Homeರಾಜ್ಯನಾಳೆ ಚನ್ನಮನವರ ಉತ್ತರಕ್ರಿಯಾದಿ ಕಾರ್ಯ : ಅಂತಿಮ ಸಿದ್ಧತೆ ಕಾರ್ಯ ಪರಿಶೀಲಿಸಿದ ಹೆಚ್‌ಡಿಕೆ

ನಾಳೆ ಚನ್ನಮನವರ ಉತ್ತರಕ್ರಿಯಾದಿ ಕಾರ್ಯ : ಅಂತಿಮ ಸಿದ್ಧತೆ ಕಾರ್ಯ ಪರಿಶೀಲಿಸಿದ ಹೆಚ್‌ಡಿಕೆ

HD Kumaraswamy On Chennamma Punya Thithi

ಹಾಸನ, ಜು.29- ಹೊಳೆ ನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಧರ್ಮಪತ್ನಿ ದಿ.ಚನ್ನಮ ಅವರ ಉತ್ತರ ಕ್ರಿಯಾದಿ ಕಾರ್ಯ ನಡೆಯಲಿದೆ. ಇದಕ್ಕಾಗಿ ಪೂರ್ವ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿದ್ದು ಬಹುತೇಕ ಮುಗಿಯುವ ಹಂತಕ್ಕೆ ಬಂದಿವೆ.

ಹೆಚ್‌.ಡಿ. ದೇವೇಗೌಡರು, ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಹಲವು ಬಾರಿ ಭೇಟಿ ನೀಡಿ ಸಿದ್ಧತಾ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ. ನಿನ್ನೆಯೂ ಕುಮಾರಸ್ವಾಮಿ ಅವರು ಕೆಲಸ ಕಾರ್ಯಗಳ ಅವಲೋಕನ ನಡೆಸಿದರು. ಅವರೊಂದಿಗೆ ಹಾಸನ ಶಾಸಕ ಹೆಚ್‌.ಪಿ.ಸ್ವರೂಪ್‌ ಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಮೊದಲಾವರಿದ್ದರು.

ಜು.18ರಂದು ನಿಧನರಾಗಿದ್ದ ಚನ್ನಮ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ನೆರವೇರಿಸಲಾಗಿತ್ತು. ಚನ್ನಮ ಅವರ ಸಮಾಧಿಯ ಸ್ಥಳದಲ್ಲಿ 11 ದಿನದ ಕಾರ್ಯಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಪಾರ್ಕಿಂಗ್‌ ವ್ಯವಸ್ಥೆ, ಊಟಕ್ಕಾಗಿ ಪ್ರತ್ಯೇಕ ಆಸನ ಮತ್ತು ಕೌಂಟರ್‌ಗಳನ್ನು ತೆರೆಯಲಾಗಿದೆ.

ಸುಮಾರು ಆರು ವಿಧದ ಸಿಹಿ ತಿಂಡಿಗಳು ಸೇರಿದಂತೆ ರುಚಿಕರವಾದ ಅಡುಗೆ ತಯಾರಾಗುತ್ತಿದೆ. ಸಾಮಾನ್ಯರು, ಗಣ್ಯರು ಸೇರಿದಂತೆ ಪ್ರತ್ಯೇಕವಾಗಿ 16 ಕೌಂಟರ್‌ ತೆರಲಾಗಿದ್ದು, ಒಂದೂವರೆ ಸಾವಿರ ಅಡುಗೆ ಭಟ್ಟರು ವಿಧವಿಧದ ಅಡುಗೆ ತಯಾರು ಮಾಡಲಿದ್ದಾರೆ. ಕಾರ್ಯ ನಡೆಯುವ ಒಂದು ಕಿಮೀ ದೂರದಿಂದಲೇ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ವಿಐಪಿ ಮಾರ್ಗ ಮತ್ತು ಪಾರ್ಕಿಂಗ್‌ ಸ್ಥಳ, ಸಾರ್ವಜನಿಕ ಮಾರ್ಗ, ಊಟದ ಸ್ಥಳಕ್ಕೆ ದಾರಿ, ಕಡ್ಡಾಯವಾಗಿ ಎಡಕ್ಕೆ ಪಾರ್ಕಿಂಗ್‌, ಮಹಿಳೆಯರ ಊಟದ ವ್ಯವಸ್ಥೆ, ಬೈಕ್‌ ಹಾಗೂ ಕಾರು ನಿಲುಗಡೆಗೆ ಪ್ರತ್ಯೇಕ ಮಾರ್ಗ ವಿಐಪಿ, ಮಹಿಳೆಯರು ಹಾಗೂ ಸಾರ್ವಜನಿಕರ ಊಟಕ್ಕೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ.

ಪಾರ್ಕಿಂಗ್‌ಗಾಗಿ ಹಾಸನ ಕಡೆಯಿಂದ ಹೋಗುವವರಿಗೆ ಹೆದ್ದಾರಿ ಎದುರು, ಎಡಭಾಗ, ಹರಿಹರ ಪುರ ಕಡೆಯಿಂದ ಬರುವವರಿಗೆ ಮೊರಾರ್ಜಿ ವಸತಿ ಶಾಲೆ ಸುತ್ತಮುತ್ತ, ನೀರಿನ ಟ್ಯಾಂಕ್‌ ಪಕ್ಕ, ಹೆಲಿಪ್ಯಾಡ್‌ ಬಳಿ, ಹರದನಹಳ್ಳಿ ಸರ್ಕಾರಿ ಸಂಯುಕ್ತ ಶಾಲೆ ಮೊದಲಾದ ಹತ್ತಕ್ಕೂ ಕಡೆಗಳಲ್ಲಿ ಪಾರ್ಕಿಂಗ್‌ ಸ್ಥಳ ಗೊತ್ತು ಮಾಡಲಾಗಿದೆ.

ಕಾರ್ಯ ಕ್ರಮ ಸ್ಥಳದ ಒಂದು ಕಿಮೀ ಸುತ್ತಳತೆಯಲ್ಲಿ ದೇವೇಗೌಡರ ಕುಟುಂಬದವರ ವಾಹನ ಹೊರತು ಪಡಿಸಿ ಯಾವುದೇ ಖಾಸಗಿ ವಾಹನ ಒಳ ಬರುವಂತಿಲ್ಲ. ಜನರನ್ನು ಪಿಕ್‌ ಅಪ್‌ ಮತ್ತು ಡ್ರಾಪ್‌ ಮಾಡಲು ಸುಮಾರು 16 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಅಧಿಕಾರಿಗಳು ಸಿಬ್ಬಂದಿ ಸೇರಿ 750 ಕ್ಕೂ ಹೆಚ್ಚು ಮಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರು ಮೊನ್ನೆಯಿಂದಲೂ ಸ್ಥಳದಲ್ಲೇ ಮೊಕ್ಕಾಂ ಹೂಡಿ ಊಟದ ಹಾಲ್‌‍, ಯಾವ ರೀತಿಯ ಎಂಬಿತ್ಯಾದಿ ವ್ಯವಸ್ಥೆ ಗಳ ಬಗ್ಗೆ ತಾವೇ ಖುದ್ದು ನಿಂತು ಎಲ್ಲಾ ಕೆಲಸ ಮಾಡಿಸುತ್ತಿದ್ದಾರೆ.

ಕುಮಾರಸ್ವಾಮಿ ಅವರು ಮಾತನಾಡಿ,ತಾಯಿಯವರ ಅಂತ್ಯಕ್ರಿಯೆ ನೆರವೇರಿದಂತೆಯೇ ಉತ್ತರ ಕ್ರಿಯಾದಿ ಕಾರ್ಯವೂ ಅಚ್ಚುಕಟ್ಟಾಗಿ ನಡೆಯ ಬೇಕೆಂದು ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗಿದೆ. ಎಷ್ಟೇ ಜನರು ಬಂದರೂ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಅವರ ಅಭಿಮಾನಿಗಳು, ಜಿಲ್ಲೆಯ ಹಾಗೂ ಹೊರಗಿನ ಜನರು ಶಾಂತ ರೀತಿಯಲ್ಲಿ ಸಹಕರಿಸುವ ಮೂಲಕ ಅಮನವರ ಆತಕ್ಕೆ ಶಾಂತಿ ಕೋರಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

RELATED ARTICLES

Latest News