Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-08-2026)

Today's Horoscope

ನಿತ್ಯ ನೀತಿ : ಮುಖವಾಡದ ಬದುಕು ಮೂರು ದಿನ, ಬಣ್ಣದ ಬದುಕು ಆರು ದಿನ, ನಿಯತ್ತಿನ ಬದುಕು ನೂರು ದಿನ.

ಪಂಚಾಂಗ : ಗುರುವಾರ, 20-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ಅಷ್ಟಮಿ / ನಕ್ಷತ್ರ: ವಿಶಾಖಾ / ಯೋಗ: ಐಂದ್ರ / ಕರಣ: ವಿಷ್ಟಿ
ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.40
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ: ಮಾಡಬೇಕೆಂದುಕೊಂಡಿರುವ ಒಳ್ಳೆಯ ಕೆಲಸ ವನ್ನು ಇಂದಿನಿಂದಲೇ ಆರಂಭಿಸುವುದು ಸೂಕ್ತ.
ವೃಷಭ: ನೆರೆಹೊರೆಯವರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದಿರಿ.
ಮಿಥುನ: ಹೊಸ ಪ್ರದೇಶಕ್ಕೆ ಭೇಟಿ ನೀಡಿ ಒಳ್ಳೆಯ ಅನುಭವ ಪಡೆದುಕೊಳ್ಳಲು ಅವಕಾಶ ಸಿಗಲಿದೆ.

ಕಟಕ: ನೌಕರರಿಗೆ ಸ್ಥಾನ ಬದಲಾವಣೆ ಅಥವಾ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಸಿಂಹ: ಗುರು-ಹಿರಿಯ ರೊಂದಿಗೆ ಸಮಾಲೋಚನೆ ನಡೆಸುವಿರಿ.
ಕನ್ಯಾ: ಆಪ್ತರಿಂದಲೇ ಕೆಟ್ಟ ಮಾತು ಕೇಳಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ.

ತುಲಾ: ಆಸ್ತಿ ಸಂಬಂ ತ ತಗಾದೆಗಳಿಗೆ ನ್ಯಾಯವಾದಿಗಳ ಸಲಹೆ ಪಡೆಯಿರಿ.
ವೃಶ್ಚಿಕ: ಯಾವುದೋ ವಿಚಾರ ಮನಸ್ಸಿನಲ್ಲಿಟ್ಟು ಕೊಂಡು ಕೊರಗುವುದು ಸರಿಯಲ್ಲ.
ಧನುಸ್ಸು: ಲೇವಾದೇವಿ ವ್ಯವಹಾರದಲ್ಲಿ ಧನಲಾಭವಿದೆ. ಸಮಾಧಾನದಿಂದ ವ್ಯವಹರಿಸಿ.

ಮಕರ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪ ಮಟ್ಟಿನ ಲಾಭ ಸಿಗಲಿದೆ.
ಕುಂಭ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.
ಮೀನ: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.

RELATED ARTICLES
spot_img

Latest News