Homeರಾಜ್ಯಮಂಗಳೂರಿನಲ್ಲಿ ಕ್ರೂಸ್‌‍ ಸೇವೆ ಆರಂಭಕ್ಕೆ ತಾತ್ವಿಕ ಒಪ್ಪಿಗೆ, ಮುಂದಿನ ತಿಂಗಳು ಸ್ಥಳ ಪರಿಶೀಲನೆ

ಮಂಗಳೂರಿನಲ್ಲಿ ಕ್ರೂಸ್‌‍ ಸೇವೆ ಆರಂಭಕ್ಕೆ ತಾತ್ವಿಕ ಒಪ್ಪಿಗೆ, ಮುಂದಿನ ತಿಂಗಳು ಸ್ಥಳ ಪರಿಶೀಲನೆ

approval for cruise service in Mangalore, site inspection next month

ಬೆಂಗಳೂರು, ಜು.31- ರಾಜ್ಯದಲ್ಲಿ ಸಮುದ್ರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ಕ್ರೂಸ್‌‍ ಸೇವೆ ಆರಂಭಿಸುವ ಪ್ರಕ್ರಿಯೆಗೆ ಮಹತ್ವದ ವೇಗ ಸಿಕ್ಕಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು. ದೇಶದ ಪ್ರಮುಖ ಕ್ರೂಸ್‌‍ ಸಂಸ್ಥೆಯಾದ ವಾಟರ್‌ವೇಸ್‌‍ ಲೀಶರ್‌ ಟೂರಿಸಂ ಲಿಮಿಟೆಡ್‌‍ಮಂಗಳೂರಿನಿಂದ ಕ್ರೂಸ್‌‍ ಸೇವೆ ಆರಂಭಿಸುವ ಸಾಧ್ಯತೆ ಕುರಿತು ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳು ಸಂಸ್ಥೆಯ ತಾಂತ್ರಿಕ ತಂಡ ಮಂಗಳೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದೆ.

ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಅವರ ನಿರ್ದೇಶನದಂತೆ ಪ್ರವಾಸೋದ್ಯಮ ಇಲಾಖೆ ಮುಂಬೈನಲ್ಲಿ ಪ್ರಮುಖ ಕ್ರೂಸ್‌‍ ಸಂಸ್ಥೆಗಳೊಂದಿಗೆ ಸಭೆ ನಡೆಸಿತು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳು ಮುಂಬೈನಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುರ್ಗನ್‌ ಬೈಲೋಮ್‌ ಹಾಗೂ ಪೋರ್ಟ್‌ ಆಪರೇಷನ್ಸ್ ನ ಅಸೋಸಿಯೇಟ್‌ ನಿದೇರ್ಶಕ ಭರತ್‌ ಆಚಾರ್ಯ ಅವರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.

ಮಂಗಳೂರಿನಲ್ಲಿ ಕ್ರೂಸ್‌‍ ಸೇವೆ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯ, ಕಾರ್ಯಾಚರಣೆ, ಬಂದರು ಸೌಲಭ್ಯಗಳು, ಮಾರುಕಟ್ಟೆ ಅವಕಾಶಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.

ಮಂಗಳೂರು ಕರಾವಳಿ ಪ್ರದೇಶವು ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಅಪಾರ ಸಾಮರ್ಥ್ಯ ಹೊಂದಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲು ಕ್ರೂಸ್‌‍ ಸೇವೆ ನೆರವಾಗಲಿದ್ದು, ಇದರಿಂದ ಪ್ರವಾಸೋದ್ಯಮ, ಆತಿಥ್ಯ ವಲಯ ಹಾಗೂ ಸ್ಥಳೀಯ ಉದ್ಯೋಗಾವಕಾಶಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆ ಇದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯ ತಾಂತ್ರಿಕ ತಂಡ ಮುಂದಿನ ತಿಂಗಳು ಮಂಗಳೂರಿಗೆ ಭೇಟಿ ನೀಡಿ ಬಂದರು ಸೌಲಭ್ಯಗಳು, ಪ್ರಯಾಣಿಕರ ನಿರ್ವಹಣಾ ವ್ಯವಸ್ಥೆ, ಕಾರ್ಯಾಚರಣೆಯ ಸಾಧ್ಯತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಸ್ಥಳ ಪರಿಶೀಲನೆ ನಡೆಸಲಿದೆ. ಈ ವರದಿಯ ಆಧಾರದ ಮೇಲೆ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಇದೇ ವೇಳೆ ರಾಜ್ಯದಲ್ಲಿ ಕ್ರೂಸ್‌‍ ಪ್ರವಾಸೋದ್ಯಮಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ತಂಡ ಇತ್ತೀಚೆಗೆ ಮುಂಬೈನ ಅಂತರರಾಷ್ಟ್ರೀಯ ಕ್ರೂಸ್‌‍ ಟರ್ಮಿನಲ್‌ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳು, ಕಾರ್ಯಾಚರಣೆ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಅಧ್ಯಯನ ಮಾಡಿದೆ. ಆ ಅಧ್ಯಯನದ ಆಧಾರದ ಮೇಲೆ ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೂಸ್‌‍ ಟರ್ಮಿನಲ್‌ ನಿರ್ಮಾಣದ ಸಾಧ್ಯತೆ ಕುರಿತು ಪ್ರಾಥಮಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಸೂಚಿಸಲಾಗಿದೆ.

RELATED ARTICLES

Latest News