Homeಬೆಂಗಳೂರುಖರ್ತನಾಕ್‌ ಕಾರುಗಳ್ಳರ ಬಂಧನ : 1.74 ಕೋಟಿರೂ.ಮೌಲ್ಯದ 8 ಐಷಾರಾಮಿ ಕಾರುಗಳು ವಶ

ಖರ್ತನಾಕ್‌ ಕಾರುಗಳ್ಳರ ಬಂಧನ : 1.74 ಕೋಟಿರೂ.ಮೌಲ್ಯದ 8 ಐಷಾರಾಮಿ ಕಾರುಗಳು ವಶ

Car thieves arrested: 8 luxury cars worth Rs 1.74 crore seized

ಬೆಂಗಳೂರು,ಜು.28- ಲೋನ್‌ ಪಾವತಿಸಿ ನಿಮ ಕಾರ್‌ಗಳನ್ನು ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಮಾಲೀಕರಿಂದ ಐಷಾರಾಮಿ ಕಾರುಗಳನ್ನು ಪಡೆದು ನಕಲಿ ಆರ್‌ಸಿ ಕಾರ್ಡ್‌ ಸೃಷ್ಟಿಸಿ ತಾವೇ ಮಾಲೀಕರೆಂದು ಬಿಂಬಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರು ಖರ್ತನಾಕ್‌ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಆಡುಗೋಡಿ ಠಾಣೆ ಪೊಲೀಸರು 1.74 ಕೋಟಿ ರೂ. ಮೌಲ್ಯದ 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಶವಂತಪುರದ ನಿವಾಸಿ ಪ್ರಭಾಕರ(42), ರಾಮನಗರ ತಾಲ್ಲೂಕಿನ ವೇಣುಗೋಪಾಲ್‌ (22), ಕೆ.ಆರ್‌ಪುರದ ಪ್ರಶಾಂತ್‌ (36) ಹಾಗೂ ಹೊರಮಾವು ನಿವಾಸಿ
ಭಾಗೇಶ್‌(22) ಬಂಧಿತ ಆರೋಪಿಗಳು.ಆರೋಪಿ ಭಾಗೇಶ್‌ ವಾಹನಗಳಿಗೆ ಬೇಕಾದಂತಹ ನಕಲಿ ಆರ್‌ ಸಿ ಹಾಗೂ ಇನ್ನಿತರ ನಕಲಿ ದಾಖಲೆಗಳನ್ನು ಮಾಡಿಕೊಡುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಎಲೆಕ್ಟ್ರಾನಿಕ್‌ ಸಿಟಿಯ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಕುಖ್ಯಾತ ಕಾರುಗಳ್ಳರನ್ನು ಬಂಧಿಸಿದ್ದಾರೆ.

ಆರೋಪಿಗಳು ಫಿರ್ಯಾದುದಾರರ ಕಾರಿನ ಲೋನ್‌ ಹಣ ತೀರಿಸುವುದಾಗಿ ತಿಳಿಸಿ ಅವರಿಂದ ಕಾರನ್ನು ಪಡೆದು ಲೋನ್‌ ಹಣವನ್ನು ತೀರಿಸದೆ ತಲೆ ಮರೆಸಿಕೊಂಡಿದ್ದರು.ಈ ಕುರಿತಂತೆ ಬಾತೀದಾರರಿಂದ ಬಂದ ಮಾಹಿತಿ ಮೇರೆಗೆ ಯಶವಂತಪುರದ ಎಸ್‌‍ಬಿಐ ಕಾಲೋನಿ ಹಾಗೂ ರಾಮನಗರದ ಗೌಡಯ್ಯನದೊಡ್ಡಿ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಇವರು ನೀಡಿದ ಮಾಹಿತಿ ಮೇರೆಗೆ ಕೆ.ಚನ್ನಸಂದ್ರದ ಪೂಜಾ ಗಾರ್ಡನ್‌ ಹಾಗೂ ಕೆ.ಆರ್‌ಪುರದ ಮಂಜುನಾಥನಗರದಿಂದ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು.
ಆಗ ನಾಲ್ವರು ಇದೇ ರೀತಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಲಕ್ಷಾಂತರ ರೂ. ಮೌಲ್ಯದ ಕೆಲವು ಕಾರುಗಳನ್ನು ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಕಾರುಗಳ ಲೋನ್‌ ಮರುಪಾವತಿಸಿ ವಾಹನ ಖರೀದಿಸುವುದಾಗಿ ನಂಬಿಸಿ ಮಾಲೀಕರಿಂದ ಕಾರುಗಳನ್ನು ಪಡೆದು ನಕಲಿ ಆರ್‌ಸಿ ಕಾರ್ಡ್‌ ಸೃಷ್ಟಿಸಿ, ನೋಂದಣಿ ಪ್ಲೇಟ್‌ ಬದಲಿಸಿ ವಾಹನಗಳ ಮಾಲೀಕರು ನಾವೇ ಎಂದು ನಂಬಿಸಿ ಆ ಕಾರುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳು ಕೇವಲ ಒಂದು ವಾರದಲ್ಲೇ ಮಾರಾಟ ಮಾಡಿದ್ದ 1.74 ಕೋಟಿ ರೂ. ಮೌಲ್ಯದ 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆ ಕಾರುಗಳ ಪೈಕಿ ಇಬ್ಬರು ಮಾಲೀಕರು ಪತ್ತೆಯಾಗಿದ್ದು, ಉಳಿದ ಮಾಲೀಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಖರ್ತನಾಕ್‌ ಕಾರುಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಡಿಸಿಪಿ ಮೊಹಮದ್‌ ಸುಜೀತಾ, ಎಸಿಪಿ ವಾಸುದೇವ್‌, ಆಡುಗೋಡಿ ಇನ್‌್ಸಪೆಕ್ಟರ್‌ ರವಿ ಜಿ.ಕೆ ಮತ್ತಿತರ ಪೊಲೀಸ್‌‍ ಸಿಬ್ಬಂದಿಗಳನ್ನು ಆಯುಕ್ತರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

RELATED ARTICLES

Latest News