Homeರಾಜ್ಯಗೊಲ್ಲರಹಟ್ಟಿಯಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನ

ಗೊಲ್ಲರಹಟ್ಟಿಯಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನ

ಬೆಂಗಳೂರು,ಜು.9- ನಗರದ ಹೊರವಲಯದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಗಡಿ ರೋಡ್‌ನ ನೈಸ್‌‍ ರಸ್ತೆ ಸಮೀಪದ ದೊಡ್ಡ ಗೊಲ್ಲರಹಟ್ಟಿ ಹತ್ತಿರ ಇಂದು ಮುಂಜಾನೆ ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಳಗ್ಗೆ 6.50ರ ಸುಮಾರಿಗೆ ದೊಡ್ಡಗೊಲ್ಲರಹಟ್ಟಿ ಸಮೀಪದ ಬಿಇಎಲ್‌ ಲೇಔಟ್‌ ಬಳಿ ಇರುವ ಮನೆಯೊಂದರ ಕಾಂಪೌಂಡ್‌ ಜಿಗಿದು ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಕಂಡುಬಂದಿದೆ. ನಗರದ ಸೆರಗಿನಲ್ಲೇ ಇರುವ ಜನವಸತಿ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭೀತಿ ಉಂಟು ಮಾಡಿದೆ. ಸಾರ್ವಜನಿಕರ ನಿದ್ದೆಗೆಡಿಸಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

RELATED ARTICLES
spot_img

Latest News