ನಿತ್ಯ ನೀತಿ : ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ಹೆಚ್ಚು ನಂಬುತ್ತದೆ.
ಪಂಚಾಂಗ : ಸೋಮವಾರ, 10-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ಆರ್ದ್ರಾ / ಯೋಗ: ವಜ್ರ / ಕರಣ: ಗರಜ
ಸೂರ್ಯೋದಯ : ಬೆ.6.07
ಸೂರ್ಯಾಸ್ತ : 06.45
ರಾಹುಕಾಲ : 7.30-9.00
ಯಮಗಂಡ ಕಾಲ : 10.30- 12.00
ಗುಳಿಕ ಕಾಲ : 1.30-3.00
ರಾಶಿ ಭವಿಷ್ಯ
ಮೇಷ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ವೃಷಭ: ನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ಮಿಥುನ: ಸೌಜನ್ಯತೆಯಿಂದ ನಡೆದುಕೊಳ್ಳುವುದ ರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.
ಕಟಕ: ವ್ಯವಹಾರದಲ್ಲಿ ಮೂರನೆ ವ್ಯಕ್ತಿಯೊಬ್ಬರ ಆಗಮನವಾಗುವುದರಿಂದ ಅಪಾಯ ಹೆಚ್ಚಾಗಲಿದೆ.
ಕನ್ಯಾ: ವಿಲಾಸಿ ವಸ್ತುಗಳ ಖರೀದಿಗೆ ಮುಂದಾಗುವಿರಿ. ಹೊಟೇಲ್ ವ್ಯಾಪಾರಿಗಳಿಗೆ ನಷ್ಟವಾಗಲಿದೆ.
ಸಿಂಹ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಒಳಿತು.
ತುಲಾ: ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ನಿರೀಕ್ಷಿತ ಸ್ಥಾನಮಾನ ಸಿಗಲಿದೆ.
ವೃಶ್ಚಿಕ: ಮನೆಗಾಗಿ ವಿಶೇಷ ವಸ್ತುಗಳನ್ನು ಖರೀದಿಸಲು ಉತ್ಸುಕರಾಗಿರುವಿರಿ.
ಧನುಸ್ಸು: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.
ಮಕರ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿ ಯಾಗುವಿರಿ. ಚಿಂತೆಗೆ ಅವಕಾಶವಿರುವುದಿಲ್ಲ.
ಕುಂಭ: ಲೇವಾದೇವಿ ವ್ಯವಹಾರಗಳು ನಿರಂತರ ವಾಗಿ ಮುಂದುವರೆಯಲಿವೆ.
ಮೀನ: ದೂರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಮಕ್ಕಳಿಂದ ಸಂತೋಷ ಸಿಗಲಿದೆ.
