Homeರಾಷ್ಟ್ರೀಯಲೋಕಸಭೆ ಮುಂದುವರೆದ ಗದ್ದಲದ ನಡುವೆಯೇ 2 ಮಸೂದೆ ಮಂಡನೆ

ಲೋಕಸಭೆ ಮುಂದುವರೆದ ಗದ್ದಲದ ನಡುವೆಯೇ 2 ಮಸೂದೆ ಮಂಡನೆ

Lok Sabha continues to be noisy, 2 bills introduced

ನವದೆಹಲಿ,ಆ.3- ನೀಟ್‌ ಪತ್ರಿಕೆ ಸೋರಿಕೆ ಮತ್ತು ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ಕಾಣಿಕೆ ಕಳ್ಳತನ ಆರೋಪದ ವಿರುದ್ಧ ವಿರೋಧ ಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರಿಂದ ಇಂದಿನ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಸದನದ ಸುಗಮ ಕಲಾಪಕ್ಕಾಗಿ ಸ್ಪೀಕರ್‌ ಪದೆ ಪದೇ ಮನವಿ ಮಾಡಿದರೂ, ವಿಪಕ್ಷಗಳ ಸದಸ್ಯರು ಜೋರು ಗದ್ದಲ ಎಬ್ಬಿಸಿದರು.

ಗದ್ದಲದ ನಡುವೆ 2 ಮಸೂದೆ ಮಂಡನೆ:
ವಿಪಕ್ಷಗಳ ಗದ್ದಲ, ಜೋರು ಘೋಷಣೆಗಳು ನಡುವೆಯೂ ಕೇಂದ್ರ ಸರ್ಕಾರ ಎರಡು ಮಸೂದೆಗಳನ್ನು ಮಂಡಿಸಿತು. ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ಬಿಲ್‌‍- 2026 ಮತ್ತು ಬ್ಯಾಂಕರ್ಸ್‌ ಬುಕ್ಸ್ ಎವಿಡೆನ್ಸ್ ಬಿಲ್‌‍- 2026 ಅನ್ನು ಸದನದಲ್ಲಿ ಮಂಡಿಸಲಾಯಿತು. ಈ ಎರಡೂ ಮಸೂದೆಗಳ ಮೇಲೆ ಚರ್ಚೆ ನಡೆಸಲು ಸರ್ಕಾರ ವಿಪಕ್ಷಗಳಿಗೆ ನೋಟಿಸ್‌‍ ನೀಡಿತ್ತು.

ಆದರೆ, ವಿರೋಧ ಪಕ್ಷಗಳ ಯಾವುದೇ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿಸದ ಕಾರಣ, ಮಸೂದೆಗಳನ್ನು ಧ್ವನಿ ಮತದ ಮೂಲಕ ಮಂಡಿಸಲಾಯಿತು.ಸ್ಪೀಕರ್‌ ಮನವಿ : ಮಸೂದೆ ಮಂಡನೆಯ ಬಳಿಕ ಚರ್ಚೆಗಾಗಿ ವಿಪಕ್ಷಗಳ ಸದಸ್ಯರ ಹೆಸರನ್ನು ಸ್ಪೀಕರ್‌ ಕೂಗಿದರು. ಆದರೆ, ಯಾರೂ ಕೂಡ ಮಾತನಾಡಲಿಲ್ಲ. ಎಲ್ಲರೂ ತಮ ಸ್ಥಾನಗಳಲ್ಲಿ ಕುಳಿತುಕೊಳ್ಳಿ. ಮಸೂದೆಗಳ ಮೇಲೆ ಚರ್ಚೆ ನಡೆಸಿದ ಎಂದು ಪದೆ ಪದೇ ಮನವಿ ಮಾಡಿದರು. ಆದರೆ, ವಿಪಕ್ಷಗಳ ಸದಸ್ಯರು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು. ಇದು ಸಂಸತ್ತಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸ್ಪೀಕರ್‌ ಸದನದ ಗಮನಕ್ಕೆ ತಂದರು.

ಇಷ್ಟಾದರೂ ವಿಪಕ್ಷಗಳು ಕಿವಿಗೊಡದೇ ಪ್ರತಿಭಟನೆ ಮುಂದುವರಿಸಿದಾಗ ಸ್ಪೀಕರ್‌ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ ಎಂದು ಘೋಷಿಸಿದರು. ಇದಕ್ಕೂ ಮೊದಲು ಇಂದಿನ ಅಧಿವೇಶನ ಬೆಳಗ್ಗೆ 11 ಗಂಟೆಗೆ ಆರಂಭವಾದ ತಕ್ಷಣವೇ ಪ್ರತಿಪಕ್ಷಗಳ ಸದಸ್ಯರು ಗಲಾಟೆ ಎಬ್ಬಿಸಿದರು. ಇದರಿಂದ ಸ್ಪೀಕರ್‌ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದ್ದರು.

ಬರೀ ಗದ್ದಲ, ಮುಂದೂಡಿಕೆ : ಜುಲೈ 20 ರಿಂದ ಆರಂಭವಾಗಿರುವ ಮಳೆಗಾಲದ ಸಂಸತ್‌ ಅಧಿವೇಶನದ ಕಳೆದ ಎರಡು ವಾರ ಬರೀ ಗದ್ದಲದಲ್ಲಿಯೇ ಮುಗಿದಿದೆ. ನೀಟ್‌ ಅಕ್ರಮ ಮತ್ತು ಅದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಪರಿಚಯಿಸಿರುವ ಪರೀಕ್ಷಾ ಅಕ್ರಮ ತಡೆ ಮಸೂದೆಯ ಮೇಲೆ ಎರಡು ದಿನ ಚರ್ಚೆ ನಡೆದಿದ್ದು ಬಿಟ್ಟರೆ ನಿತ್ಯ ಗದ್ದಲ, ಪ್ರತಿಭಟನೆಯಿಂದ ಕಲಾಪ ನಡೆಯುತ್ತಿಲ್ಲ.

RELATED ARTICLES
spot_img

Latest News