ಬೆಂಗಳೂರು, ಆ.1- ಬಿಡದಿ ಟೌನ್ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನ ವಿರೋಧಿಸಿ ಆ.9 ರಿಂದ 11 ವರೆಗೆ ಪಾದಯಾತ್ರೆ ನಡೆಯಲಿದ್ದು, ಆ. 14 ಕ್ಕೆ ಬೃಹತ್ ವಿಧಾನಸೌಧ ಚಲೋ ಹೋರಾಟವನ್ನು ನಡೆಸುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಮ ದೇವೇಗೌಡರ ನಿಧನದಿಂದ ಮುಂದೂಡಿಕೆ ಆಗಿದ್ದ ಪಾದಯಾತ್ರೆಗೆ ಈಗ ಹೊಸ ದಿನಾಂಕ ನಿಗದಿ ಮಾಡಲಾಗಿದೆ.ಈ ಕುರಿತು ಪ್ರಕಟಣೆ ಹೊರಡಿಸಿರುವ ನಿಖಿಲ್, ಬಿಡದಿ ಟೌನ್ಶಿಪ್ ನೆಪದಲ್ಲಿ 6 ಕಂದಾಯ ಗ್ರಾಮಗಳ ಕೃಷಿ ಭೂಮಿ ಕಬಳಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ ಹೋರಾಟ ಮುಂದುವರಿಯಲಿದೆ.
ಅಜ್ಜಿ ಚನ್ನಮ ದೇವೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪಾದಯಾತ್ರೆ ಆ.9 ರಂದು ಬೈರಮಂಗಲ ವೃತ್ತದಿಂದ ಪ್ರಾರಂಭವಾಗಿ 11 ಫ್ರೀಡಂ ಪಾರ್ಕ್ ತಲುಪಲಿದೆ, ಆ.14ರಂದು ವಿಧಾನಸೌಧ ಚಲೋ ಬೃಹತ್ ಹೋರಾಟ ನಡೆಯಲಿದ್ದು, ಬಿಡದಿಯ ಮಣ್ಣು ಮತ್ತು ರೈತರನ್ನು ರಕ್ಷಿಸುವ ನಮ ಪಟ್ಟು ಸಡಿಲವಾಗಿಲ್ಲ. ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
