Homeಆರೋಗ್ಯ / ಜೀವನಶೈಲಿಬಜ್ಜಿ, ಬೋಂಡಾ, ಬರ್ಗರ್‌ ತಿನ್ನುವ ಮುನ್ನ ಹುಷಾರ್..!

ಬಜ್ಜಿ, ಬೋಂಡಾ, ಬರ್ಗರ್‌ ತಿನ್ನುವ ಮುನ್ನ ಹುಷಾರ್..!

Be careful before eating bajji, bonda, burger

ಬೆಂಗಳೂರು, ಜು.24- ಬಜ್ಜಿ, ಬೋಂಡಾ, ಪಕೋಡಾ, ಫ್ರೆಂಚ್‌ ಫ್ರೈಸ್‌‍, ಬರ್ಗರ್‌, ಪಿಜ್ಜಾ ಸೇರಿದಂತೆ ಎಣ್ಣೆಯಲ್ಲಿ ಕರಿದ ಮತ್ತು ಸಂಸ್ಕರಿತ ಆಹಾರಗಳು ನಿಮ ಹೃದಯಕ್ಕೆ ಮಾರಕವಾಗಬಹುದು ಇರಲಿ ಎಚ್ಚರ….ಇಂತಹ ಆಹಾರಗಳಲ್ಲಿ ಕಂಡುಬರುವ ಟ್ರಾನ್ಸ್ ಫ್ಯಾಟ್‌ ಹೃದಯದ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತದೆ ಎಂದು ಆಹಾರ ಸುರಕ್ಷತಾ ಇಲಾಖೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿವೆ.

ಟ್ರಾನ್‌್ಸ ಫ್ಯಾಟ್‌ ದೇಹಕ್ಕೆ ಹಾನಿಕಾರಕವಾದ ಒಂದು ವಿಧದ ಕೊಬ್ಬಾಗಿದ್ದು, ಒಂದೇ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಇದರ ಪ್ರಮಾಣ ಹೆಚ್ಚಾಗುತ್ತದೆ. ರಸ್ತೆ ಬದಿ ತಿಂಡಿಗಳು, ಬೇಕರಿ ಉತ್ಪನ್ನಗಳು, ಫಾಸ್ಟ್‌ ಫುಡ್‌‍, ಚಿಪ್ಸ್‌‍, ಪ್ಯಾಕೆಟ್‌ ಸ್ನ್ಯಾಕ್ಸ್ ಹಾಗೂ ಡಾಲ್ಡಾದಿಂದ ತಯಾರಿಸಿದ ಸಿಹಿ ಪದಾರ್ಥಗಳಲ್ಲಿ ಟ್ರಾನ್‌್ಸ ಫ್ಯಾಟ್‌ ಹೆಚ್ಚಾಗಿ ಕಂಡುಬರುತ್ತದೆ.

ಆಹಾರ ಸುರಕ್ಷತಾ ಇಲಾಖೆಯ ಪ್ರಕಾರ, ನಿಯಮ ಉಲ್ಲಂಘಿಸಿದ 40 ಆಹಾರ ಉತ್ಪಾದಕರಿಗೆ ಈಗಾಗಲೇ ನೋಟಿಸ್‌‍ ಜಾರಿ ಮಾಡಲಾಗಿದ್ದು, ಬಳಸಿದ ಅಡುಗೆ ಎಣ್ಣೆ ಮರುಬಳಕೆ ಹಾಗೂ ಇತರೆ ಉಲ್ಲಂಘನೆಗಳಿಗೆ 28.91 ಲಕ್ಷ ದಂಡ ವಿಧಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 45.87 ಲಕ್ಷ ಲೀಟರ್‌ ಬಳಸಿದ ಅಡುಗೆ ಎಣ್ಣೆ ಮರುಬಳಕೆಯಾಗಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯಾದ್ಯಂತ 52 ಸಾವಿರಕ್ಕೂ ಹೆಚ್ಚು ಆಹಾರ ಉತ್ಪಾದಕರಿಗೆ ತರಬೇತಿ ನೀಡಲಾಗಿದ್ದು, 6 ಲಕ್ಷಕ್ಕೂ ಹೆಚ್ಚು ಜನರಿಗೆ ಟ್ರಾನ್ಸ್ ಫ್ಯಾಟ್‌ನ ಅಪಾಯಗಳ ಕುರಿತು ಜಾಗೃತಿ ಮೂಡಿಸಲಾಗಿದೆ.
ಕೈಗಾರಿಕಾ ಉತ್ಪನ್ನಗಳಲ್ಲಿ ಟ್ರಾನ್ಸ್ ಫ್ಯಾಟ್‌ ಪ್ರಮಾಣವು ಶೇಕಡಾ 2ರೊಳಗೆ ಇರಬೇಕು ಎಂದು ಇಲಾಖೆ ಸೂಚಿಸಿದೆ.

ಟ್ರಾನ್ಸ್ ಫ್ಯಾಟ್‌ನಿಂದಾಗುವ ಅಪಾಯಗಳು:
ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾಗುತ್ತದೆ.ಒಳ್ಳೆಯ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆಯಾಗುತ್ತದೆ.ಪಾರ್ಶ್ವವಾಯು (ಸ್ಟ್ರೋಕ್‌‍) ಅಪಾಯ ಹೆಚ್ಚುತ್ತದೆ.
ಮಧುಮೇಹದ ಸಾಧ್ಯತೆ ಹೆಚ್ಚಾಗುತ್ತದೆ.ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಏರಿಕೆಯಾಗುತ್ತದೆ ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.

RELATED ARTICLES

Latest News