*ಜಯಪ್ರಕಾಶ್
ತಮ ಗಾನ ಮಾಧುರ್ಯದಿಂದ 1960ರ ನಂತರ ಚಿತ್ರರಂಗದ ಹಲವು ದಿಗ್ಗಜ ಸಂಗೀತ ನಿರ್ದೇಶಕರ ಚಿತ್ರಗಳಿಗೆ ಜೀವ ತುಂಬಿದ ಗಾನಕೋಗಿಲೆ ಎಸ್. ಜಾನಕಿ ತೆಲುಗು, ತಮಿಳು ಚಿತ್ರರಂಗದಷ್ಟೇ, ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿಯೂ ತಮ ಸಂಗೀತ ಸುಧೆ ಹರಿಸಿದ್ದಾರೆ.
ಕನ್ನಡ ಚಿತ್ರರಂಗದ ಮೇರು ಸಂಗೀತ ನಿರ್ದೇಶಕರಾದ ಜಿ.ಕೆ.ವೆಂಕಟೇಶ್, ವಿಜಯ್ ಭಾಸ್ಕರ್, ಎಂ.ರಂಗರಾವ್ , ರಾಜನ್ ನಾಗೇಂದ್ರ, ಹಂಸಲೇಖರಂತಹ ದಿಗ್ಗಜರ ಸಿನಿಮಾಗಳಲ್ಲಿ ತಮ ಕೋಗಿಲೆ ಕಂಠದಿಂದ ಹಾಡಿರುವ ಗೀತೆಗಳು ಇಂದಿಗೂ ಹಚ್ಚಹಸಿರಾಗಿದೆ.
60ರ ದಶಕದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಪಿ. ಸುಶೀಲಾ, 70, 80ರಲ್ಲಿ ವಾಣಿಜಯರಾಂ ಹಾಗೂ ಚಿತ್ರಾ ಅವರ ನಡುವೆ ತಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಎಸ್. ಜಾನಕಿ ಅವರು ವಿಜಯ್ ಭಾಸ್ಕರ್ ಅವರ ಸಂಗೀತ ನಿರ್ದೇಶನದ ಗೆಜ್ಜೆಪೂಜೆ, ಬೆಳ್ಳಿಮೋಡ, ಉಪಾಸನೆ, ಸೀತಾ ಚಿತ್ರಗಳಲ್ಲಿನ ಹಾಡುಗಳಿಗೆ ಜೀವತುಂಬಿದ್ದರು. ಗೆಜ್ಜೆಪೂಜೆ ' ಸಿನಿಮಾದಗಗನವು ಎಲ್ಲೋ ಭೂಮಿಯು ಎಲ್ಲೋ….’ ಎಂಬ ಗೀತೆ ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಹಸಿರಾಗಿದೆ.
ಜಿ.ಕೆ.ವೆಂಕಟೇಶ್ ಸಿನಿಮಾಗಳಿಗೂ ಜೀವ ತುಂಬಿದ ಸ್ವರ ಸಾಧಕಿ:
1960ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ ಸ್ವರ ವೈಭವದಿಂದ ಗಮನ ಸೆಳೆದಿದ್ದ ಜಿ.ಕೆ.ವೆಂಕಟೇಶ್ ಅವರ ಹಲವು ಸಿನಿಮಾಗಳಿಗೆ ಎಸ್.ಜಾನಕಿ ಅವರು ತಮ ಸ್ವರ ಮಾಧುರ್ಯದಿಂದ ಜೀವ ತುಂಬಿದ್ದರು. ಸಂಧ್ಯಾರಾಗ'ದನಂಬಿದೆ ನಿನ್ನ ನಾದ ದೇವತೆ….’ ಹಾಗೂ ಸನಾದಿ ಅಪ್ಪಣ್ಣ ' ಸಿನಿಮಾದಕರೆದರೂ ಕೇಳದೆ…..’ ಗೀತೆಗಳು ಎಸ್.ಜಾನಕಿ ಅವರು ತಮ ಗಾನ ಪಯಣದಲ್ಲಿ ಆಡಿದ ಎರಡು ಮೇರು ಮಟ್ಟದ ಗೀತೆಗಳಾಗಿವೆ. ಅಲ್ಲದೆ ಪದಭೂಷಣ, ವರನಟ ಡಾ.ರಾಜ್ಕುಮಾರ್ ಅವರು ನಟಿಸಿದ್ದ ಮಹಿಷಾಸುರ ಮರ್ದಿನಿ' ಸಿನಿಮಾದತುಂಬಿತು ಮನವ….’ ಎಂಬ ಗೀತೆಯು ಎಸ್.ಜಾನಕಿ ಅವರು ಹಾಡಿದ ಮೊದಲ ಯುಗಳ ಗೀತೆ ಆಗಿದ್ದು,ನಂತರ ಹಲವು ಸರಣೀಯ ಡ್ಯುಯೆಟ್ ಗೀತೆಗಳ ಮೂಲಕ ಕೇಳುಗರ ಕಿವಿ ಇಂಪಾಗಿಸಿದ್ದಾರೆ.
ಮನಮುಟ್ಟಿದ ಡ್ಯೂಯೆಟ್ ಗೀತೆಗಳು:
ಭಾವಗೀತೆ, ಶಾಸೀಯ, ಜಾನಪದ ವಲ್ಲದೆ ಎಸ್. ಜಾನಕಿ ಅವರು ಹಾಡಿರುವ ಡ್ಯೂಯೆಟ್ ಗೀತೆಗಳು ಇಂದಿಗೂ ಗುನುಗುವಂತಿವೆ. ಇಳಯರಾಜರ ನಂತರ ಎಸ್. ಜಾನಕಿ ಅವರು ರಾಜನ್ – ನಾಗೇಂದ್ರ ಅವರ ಸಿನಿಮಾಗಳಲ್ಲಿ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.
ಸಿನಿಮಾರಂಗದಲ್ಲಿ ಎಸ್ ಪಿಬಿ ಹಾಗೂ ಎಸ್. ಜಾನಕಿ ಅವರನ್ನು ಉತ್ತಮ ಸಂಗೀತ ಜೋಡಿ ಎಂದು ಬಿಂಬಿಸಿದ್ದು, ಈ ಜೋಡಿಯು ರಾಜನ್ – ನಾಗೇಂದ್ರ ಅವರ ಸಂಗೀತ ಜೋಡಿಯಲ್ಲಿ ಮೂಡಿಬಂದ ಎರಡು ಕನಸು',ಹೊಂಬಿಸಿಲು’, ಗಾಳಿಮಾತು',ಪಾವನ ಗಂಗಾ’, `ಅವಳ ಹೆಜ್ಜೆ ‘ ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ಹಾಡಿರುವ ಯುಗಳ ಗೀತೆಗಳು ಸಂಗೀತ ಪ್ರಿಯರನ್ನು ರಂಜಿಸಿವೆ.
ಡಾ.ರಾಜ್ ರೊಂದಿಗೂ ಮೋಡಿ:
ಕನ್ನಡ ಚಿತ್ರರಂಗ ಕಂಡ ಸಂಗೀತ ಮಾಂತ್ರಿಕರಲ್ಲಿ ಒಬ್ಬರಾದ ಎಂ.ರಂಗರಾವ್ ಅವರ ಹಲವು ಸಿನಿಮಾಗಳ ಗೀತೆಗಳಿಗೆ ಜಾನಕಮ ಉಸಿರಾಗಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ' ಸಿನಿಮಾದಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ…’ ಗೀತೆಯು ಇಂದಿಗೂ ಗುನುಗುವಂತಿದೆ. ಎಂ.ರಂಗರಾವ್ ರವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ವಸಂತಗೀತ',ಹೊಸಬೆಳಕು’, ಸಮಯದ ಗೊಂಬೆ ' ಸಿನಿಮಾಗಳ ಗೀತೆಗಳಲ್ಲಿ ಗಾನಗಂಧರ್ವ ಡಾ. ರಾಜ್ ಕುಮಾರ್ ಅವರೊಂದಿಗೆ ಹಾಡಿರುವ ಗೀತೆಗಳು ಕೇಳುಗರನ್ನು ಮೋಡಿ ಮಾಡಿದೆ . ರಾಷ್ಟ್ರ ಕವಿ ಕುವೆಂಪು ಅವರು ರಚಿಸಿರುವತೆರೆದಿದೆ ಮನೆ ಓ ಬಾ ಅತಿಥಿ…’ ಎಂಬ ಗೀತೆಯನ್ನು `ಹೊಸಬೆಳಕು’ ಚಿತ್ರಕ್ಕೆ ಬಳಸಿಕೊಂಡಿದ್ದು ಎಸ್. ಜಾನಕಿ ಅವರು ಸ್ವರವಾಗಿದ್ದಾರೆ.
ಹಂಸಲೇಖರ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಗಾಯನ:
ಚಂದನವನ ಕಂಡ ಲೆಜೆಂಡ್ ಸಂಗೀತ ನಿರ್ದೇಶಕರ ಸಾಲಿನಲ್ಲಿ ನಾದಬ್ರಹ ಹಂಸಲೇಖ ಕೂಡ ನಿಂತಿದ್ದಾರೆ. ಹಂಸಲೇಖರ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಎಸ್.ಪಿ.ಬಾಲಸುಬ್ರಹಣ್ಯಂ ಹಾಗೂ ಎಸ್.ಜಾನಕಿ ಅವರು ಮುಂಚೂಣಿ ಗಾಯಕರಾಗಿದ್ದರು. ಈ ಜೋಡಿಯು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋಡಿಮಾಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದ ಗೀತೆಗಳು ಹಿಟ್ ಆಗುವುದರಲ್ಲಿ ಹಂಸಲೇಖ, ಎಸ್.ಪಿ.ಬಾಲಸುಬ್ರಹಣ್ಯಂ ಹಾಗೂ ಎಸ್.ಜಾನಕಿ ಅವರ ಕೊಡುಗೆ ಅಪಾರ. ಪ್ರೇಮಲೋಕ ' ಹಾಗೂರಣಧೀರ’ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ ಆಗಿರುವುದರಲ್ಲಿ ಎಸ್.ಜಾನಕಿ ಅಮನವರ ಧ್ವನಿಯೇ ಕಾರಣ.
ಭಾರತ ಚಿತ್ರರಂಗದ ಮೇರು ಸಂಗೀತ ನಿರ್ದೇಶಕ ಇಳಯರಾಜಾರ ಜೊತೆಗೆ ಎರಡು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಎಸ್. ಜಾನಕಿ ಅವರು ಇಳಯರಾಜರ 4 ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ಎ.ಆರ್.ರೆಹಮಾನ್, ಮಲಯಾಳಂನ ಸಂಗೀತ ಸಾವ್ರಾಟ ಎಂ.ಎಸ್.ಬಾಬುರಾಜು ಸೇರಿದಂತೆ ಹಲವು ಸಂಗೀತ ದಿಗ್ಗಜರ ಸಿನಿಮಾಗಳಲ್ಲಿ ಹಲವು ಗೀತೆಗಳನ್ನು ಎಸ್.ಜಾನಕಿ ಅವರು ಹಾಡಿದ್ದು, ಅವರನ್ನು ಅಜರಾಮರವಾಗಿಸುತ್ತದೆ.
ಚಿತ್ರರಂಗದಲ್ಲಿ ಡ್ಯೂಯೆಟ್ ಗೀತೆಗಳು ಎಂದರೆ ತಕ್ಷಣ ನೆನಪಿಗೆ ಬರುತ್ತಿದ್ಜ ಗಾನಕೋಗಿಲೆ ಎಸ್.ಜಾನಕಿ ಅವರು ಎಸ್.ಪಿ.ಬಾಲಸುಬ್ರಹಣ್ಯಂ, ಮಲೇಷಿಯಾ ವಾಸುದೇವನ್, ಮನು, ಯೇಸುದಾಸ್, ಜಯಚಂದ್ರನ್ ಜೊತೆಗೆ 200ಕ್ಕೂ ಹೆಚ್ಚು ಯುಗಳ ಗೀತೆಗಳನ್ನು ಹಾಡಿರುವ ಎಸ್.ಜಾನಕಿ ಅವರು ಇನ್ನು ನೆನಪು ಮಾತ್ರ.
ಮಹಾನಟಿ ಸಾವಿತ್ರಿ ಚಿತ್ರಕ್ಕೆ ಹಾಡಲು ನಿರಾಕರಿಸಿದ್ದ ಎಸ್.ಜಾನಕಿ
ದಕ್ಷಿಣ ಭಾರತದ ಗಾನಕೋಗಿಲೆ ಎಸ್.ಜಾನಕಿ ಅವರು ತಮ 6 ದಶಕಗಳ ಗಾನ ಪಯಣದಲ್ಲಿ ಮೂರು ತಲೆಮಾರಿನ ಹಲವು ಸುಪ್ರಸಿದ್ಧ ನಾಯಕಿ ನಟಿಯರ ಸಿನಿಮಾಗಳಿಗೆ ಧ್ವನಿಗೂಡಿಸಿದ್ದರೂ, ಮಹಾನಟಿ ಸಾವಿತ್ರಿ ಸಿನಿಮಾಗಳಿಗೆ ಹಾಡಲು ನಿರಾಕರಿಸಿದ್ದರು.ಇದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಎಸ್.ಜಾನಕಿ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸಾವಿತ್ರಿ ಅವರ ಚಿತ್ರಜೀವನದ ಆರಂಭದಲ್ಲಿ ಪಿ.ಲೀಲಾ ಅವರು ಹಾಡುತ್ತಿದ್ದರು. ಮಾಯಾಬಜಾರ್',ಮಿಸ್ಸಮ’ದಂತಹ ಮಹೋನ್ನತ ಸಿನಿಮಾಗಳಲ್ಲಿ ಸಾವಿತ್ರಿ ಅವರಿಗಾಗಿ ಹಾಡಿದ ಹಾಡುಗಳು ಬಲು ಜನಪ್ರಿಯಗೊಂಡಿದ್ದವು. ಅವರ ನಂತರ ಪಿ.ಸುಶೀಲಾ ಅವರು ಧ್ವನಿಗೂಡಿಸಿದ್ದರು. ನನ್ನ ಚಿತ್ರದ ಹಾಡುಗಳನ್ನು ಸುಶೀಲಾ ಅವರೇ ಹಾಡಬೇಕೆಂದು ಸಾವಿತ್ರಿ ಅವರು ಕಟ್ಟುಪಾಡು ವಿಧಿಸಿದ್ದರಂತೆ.
ಒಮೆ ತಮಿಳು ಸಿನಿಮಾವೊಂದರಲ್ಲಿ ಸಾವಿತ್ರಿ ಅವರ ಪಾತ್ರಕ್ಕೆ ಜಾನಕಿ ಒಂದು ಹಾಡನ್ನು ಹಾಡಿದ್ದರು. ಆ ಹಾಡು ಅದ್ಭುತವಾಗಿ ಮೂಡಿಬಂದಿದ್ದರೂ, ಅದನ್ನು ಬೇಡವೆಂದು ಮತ್ತೆ ಸುಶೀಲಮ ಅವರಿಂದ ರೀ-ಟೇಕ್ ಮಾಡಿಸಲಾಯಿತು. ಆ ಘಟನೆಯಿಂದ ಬೇಸರಗೊಂಡ ಜಾನಕಿ, ಅಂದಿನಿಂದ ಸಾವಿತ್ರಿ ಅವರ ಹಾಡುಗಳನ್ನು ಹಾಡಬಾರದೆಂದು ನಿರ್ಧರಿಸಿದ್ದರು.
ಆದರೆ ನೀಲಿಲ ಪಾಡೇದ ದೇವ ಗೀತೆಯಲ್ಲಿ ಸಾವಿತ್ರಿ ಅವರು ನಟಿಸುತ್ತಿದ್ದು, ನಾನು ಈ ಗೀತೆಯನ್ನು ಹಾಡುವುದಿಲ್ಲ ಎಂದು ಎಸ್.ಜಾನಕಿ ಅವರು ಹೇಳಿದ್ದರು.ಆದರೆ ಚಿತ್ರದ ನಿರ್ಮಾಪಕರು ಈ ಗೀತೆಯಲ್ಲಿ ಸಾವಿತ್ರಿ ಅವರು ನಟಿಸುತ್ತಿಲ್ಲ ಎಂದು ಹೇಳಿದ್ದರಾದರೂ ಆ ಗೀತೆಯಲ್ಲಿ ಸಾವಿತ್ರಿ ಅವರು ನಟಿಸಿದ್ದರು ಎಂದು ಎಸ್.ಜಾನಕಿ ಅವರು ಸಂದರ್ಶನದಲ್ಲಿ ತಿಳಿಸಿದ್ದರು.
ನಾದಬ್ರಹರಿಂದ ವಿಶೇಷ ಬಿರುದು :
ಸ್ವರ ಸಾಧಕಿ ಎಸ್.ಜಾನಕಿ ಅವರ ಗಾನಕ್ಕೆ ಮಾರುಹೋದ ಸಂಗೀತ ಪ್ರೇಮಿಗಳು ಅವರಿಗೆ ಗಾನ ಕೋಗಿಲೆ',ಕರುನಾಡ ಕೋಗಿಲೆ’ ಎಂಬ ಬಿರುದುಗಳನ್ನು ನೀಡಿದ್ದರು.
ಎಸ್.ಜಾನಕಿ ಅವರು ಎಂದಿಗೂ ಪ್ರಶಸ್ತಿ ಹಾಗೂ ಬಿರುದುಗಳ ಹಿಂದೆ ಬಿದ್ದವರೇ ಅಲ್ಲ,ಆದರೆ ಅವರನ್ನು ಅರಸಿ ಬಂದ ಪ್ರಶಸ್ತಿಗಳು ಹಾಗೂ ಬಿರುದುಗಳಿಗೆ ಎಣೆಯೇ ಇರಲಿಲ್ಲ. 2013ರಲ್ಲಿ ಅವರಿಗೆ ದೇಶದ ಪ್ರತಿಷ್ಠಿತ ಪದ್ಮಭೂಷಣ'ಪ್ರಶಸ್ತಿ ಒಲಿದುಬಂದಿದ್ದರೂ ಅದನ್ನು ತಿರಸ್ಕರಿಸಿದ್ದರು. ಕರ್ನಾಟಕ ಸರ್ಕಾರದಿಂದ ಗೌರವಾನ್ವಿತರಾಜ್ಯೋತ್ಸವ ಪ್ರಶಸ್ತಿ’ ಹಾಗೂ ತಮಿಳುನಾಡು ಸರ್ಕಾರದಿಂದ ಕಲೈ ಮಾಮಣಿ ಪ್ರಶಸ್ತಿ' ಮುಡಿಗೇರಿಸಿಕೊಂಡಿದ್ದರು. ಅಲ್ಲದೆ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ, ವಿವಿಧ ರಾಜ್ಯಗಳಿಂದ 33 ಬಾರಿ ರಾಜ್ಯ ಪ್ರಶಸ್ತಿಗಳು ಒಲಿದು ಬಂದಿದೆ. ಯಾವುದೇ ಗೀತೆಯಾಗಲಿ ಮನತುಂಬಿ ಹಾಡುತ್ತಿದ್ದ ಎಸ್.ಜಾನಕಿ ಅವರಿಗೆ ನಾದಬ್ರಹ್ಮ ಹಂಸಲೇಖ ಅವರುನಾದ ದೇವತೆ’ ಎಂಬ ಬಿರುದು ನೀಡಿದ್ದರು.
ಗಾಯಕಿಯರೊಂದಿಗೆ ಎಸ್.ಜಾನಕಿ ಜುಗಲ್ಬಂದಿ
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಯುಗಳ ಗೀತೆಗಳನ್ನು ಹಾಡಿರುವ ಹೆಗ್ಗಳಿಕೆ ಹೊಂದಿರುವ ಗಾನಕೋಗಿಲೆ ಎಸ್. ಜಾನಕಿ ಅವರು ಅಂದಿನ ದಿಗ್ಗಜ ಗಾಯಕಿಯರೊಂದಿಗೆ ಆಡಿರುವ ಜುಗಲ್ ಬಂದಿ ಗೀತೆಗಳು ಕೂಡ ಇಂದಿಗೂ ಸಂಗೀತ ಪ್ರಿಯರ ಹಾಟ್ ಫೇವರೀಟ್ ಗೀತೆಗಳಾಗಿವೆ.
ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಭಾಷೆಗಳಲ್ಲಿ ಪಿ.ಸುಶೀಲಾ, ವಾಣಿ ಜಯರಾಮ್, ಕೆ.ಎಸ್.ಚಿತ್ರಾ, ಎಲ್.ಆರ್.ಈಶ್ವರಿ ಅಲ್ಲದೆ ಬಾಲಿವುಡ್ನ ಲೆಜೆಂಡ್ ಆಶಾ ಭೋಂಸ್ಲೆ ಅವರ ಜೊತೆಗೂ ಎಸ್. ಜಾನಕಿ ಅವರು ಡುಯೆಟ್ ಗೀತೆಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ತೆಲುಗಿನ ಭಕ್ತಿಪ್ರಧಾನ ಹಾಗೂ ಪೌರಾಣಿಕ ಸಿನಿಮಾಗಳಾದ ಭಕ್ತಪ್ರಹ್ಲಾದ' ಸಿನಿಮಾದಹೇ ಜ್ಯೋತಿ ಸ್ವರೂಪ….’ ಹಾಗೂ ದಾನ ವೀರ ಶೂರ ಕರ್ಣ ' ಸಿನಿಮಾದತೆಲಿಸೆನುಲೆ ಪ್ರಿಯ ರಸಿಕ …’ ಗೀತೆಗಳಲ್ಲಿ ಎಸ್.ಜಾನಕಿ ಹಾಗೂ ಪಿ.ಸುಶೀಲಾ ಅವರ ಧ್ವನಿಯಲ್ಲಿ ಮೂಡಿಬಂದ ಗೀತೆಗಳು ಇಂದಿಗೂ ಇಂಪೆನಿಸುತ್ತವೆ. ಕನ್ನಡದಲ್ಲಿ ಆಶಾ ಸುಂದರಿ' ಸಿನಿಮಾದಅಮೃತಮಯ ಈ ಸ್ನೇಹ…’ ಎಂಬ ಗೀತೆಯೊಂದಿಗೆ ಶುರುವಾದ ಈ ಜೋಡಿಯ ಗೀತಪಯಣ ಶ್ರೀಕೃಷ್ಣ ದೇವರಾಯ',ಕಳ್ಳ ಕುಳ್ಳ ‘, `ಗುರು ಶಿಷ್ಯರು ‘ ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಂದಾಗಿ ಮುಂದುವರಿದಿತ್ತು.
ಇನ್ನು ವಾಣಿಜಯರಾಂ ಜೊತೆಗೆ ವಿಜಯವಾಣಿ ' ಸಿನಿಮಾಕ್ಕಾಗಿ ಹಾಡಿದಮಧುಮಾಸ ಚಂದ್ರಮ….’ ಗೀತೆಯು ಕೇಳುಗರ ಮನದಲ್ಲಿ ಮನೆಮಾಡಿದೆ. ಈ ಜೋಡಿಯು ಕನ್ನಡದಲ್ಲಿ ಮಾತ್ರವಲ್ಲದೆ ಮಲಯಾಳಂ, ತಮಿಳಿನ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಹಾಡಿದ್ದಾರೆ.
ಕನ್ನಡ ಸಿನಿಮಾ ಲೋಕ ಕಂಡ ಮತ್ತೊಬ್ಬ ಶ್ರೇಷ್ಠ ಗಾಯಕಿ ಕೆ.ಎಸ್.ಚಿತ್ರಾರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಎಸ್.ಜಾನಕಿ ಅವರು ಪಾಳೇಗಾರ' ಸಿನಿಮಾದಅಂಜುಮಲ್ಲಿಗೆ….’ , ಮೇಘಮಾಲೆ' ಸಿನಿಮಾದಮೇಘರಾಜನೆ….’ ಅಲ್ಲದೆ ತಮಿಳಿನ ಕೆಲವು ಗೀತೆಗಳನ್ನು ಜೋಡಿಯಾಗಿ ಹಾಡಿದ್ದಾರೆ.
ತಮ್ಮದೇ ಆದ ಮಾದಕ ಧ್ವನಿಯಿಂದ ಕೇಳುಗರ ಬಳಗವನ್ನೇ ಸೃಷ್ಟಿಸಿಕೊಂಡಿದ್ದ ಎಲ್.ಆರ್.ಈಶ್ವರಿ ಜೊತೆಗೆ ದಶಾವತಾರ',ಕಣ್ಣು ತೆರೆದು ನೋಡು’ ,`ಅಡ್ಡದಾರಿ ‘ ಸೇರಿದಂತೆ ಹಲವು ಸಿನಿಮಾಗಳಲ್ಲಿ ಎಸ್.ಜಾನಕಿ ಅವರು ಜೋಡಿ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದಾರೆ.
ಪಿ.ಲೀಲಾ, ಬೆಂಗಳೂರು ಲತಾ, ಬಿ.ಕೆ.ಸುಮಿತ್ರ ಸೇರಿದಂತೆ ಹಲವು ಸಹ ಗಾಯಕಿಯರೊಂದಿಗೆ ಎಸ್.ಜಾನಕಿ ಅವರು ಸುಶ್ರಾವ್ಯ ಗೀತೆಗಳನ್ನು ಮನಮುಟ್ಟುವಂತೆ ಹಾಡಿದ್ದಾರೆ.
ಬಾಲಿವುಡ್ನಲ್ಲೂ ಗಮನ ಸೆಳೆದ ಎಸ್.ಜಾನಕಿ:
ದಕ್ಷಿಣ ಭಾರತವಲ್ಲದೆ ಉತ್ತರ ಭಾರತದ ಚಿತ್ರರಂಗದಲ್ಲೂ ಗಮನ ಸೆಳೆದಿದ್ದ ಎಸ್.ಜಾನಕಿ ಅವರು ಗಾನ ಕೋಗಿಲೆ ಆಶಾ ಭೋಂಸ್ಲೆ ಜೊತೆಗೆ ಭಾಗವತ್' ಸಿನಿಮಾದನಾಚ್ ಲೋ ಜೂಮ್….’ ಗೀತೆಯಲ್ಲಿ ಪೈಪೋಟಿಗೆ ಬಿದ್ದಂತೆ ಹಾಡಿದ್ದಾರೆ.
ಬಾವುಕರಾದ ಚಿನ್ನೇಗೌಡರು :
ಎಸ್.ಜಾನಕಿ ಅಮ್ಮನವರು ಇಲ್ಲ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ನನಗೆ ನಂಬಲು ಸಾಧ್ಯವಾಗಲಿಲ್ಲ.ಆಘಾತ ಸುದ್ದಿ ಕೇಳಿ ಒಂದು ಕ್ಷಣ ನಾನು ದಿಗ್ಭ್ರಾಂತನಾದೆ ಎಂದು ಖ್ಯಾತ ನಿರ್ಮಾಪಕ ಎಸ್.ಎ. ಚಿನ್ನೇಗೌಡರು ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಹತ್ತಿರದಿಂದ ನೋಡಿದ್ದೇನೆ.ಅವರ ಸೌಮ್ಯನಡೆ, ಮಾನವೀಯತೆ ಎಂದು ಮರೆಯುವಂತಿಲ್ಲ ಎಂದು ಭಾವುಕರಾದರು.
ಮಲಯಾಳಂ ವೇದಿಕೆ ಕನ್ನಡ ಹಾಡು
ಗಾನಕೋಗಿಲೆ ಎಸ್.ಜಾನಕಿ ಅವರು ಆಂಧ್ರಪ್ರದೇಶದಲ್ಲಿ ಜನಿಸಿದ್ದರೂ ಕೂಡ ಕನ್ನಡ ನಾಡು, ಗಂಧದ ಗುಡಿಯ ಚಿತ್ರರಂಗದ ಬಗ್ಗೆ ಅಪಾರ ಗೌರವ ಹೊಂದಿದ್ದರು. ನಾನು ಹುಟ್ಟಿದ್ದು ಆಂಧ್ರದಲ್ಲಾದರೂ ನನ್ನ ಅಂತಿಮ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಹೆಬ್ಬಯಕೆಯನ್ನು ಎಸ್.ಜಾನಕಿ ಅವರು ಹೊಂದಿದ್ದರು. ಅವರ ಆಸೆಯಂತೆಯೇ ಗಾನಕೋಗಿಲೆಯು ಆಂಧ್ರಪ್ರದೇಶದಲ್ಲಿ ಐಷಾರಾಮಿ ಮನೆ ಇದ್ದರೂ ಕೂಡ ತಮ್ಮ ಅಂತಿಮ ದಿನಗಳನ್ನು ಮೈಸೂರಿನಲ್ಲಿ ಕಳೆದು ಅಲ್ಲೇ ಇಹಲೋಕದ ಪಯಣ ಮುಗಿಸಿದ್ದಾರೆ.
ಎಸ್.ಜಾನಕಿ ಅವರ ಕನ್ನಡ ಪ್ರೇಮ ಎಷ್ಟರಮಟ್ಟಿಗೆ ಇತ್ತೆಂದರೆ ಮಲಯಾಳಂನ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲೂ ಸಹ ಕನ್ನಡ ಹಾಡನ್ನು ಹಾಡುವ ಮೂಲಕ ಕನ್ನಡತನವನ್ನು ಮೆರೆದಿದ್ದರು. ಆದರೆ ಈ ಹಾಡು ನನ್ನ ವೃತ್ತಿ ಜೀವನದಲ್ಲೇ ಹಾಡಿದ ಬಲು ಕಠಿಣ ಸವಾಲಾಗಿದೆ ಎಂದು ಹೇಳಿದ್ದರು.
ಅಂದು ಅವರು ವೇದಿಕೆಯಲ್ಲಿ ಆಡಿದ್ದು ಕನ್ನಡದ ಹೇಮಾವತಿ' ಚಿತ್ರದಶಿವ ಶಿವ ಎನ್ನದ ನಾಲಿಗೆ ಏಕೆ’ ಹಾಡು. ಸಿದ್ದಲಿಂಗಯ್ಯ ನಿರ್ದೇಶನದ `ಹೇಮಾವತಿ’ ಸಿನಿಮಾ 1977ರಲ್ಲಿ ತೆರೆಗೆ ಬಂದಿತ್ತು. ಎಲ್. ವೈದ್ಯನಾಥನ್ ಸಂಗೀತದ ಈ ಹಾಡಿಗೆ ಚಿ. ಉದಯಶಂಕರ್ ಸಾಹಿತ್ಯ ಬರೆದಿದ್ದರು.
ಎಸ್.ಜಾನಕಿ ಸಂಗೀತ ಅಧ್ಯಯನ ಕೇಂದ್ರ ಸ್ಥಾಪನೆಗೆ ಚಿಂತನೆ
ಮೈಸೂರು, ಜು. 12- ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಪ್ರತಿಮ ಗಾಯನದ ಮೂಲಕ ಕೋಟ್ಯಂತರ ಸಂಗೀತಾಭಿ ಮಾನಿಗಳ ಹೃದಯ ಗೆದ್ದ ಗಾನ ಕೋಗಿಲೆ ಎಸ್.ಜಾನಕಿ ಸಾರಕ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪಿಸುವ
ಕುರಿತು ಗಂಭೀರ ಚಿಂತನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜ್ಞಾನ ಪ್ರಕಾಶ್ ತಿಳಿಸಿದ್ದಾರೆ.
ಎಸ್.ಜಾನಕಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರು, ಅವರ ಗಾಯನ ಪರಂಪರೆ ಮುಂದಿನ ಪೀಳಿಗೆಗೆ ತಲುಪಬೇಕು ಎಂದು ಹೇಳಿದ್ದಾರೆ.ಕನ್ನಡದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಎಸ್.ಜಾನಕಿ ಅವರ ಅಗಲಿಕೆ ನಮೆಲ್ಲರಿಗೂ ಅಪಾರ ನೋವು ತಂದಿದೆ. ಅವರ ಕಂಠಸಿರಿ, ಗಾಯನ ವೈಭವ ಮತ್ತು ಸಂಗೀತ ಪರಂಪರೆ ಮುಂದಿನ ಪೀಳಿಗೆಗಳಿಗೂ ತಲುಪಬೇಕು ಎಂದು ಅವರು ತಿಳಿಸಿದ್ದಾರೆ.
