Homeರಾಜ್ಯಕೃಷಿಹೊಂಡಕ್ಕೆ ಹಾರಿ ತಾಯಿ-ಮಕ್ಕಳ ಆತ್ಮಹತ್ಯೆ : ಕೋಲಾರದಲ್ಲಿ ಮನ ಕಲಕುವ ಘಟನೆ

ಕೃಷಿಹೊಂಡಕ್ಕೆ ಹಾರಿ ತಾಯಿ-ಮಕ್ಕಳ ಆತ್ಮಹತ್ಯೆ : ಕೋಲಾರದಲ್ಲಿ ಮನ ಕಲಕುವ ಘಟನೆ

Mother and children commit suicide by jumping into a farm well

ಬೆಂಗಳೂರು,ಜು.25-ಕೋಲಾರ ಗ್ರಾಮಾಂತರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮನ ಮಿಡಿಯುವ ಘೋರ ದುರಂತ ನಡೆದಿದ್ದು, ಸಾಲಭಾದೆಯಿಂದ ಮನನೊಂದ ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಕೃಷಿಹೊಂಡಕ್ಕೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ.ಬೆಗ್ಲಿ ಬೆಣಜೇನಹಳ್ಳಿ ನಿವಾಸಿಗಳಾದ ಪ್ರಮೀಳಾ (42) ಹಾಗೂಮಗಳು ಸ್ವಪ್ನಾ (21), ಮಗ ರಾಮ್‌ಚರಣ್‌ (18) ಆತಹತ್ಯೆಗೆ ಶರಣಾದವರು.

ಆಟೋ ಚಾಲಕರಾಗಿರುವ ಸುರೇಶ್‌ ಅವರ ಪತ್ನಿ ಪ್ರಮೀಳಾ ಗೃಹಿಣಿ. ಇವರ ಮಗಳು ಸ್ವಪ್ನಾ ಬಿಕಾಂ ಪದವೀಧರೆಯಾಗಿದ್ದು, ಉನ್ನತ ವ್ಯಾಸಂಗಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಮಗ ರಾಮ್‌ಚರಣ್‌ ಪಿಯುಸಿ ವ್ಯಾಸಂಗ ಮುಗಿಸಿದ್ದು, ಬಿಇ ವ್ಯಾಸಂಗ ಮಾಡಲು ಕಾಲೇಜೊಂದರಲ್ಲಿ ಸೀಟು ಪಡೆದುಕೊಂಡಿದ್ದನು.

ಇತ್ತೀಚೆಗೆ ಸುರೇಶ್‌ ಅವರು ಮನೆಕಟ್ಟಿಸಿದ್ದು, 15 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದಾರೆ. ಈ ಸುಂದರ ಸಂಸಾರದಲ್ಲಿ ಸಾಲ ಎಂಬುವುದು ಕಾಡಿದೆ.ಫೈನಾನ್‌್ಸ ಅವರು ಸಾಲ ಹಿಂದಿರುಗಿಸಲು ಒತ್ತಡ ಹಾಕುತ್ತಿದ್ದರು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು.ನಿನ್ನೆ ಎಂದಿನಂತೆ ಬೆಳಗ್ಗೆ ಸುರೇಶ್‌ ಅವರು ಆಟೋ ತೆಗೆದುಕೊಂಡು ಬಾಡಿಗೆಗೆ ಹೋಗಿದ್ದಾರೆ. ಮನೆಯಲ್ಲಿದ್ದ ಪ್ರಮಿಳಾ ಅವರಿಗೆ ಕೆಟ್ಟ ಆಲೋಚನೆ ಬಂದಿದ್ದು ಏನು ನಿರ್ಧಾರ ಮಾಡಿದ್ದಾರೋ ಗೊತ್ತಿಲ್ಲ.ತನ್ನಿಬ್ಬರು ಮಕ್ಕಳನ್ನು ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ರಾತ್ರಿ 9 ಗಂಟೆ ಸುಮಾರಿನಲ್ಲಿ ಸುರೇಶ್‌ ಅವರು ಮನೆಗೆ ಬಂದಾಗ ಪತ್ನಿ ಮತ್ತು ಮಕ್ಕಳು ಇಲ್ಲದಿರುವುದನ್ನು ಗಮನಿಸಿ ಪತ್ನಿಯ ಮೊಬೈಲ್‌ಗೆ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸಿ ನಾವು ಹೊರಗೆ ಬಂದಿದ್ದೇವೆ, ಕೆಲ ಸಮಯದ ಬಳಿಕ ಬರುತ್ತೇವೆಂದು ಹೇಳಿ ಕರೆಯನ್ನು ಸ್ಥಗಿತಗೊಳಿಸಿದ್ದಾರೆ.ಈ ಮೂವರು ಗ್ರಾಮದ ಹೊರವಲಯದ ಪಕ್ಕದ ಊರಾದ ಛತ್ರಿಕೋಡಿಹಳ್ಳಿಗೆ ಹೋಗಿದ್ದು, ಅಲ್ಲಿನ ಕೃಷಿಹೊಂಡಕ್ಕೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ, ಮಕ್ಕಳು ಎಷ್ಟು ಹೊತ್ತಾದರೂ ಮನೆಗೆ ಹಿಂದಿರುಗದಿದ್ದಾಗ ಗಾಬರಿಗೊಂಡು ಸುರೇಶ್‌ ಅವರು ಪರಿಚಯಿಸ್ಥರನ್ನು ವಿಚಾರಿಸಿದರೂ ಅವರ ಸುಳಿವು ಸಿಕ್ಕಿಲ್ಲ.ಪತ್ನಿ ಮತ್ತು ಮಕ್ಕಳನ್ನು ಹುಡುಕಿಕೊಂಡು ಬೆಳಗ್ಗೆ ಹೋದಾಗ ಕೃಷಿಹೊಂಡದಲ್ಲಿ ಮೂವರ ಶವಗಳು ಪತ್ತೆಯಾಗಿವೆ.

ಸುದ್ದಿ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡಸಿ, ಕೃಷಿ ಹೊಂಡದಿಂದ ಮೂವರ ಮೃತದೇಹಗಳನು ಹೊರಗೆ ತೆಗೆದು ನಂತರ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News