Homeರಾಜಕೀಯಇದ್ದಕ್ಕಿದ್ದಂತೆ ಯು ಟರ್ನ್‌ ಹೊಡೆದ ಸಚಿವ ಸತೀಶ್‌ ಜಾರಕಿಹೊ

ಇದ್ದಕ್ಕಿದ್ದಂತೆ ಯು ಟರ್ನ್‌ ಹೊಡೆದ ಸಚಿವ ಸತೀಶ್‌ ಜಾರಕಿಹೊ

Minister Satish Jarkiholi makes sudden U-turn

ಬೆಂಗಳೂರು, ಜು.24- ಮುಂದಿನ 2028ಕ್ಕೆ ತಾವು ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಪಾದಿಸುತ್ತಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಇದ್ದಕ್ಕಿದ್ದಂತೆ ಯು ಟರ್ನ್‌ ಹೊಡೆದಿದ್ದು, ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028 ದೂರ ಇದೆ. ಆ ಬಗ್ಗೆ ಚಿಂತೆಯಿಲ್ಲ. ಈಗ ಸಚಿವ ಸ್ಥಾನ ಇದೆ. ಇದರಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದಿದ್ದಾರೆ.ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೈಕಮಾಂಡ್‌ ನಾಯಕರು ಆ ಬಗ್ಗೆ ನಿರ್ಧಾರ ಮಾಡಬೇಕು. ಆದರೆ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಹೆಚ್ಚಿಸಿ, ಸಮುದಾಯದ ಮುಖಂಡರನ್ನು ನೇಮಿಸುವುದರಿಂದ ಕಾಂಗ್ರೆಸ್‌‍ನ ಬಲ ಹೆಚ್ಚಾಗುತ್ತದೆ. ನಾನು ಉಪ ಮುಖ್ಯಮಂತ್ರಿ ಹುದ್ದೆಗೆ ಲಾಬಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಹೆಚ್ಚುವರಿ ಸ್ಥಾನಗಳು ದೊರೆಯುವ ಬಗ್ಗೆ ವಿಶ್ವಾಸವಿದೆ. ಅದರಲ್ಲಿ ಲಕ್ಷ್ಮಣ ಸವದಿಗಾದರೂ ಅವಕಾಶ ಸಿಗಬಹುದು ಅಥವಾ ಬೇರೆಯವರಿಗೂ ಅವಕಾಶ ಸಿಗಬಹುದು ಎಂದರು.ತಾವು ಇಂಥವರಿಗೆ ಸಚಿವ ಸ್ಥಾನ ಕೊಡಬೇಡಿ ಎಂದು ಯಾರ ಮೇಲೂ ಒತ್ತಡ ಹೇರಿಲ್ಲ. ಕೆಲವರು ತಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದರು.

RELATED ARTICLES
spot_img

Latest News