Homeಕ್ರೀಡಾ ಸುದ್ದಿಅಮೆರಿಕಕ್ಕೆ ಸೋಲುಣಿಸಿದ ಬೆಲ್ಜಿಯಂ ಕ್ವಾರ್ಟರ್‌ಫೈನಲ್‌ಗೆ

ಅಮೆರಿಕಕ್ಕೆ ಸೋಲುಣಿಸಿದ ಬೆಲ್ಜಿಯಂ ಕ್ವಾರ್ಟರ್‌ಫೈನಲ್‌ಗೆ

Belgium defeats Team USA 4-1 at Seattle Stadium, advances to World Cup quarterfinals

ಸಿಯಾಟಲ್‌‍,ಜು.7-ನಿರೀಕ್ಷೆಯಂತೆ ಬಲಿಷ್ಠ ಬೆಲ್ಜಿಯಂ ಎದುರಾಳಿ ಅಮೆರಿಕ ತಂಡವನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಚಾರ್ಲ್ಸ್ ಡಿ ಕೆಟೆಲಾರೆ ಅವರ ಅದ್ಬುತ ಎರಡು ಗೋಲೕನ ನೆರವಿನೊಂದಿಗೆ ಬೆಲ್ಜಿಯಂ ತಂಡ ಆತಿಥೇಯ ಅಮೆರಿಕವನ್ನು 4-1 ಗೋಲುಗಳಿಂದ ಮಣಿಸಿ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮಿಂಚು ಹರಿಸಿದೆ.

ಅಮೆರಿಕದ ರಕ್ಷಣಾ ಆಟಗಾರರ ತಪ್ಪುಗಳನ್ನು ಸಮರ್ಥವಾಗಿ ಬಳಸಿಕೊಂಡ ಬೆಲ್ಜಿಯಂ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಫಿಫಾ ಅಮಾನತನ್ನು ಹಿಂಪಡೆದಿದ್ದರಿಂದ ಫೋಲರಿನ್‌ ಬಾಲೋಗುನ್‌ ಅಮೆರಿಕ ತಂಡಕ್ಕೆ ಮರಳಿದ್ದರೂ, ಅವರು ತಂಡದ ಸೋಲನ್ನು ತಪ್ಪಿಸಲು ನೆರವಾಗಲಿಲ್ಲ.ಪಂದ್ಯದ ಎಂಟನೇ ನಿಮಿಷದಲ್ಲೇ ಡಿ ಕೆಟೆಲಾರೆ ಗೋಲು ಗಳಿಸಿ ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟರು. ಈ ವಿಶ್ವಕಪ್‌ನಲ್ಲಿ ಅಮೆರಿಕ ಮೊಟ್ಟಮೊದಲ ಬಾರಿಗೆ ಆರಂಭಿಕ ಗೋಲು ಬಿಟ್ಟುಕೊಟ್ಟಿತು.

ನಂತರ 31ನೇ ನಿಮಿಷದಲ್ಲಿ ಭರವಸೆಯ ಆಟಗಾರ ಮಾಲಿಕ್‌ ಟಿಲ್‌ಮನ್‌ ಫ್ರೀ ಕಿಕ್‌ನಲ್ಲಿ ಗೋಲು ಭಾರಿಸುವ ಮೂಲಕ ಅಮೆರಿಕಕ್ಕೆ 1-1ರ ಸಮಬಲ ತಂದುಕೊಟ್ಟರು. ಆದರೆ ಕೇವಲ 61 ಸೆಕೆಂಡುಗಳ ಬಳಿಕವೇ ಡಿ ಕೆಟೆಲಾರೆ ಮತ್ತೊಮೆ ಅಮೆರಕ ರಕ್ಷಣಾ ಗೆರೆ ಭೇದಿಸಿ ಗೋಲು ದಾಖಲಿಸಿ ಬೆಲ್ಜಿಯಂಗೆ 2-1ರ ಮುನ್ನಡೆ ಒದಗಿಸಿದರು.

ದ್ವಿತೀಯಾರ್ಧದಲ್ಲಿ ಅಮೆರಿಕದ ಗೋಲ್‌ಕೀಪರ್‌ ಮ್ಯಾಟ್‌ ಫ್ರೀಸ್‌‍ ಮಾಡಿದ ಎಡವಟ್ಟನ್ನು ಬೆಲ್ಜಿಯಂ ಸದುಪಯೋಗಪಡಿಸಿಕೊಂಡಿತು. ಡಿ ಕೆಟೆಲಾರೆ ಅವರ ನೆರವಿನಿಂದ ಹಾನ್‌್ಸವ್ಯಾನಾಕೆನ್‌ 57ನೇ ನಿಮಿಷದಲ್ಲಿ ಗೋಲು ಗಳಿಸಿ ಅಂತರವನ್ನು 3-1ಕ್ಕೆ ಹೆಚ್ಚಿಸಿದರು.
ಬದಲಿ ಆಟಗಾರನಾಗಿ ಕಣಕ್ಕಿಳಿದ ರೊಮೆಲು ಲುಕಾಕು ಹೆಚ್ಚುವರಿ ಸಮಯದ ಮೂರನೇ ನಿಮಿಷದಲ್ಲಿ ನಾಲ್ಕನೇ ಗೋಲು ದಾಖಲಿಸಿ ಬೆಲ್ಜಿಯಂನ ಗೆಲುವಿಗೆ ಮುದ್ರೆ ಒತ್ತಿದರು.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಅಮೆರಿಕದ ಕೋಚ್‌ ಮೌರಿಸಿಯೊ ಪೊಚೆಟ್ಟಿನೊ, ಆರಂಭದಿಂದಲೇ ನಮ ಆಟದಲ್ಲಿ ಹೊಂದಾಣಿಕೆ ಇರಲಿಲ್ಲ. ಈ ಸೋಲಿನಿಂದ ಪಾಠ ಕಲಿಯಬೇಕಿದೆ. ಉಳಿದ ವಿಶ್ವಕಪ್‌ ಪಂದ್ಯಗಳಂತೆ ಈ ಪಂದ್ಯವನ್ನು ಏಕೆ ಎದುರಿಸಲಿಲ್ಲ ಎಂಬುದನ್ನು ವಿಶ್ಲೇಷಿಸಬೇಕಿದೆ ಎಂದು ಹೇಳಿದರು.

ಪಂದ್ಯದ 52ನೇ ನಿಮಿಷದಲ್ಲಿ ಬೆಲ್ಜಿಯಂ ನಾಯಕ ಯೂರಿ ಟಿಲೆಮಾನ್ಸ್ ಅವರ ಬೂಟ್‌ಗೆ ಅಮೆರಿಕದ ನಾಯಕ ಕ್ರಿಸ್ಟಿಯನ್‌ ಪುಲಿಸಿಕ್‌ ಅವರ ಬಲಪಾದ ತಗುಲಿದ್ದರಿಂದ ಅವರು ಗಾಯಗೊಂಡರು. ಬಳಿಕ 59ನೇ ನಿಮಿಷದಲ್ಲಿ ಅವರನ್ನು ಬದಲಾಯಿಸಲಾಯಿತು.
48 ತಂಡಗಳ ವಿಸ್ತೃತ ಮಾದರಿಯ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮೂರು ಪಂದ್ಯಗಳನ್ನು ಗೆದ್ದಿದ್ದ ಅಮೆರಿಕ, 2002ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌‍ ಪ್ರವೇಶಿಸುವ ಕನಸನ್ನು ನನಸಾಗಿಸಿಕೊಳ್ಳಲು ವಿಫಲವಾಯಿತು. ವಿಶ್ವಕಪ್‌ನಲ್ಲಿ ಬೆಲ್ಜಿಯಂ ವಿರುದ್ಧ ಇದು ಅಮೆರಿಕಕ್ಕೆ ಸತತ ಏಳನೇ ಸೋಲಾಗಿದೆ.

ಈ ಫಲಿತಾಂಶದೊಂದಿಗೆ ಉತ್ತರ ಮತ್ತು ಮಧ್ಯ ಅಮೆರಿಕದ ಎಲ್ಲಾ ಆರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಆತಿಥೇಯ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲೇ ನಿರ್ಗಮಿಸಿವೆ. ಪರಿಣಾಮ, ಕ್ವಾರ್ಟರ್‌ಫೈನಲ್‌ನಲ್ಲಿ ಯುರೋಪ್‌, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕ ಖಂಡಗಳ ತಂಡಗಳು ಮಾತ್ರ ಉಳಿದಿವೆ.

ಬೆಲ್ಜಿಯಂ ಪರ ಜೆರೆಮಿ ಡೊಕು ಹಾಗೂ ಕೆವಿನ್‌ ಡಿ ಬ್ರುಯ್ನೆ ಅವರನ್ನು ಆರಂಭಿಕ ತಂಡದಲ್ಲಿ ಆಡಿಸದಿದ್ದರೂ, ತಂಡದ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಇದೇ ವೇಳೆ, ಪಂದ್ಯದ ಮೊದಲಾರ್ಧದಲ್ಲಿ ಮೊಣಕಾಲಿನ ಗಾಯಕ್ಕೊಳಗಾದ ಅಮಡೌ ಒನಾನ ಅವರನ್ನು ಬದಲಿಸಿ ಹಾನ್‌್ಸ ವ್ಯಾನಾಕೆನ್‌ ಅವರನ್ನು ಕಣಕ್ಕಿಳಿಸಲಾಯಿತು. ಗಾಯ ಗಂಭೀರವಾಗಿರುವ ಸಾಧ್ಯತೆ ಇದೆ ಎಂದು ಬೆಲ್ಜಿಯಂ ಕೋಚ್‌ ರೂಡಿ ಗಾರ್ಸಿಯಾ ತಿಳಿಸಿದ್ದಾರೆ.
ಪಂದ್ಯ ಮುಗಿದ ನಂತರ ಕೆಲ ಅಮೆರಿಕ ಆಟಗಾರರು ಕಣ್ಣೀರು ಹಾಕಿದ್ದಾರೆ.ವಿಶ್ವಕಪ್‌ ಆಯೋಜಿಸಿದ್ದ ಮೂರು ತಂಡಗಳು ಟೋರ್ನಿಯಿಂದ ಹೊರಬಿದ್ದಿದೆ.

ಈ ಗೆಲುವಿನೊಂದಿಗೆ ಬೆಲ್ಜಿಯಂ ವಿಶ್ವಕಪ್‌ನಲ್ಲಿ ಸತತ 18 ಪಂದ್ಯಗಳಲ್ಲಿ ಸೋಲಿಲ್ಲದ ದಾಖಲೆ ಮುಂದುವರಿಸಿದೆ. ಕ್ವಾರ್ಟರ್‌ಫೈನಲ್‌ನಲ್ಲಿ 2010ರ ಚಾಂಪಿಯನ್‌ ಸ್ಪೇನ್‌ ವಿರುದ್ಧ ಸೆಣಸಲಿದ್ದು, ಗೆದ್ದ ತಂಡ ಸೆಮಿಫೈನಲ್‌ನಲ್ಲಿ ಫ್ರಾನ್‌್ಸಅಥವಾ ಮೊರಾಕೊವನ್ನು ಎದುರಿಸಲಿದೆ.

RELATED ARTICLES

Latest News