ನಿತ್ಯ ನೀತಿ : ಗೊತ್ತಿದ್ದೂ ಯಾರನ್ನು ನೋಯಿಸಬೇಡಿ. ಕೆಲವರು ಅತ್ತು ಸುಮನಾದ್ರೆ, ಮತ್ತೇ ಕೆಲವರು ಮನಸ್ಸಿಗಚ್ಚಿಕೊಂಡು ಕೊರಗುತ್ತಾರೆ. ಯಾಕಂದ್ರೆ ಅವ್ರು ನಿಮನ್ನು ನಮವರು ಅಂದುಕೊಂಡಿರುತ್ತಾರೆ.
ಪಂಚಾಂಗ : ಭಾನುವಾರ, 05-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ: ಶತಭಿಷಾ / ಯೋಗ: ಆಯುಷಾನ / ಕರಣ: ಗರಜ
ಸೂರ್ಯೋದಯ – ಬೆ.5.58
ಸೂರ್ಯಾಸ್ತ – 06.51
ರಾಹುಕಾಲ – 4.30-6.00
ಯಮಗಂಡ ಕಾಲ – 12.00- 1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ ;
ಮೇಷ: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ವೃಷಭ: ಚಾಡಿ ಮಾತುಗಳನ್ನು ಕೇಳದಿರಿ. ಉದ್ಯೋಗದ ಕಡೆ ಗಮನ ನೀಡುವುದು ಒಳಿತು.
ಮಿಥುನ: ಕಾನೂನು ತೊಡಕು ಎದುರಿಸಬೇಕಾದ ಸಂದರ್ಭ ಬರಬಹುದು. ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ.
ಕಟಕ: ನಿಮ್ಮ ಸ್ವಭಾವದಲ್ಲಿ ಬದಲಾವಣೆಯಾಗ ಬೇಕು. ತಾಳ್ಮೆ- ಸಂಯಮ ತಂದುಕೊಳ್ಳಬೇಕು.
ಸಿಂಹ: ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ. ಸುಖದಲ್ಲಿ ಮೈ ಮರೆಯದಿರಿ.
ಕನ್ಯಾ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶ ಗಳು ಒದಗಿ ಬರಲಿವೆ.
ತುಲಾ: ಆರೋಗ್ಯಸಮಸ್ಯೆ ಗಳು ಎದುರಾಗಬಹುದು. ಸೂಕ್ತ ಸಮಯಕ್ಕೆ ವೈದ್ಯರ ಸಲಹೆ ಪಡೆಯುವುದು ಒಳಿತು.
ವೃಶ್ಚಿಕ: ಸಂಗಾತಿಯಿಂದ ಸ್ವಲ್ಪ ಮಟ್ಟಿಗೆ ನಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವಂತಹ ನಿರ್ಧಾರ ಮಾಡದಿರಿ.
ಧನುಸ್ಸು:ಉದ್ಯೋಗದಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಸಾ ಸಲು ಸಾಧ್ಯವಾಗುವುದಿಲ್ಲ.
ಮಕರ: ಶತ್ರುಗಳ ಕಾಟ ಇರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ.
ಕುಂಭ:ವೈದ್ಯಕೀಯ ವೆಚ್ಚಗಳು ವಿಪರೀತವಾಗಲಿವೆ. ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ.
ಮೀನ: ಸೋದರ ಸಂಬಂ ಗಳು ಒಡವೆ ಮಾಡಿಸಿಕೊಡುವ ಸಾಧ್ಯತೆ ಇದೆ.
