವಾಡಿದ ಪರಾಗ್ವೆ ತಂಡದ ವಿರುದ್ಧ ಫ್ರಾನ್ಸ್ ಗೆ ಗೋಲು ಗಳಿಸಲು 70ನೇ ನಿಮಿಷದವರೆಗೂ ಕಾಯಬೇಕಾಯಿತು.
ವೀಡಿಯೊ ಸಹಾಯಕ ತೀರ್ಪುಗಾರ ಪರಿಶೀಲನೆಯ ಬಳಿಕ ಪರಾಗ್ವೆಯ ಡಿಯೆಗೊ ಗೊಮೆಸ್ ಅವರು ಫ್ರಾನ್‌್ಸ ಆಟಗಾರನನ್ನು ಕೆಳಗೆ ಬೀಳಿಸಿದ್ದಾಗಿ ತೀರ್ಪುಗಾರರು ಪೆನಾಲ್ಟಿ ನೀಡಿದರು.
ಈ ಅವಕಾಶವನ್ನು ಕೈಲಿಯನ್ ಎಂಬಾಪೆ ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ವಿಶ್ವಕಪ್‌ನಲ್ಲಿ ಇದು ಎಂಬಾಪೆ ಅವರ ವೃತ್ತಿಜೀವನದ 19ನೇ ಗೋಲಾಗಿದ್ದು, ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿಅವರ 20 ಗೋಲುಗಳ ದಾಖಲೆಯಿಂದ ಕೇವಲ ಒಂದು ಗೋಲು ಹಿಂದಿದ್ದಾರೆ. ಈ ಟೂರ್ನಿಯಲ್ಲಿ ಮೆಸ್ಸಿ ಮತ್ತು ಎಂಬಾಪೆ ತಲಾ ಏಳು ಗೋಲುಗಳೊಂದಿಗೆ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
2022ರ ಕತಾರ್ ವಿಶ್ವಕಪ್‌ನಲ್ಲಿ ಗೋಲ್ಡನ್ ಬೂಟ್ ಗೆದ್ದಿದ್ದ ಎಂಬಾಪೆ, ಆ ಟೂರ್ನಿಯ ಫೈನಲ್‌ನಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ವಿರುದ್ಧ ಸೋಲು ಅನುಭವಿಸಿದ್ದರು. ದ್ವಿತೀಯಾರ್ಧದಲ್ಲಿ ಎಂಬಾಪೆಗೆ ಮತ್ತೊಂದು ಉತ್ತಮ ಅವಕಾಶ ದೊರೆತರೂ ಅದನ್ನು ಬಳಸಿಕೊಳ್ಳಲು ವಿಫಲರಾದರು. ಫ್ರಾನ್ಸ್ ನ ಮನು ಕೋನೆ ಅವರ ಮೇಲ್ಮೂಲೆಗೆ ಹೋಗುತ್ತಿದ್ದ ಚೆಂಡು ಪ್ರಬಲ ಶಾಟ್ ಅನ್ನು ಪರಾಗ್ವೆ ಗೋಲ್‌ಕೀರ್ಪ ಒರ್ಲಾಂಡೊ ಗಿಲ್ ಅದ್ಭುತವಾಗಿ ತಡೆದರು. ಹೆಚ್ಚುವರಿ ಸಮಯದಲ್ಲಿಯೂ ಎಂಬಾಪೆ ಅವರ ಎರಡು ಅಪಾಯಕಾರಿ ಪ್ರಯತ್ನಗಳನ್ನು ಗಿಲ್ ಯಶಸ್ವಿಯಾಗಿ ತಡೆದು ಪರಾಗ್ವೆಗೆ ಇನ್ನಷ್ಟು ಗೋಲು ಬೀಳದಂತೆ ತಡೆದರು.
