ಬೆಂಗಳೂರು,ಸೆ.9- ನಗರ ಪೊಲೀಸರು ಒಬ್ಬ ವಿದೇಶಿ ಪ್ರಜೆ ಹಾಗೂ ಹೊರರಾಜ್ಯದ ಒಬ್ಬಾತ ಸೇರಿದಂತೆ ಏಳು ಮಂದಿ ಡ್ರಗ್‌ಪೆಡ್ಲರ್‌ಗಳನ್ನು ಬಂಧಿಸಿ 24.22 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ 11 ಕೆಜಿ 237 ಗ್ರಾಂ ಎಂಡಿಎಂಎ, 2 ಕೆಜಿ 352 ಗ್ರಾಂ ಹೈಡ್ರೋಗಾಂಜಾ, 10 ಕೆಜಿ ಗಾಂಜಾ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ.
ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಠಾಣಾ ವ್ಯಾಪ್ತಿಗಳಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ.
ಆ ಸಂದರ್ಭದಲ್ಲಿ ಒಬ್ಬ ವಿದೇಶಿ ಪ್ರಜೆ ಮತ್ತೊಬ್ಬ ಹೊರರಾಜ್ಯದ ನಿವಾಸಿ ಹಾಗೂ ಸ್ಥಳೀಯ ಐದು ಮಂದಿ ಸೇರಿದಂತೆ ಒಟ್ಟು ಏಳು ಮಂದಿ ಡ್ರಗ್‌ಪೆಡ್ಲರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಗಳಿಸುವ ಉದ್ದೇಶದಿಂದ ವಿದೇಶ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಮಾದಕವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾರೆ.
ಗಿರಿನಗರ ಠಾಣೆ ಪೊಲೀಸರು 18.26 ಕೋಟಿ ರೂ. ಮೌಲ್ಯದ 9 ಕೆಜಿ 127 ಗ್ರಾಂ ಎಂಡಿಎಂಎ ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡರೆ, ಇಂದಿರಾನಗರ ಠಾಣೆ ಪೊಲೀಸರು 4.22 ಕೋಟಿ ರೂ. ಮೌಲ್ಯದ 2 ಕೆಜಿ 110 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಚಿಕ್ಕಜಾಲ ಠಾಣೆ ಪೊಲೀಸರು 1.64 ಕೋಟಿ ರೂ. ಮೌಲ್ಯದ 2 ಕೆಜಿ 352 ಗ್ರಾಂ ಹೈಡ್ರೋ ಗಾಂಜಾ ಹಾಗೂ ಗೋವಿಂದಪುರ ಠಾಣೆ ಪೊಲೀಸರು 10 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಆರೋಪಿಗಳಿಗೆ ಮಾದಕವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳ ಪತ್ತೆಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ವಂಶಿಕೃಷ್ಣ ಪೂರ್ವ ವಿಭಾಗದ ಡಾ.ವಿಕ್ರಂ ಅಮಟೆ, ಈಶಾನ್ಯ ವಿಭಾಗದ ಮಿಥುನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಆಯಾ ಠಾಣಾ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಪಾಲ್ಗೊಂಡು ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಕುಖ್ಯಾತ ಮನೆಗಳ್ಳರ ಸೆರೆ : ಒಬ್ಬನ ಮೇಲೆ 60, ಮತ್ತೊಬ್ಬನ ಮೇಲೆ 33 ಕೇಸ್
ಕಳವು ಮಾಡಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ 11 ದ್ವಿಚಕ್ರ ವಾಹನಗಳ ಜಪ್ತಿ
ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಲುವಾಗಿ ಖಾಲಿ ಜಾಗಗಳಲ್ಲಿ ನಿಲ್ಲಿಸಿದ್ದ 8.80 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ಬನಶಂಕರಿ ಠಾಣೆ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. ಬನಶಂಕರಿ ಎರಡನೇ ಹಂತದ ನಿವಾಸಿಯೊಬ್ಬರು ಎಂದಿನಂತೆ ಮನೆಯ ಕಾಂಪೌಂಡ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದು, ಮರುದಿನ ಬೆಳಿಗ್ಗೆ ನೋಡುವಷ್ಟರಲ್ಲಿ ವಾಹನ ಇರಲಿಲ್ಲ. ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಭವಾನಿ ನಗರದ ಬಳಿ ದ್ವಿಚಕ್ರ ವಾಹನ ಸಮೇತ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳ ಪಡಿಸಿದಾಗ ಮತ್ತೊಬ್ಬ ಸಹಚರ ನೊಂದಿಗೆ ಸೇರಿಕೊಂಡು ಕೃತ್ಯವೆಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಈ ಪ್ರಕರಣವಲ್ಲದೆ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲೂ ಸಹ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಲುವಾಗಿ ಯಡಿಯೂರು ಕೆರೆಯ ಸಮೀಪವಿರುವ ಬಿಬಿಎಂಪಿ ಮೈದಾನದ ಬಳಿ ಹಾಗೂ ಬನಶಂಕರಿ ಎರಡನೇ ಹಂತದ ಹೋಟೆಲ್ ಬಳಿ ಮತ್ತು ಕದಿರೇನಹಳ್ಳಿ ಆಟದ ಮೈದಾನದ ಬಳಿ ನಿಲ್ಲಿಸಿರುವುದಾಗಿ ಹೇಳಿ ದ್ದಾನೆ.
ಆರೋಪಿ ನೀಡಿದ ಮಾಹಿತಿ ಮೇರೆಗೆ ತನಿಖೆ ಮುಂದುವರೆಸಿದ ಪೊಲೀಸರು ಮತ್ತೊಬ್ಬ ಸಹಚರನನ್ನು ಕೋಗಿಲು ಕ್ರಾಸ್ ಬಳಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ನಂತರ ಖಾಲಿ ಜಾಗಗಳಲ್ಲಿ ನಿಲ್ಲಿಸಿದ್ದ ಒಟ್ಟು 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 8.80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಬೆಂಗಳೂರು : ಪತ್ನಿಕೊಂದು ಆತ್ಮಹತ್ಯಗೆ ಶರಣಾದ ಆಟೋ ಚಾಲಕ
ಆಭರಣ ಕಳ್ಳತನ : ಕೇರ್ ಟೇಕರ್ ಸೆರೆ, 17 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ಜಪ್ತಿ
ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ ವ್ಯಕ್ತಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ 17 ಲಕ್ಷ ಮೌಲ್ಯದ 110 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಪೈಪ್‌ಲೈನ್ ರೋಡ್‌ನ ನಿವಾಸಿಯೊಬ್ಬರ ಮನೆಯಲ್ಲಿ ವ್ಯಕ್ತಿಯೊಬ್ಬ ಕೇರ್ ಟೇಕರ್ ಆಗಿ ಕೆಲಸ ಮಾಡಿಕೊಂಡಿದ್ದ ಸಮಯದಲ್ಲಿ ಮಾಲೀಕರ ಕಣ್ತಪ್ಪಿಸಿ ಆಭರಣಗಳನ್ನು ಕಳವು ಮಾಡಿದ್ದಾನೆ.
ಮಾಲೀಕರು ಆಭರಣಗಳನ್ನು ನೋಡಿಕೊಂಡಾಗ ಸುಮಾರು 145 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡು ಬಂದಿದೆ. ಮನೆಯಲ್ಲಿ ಕೇರ್ ಟೇಕರ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಳವು ಮಾಡಿರಬಹುದೆಂಬ ಅನುಮಾನಗೊಂಡು ಮನೆ ಮಾಲೀಕರು ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಕೇರ್‌ಟೇಕರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಯಲಹಂಕ 4ನೇ ಹಂತದ ಬಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆಭರಣ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣಗಳನ್ನು ಕಲ್ಬುರ್ಗಿಯ ಎರಡು ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ, ಉಳಿದ ಆಭರಣಗಳನ್ನು ಕಲ್ಬುರ್ಗಿಯಲ್ಲಿ ವಾಸವಿರುವ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿದ್ದಾನೆ. ಆರೋಪಿಯ ಮಾಹಿತಿಯಂತೆ ಕಾರ್ಯಾಚರಣೆ ಮುಂದುವರೆಸಿ ಎರಡು ಜ್ಯೂವೆಲರಿ ಅಂಗಡಿಗಳಿಂದ 90 ಗ್ರಾಂ ಹಾಗೂ ಆತನ ಸ್ನೇಹಿತನಿಂದ 20 ಗ್ರಾಂ ಚಿನ್ನದ ಗಟ್ಟಿ ಸೇರಿದಂತೆ ಒಟ್ಟು 110 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್ ಚೌಧರಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದ್ದು, ಇವುಗಳ ಒಟ್ಟು ಮೌಲ್ಯ 17 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲೇ ಕಳ್ಳತನ : ಇಬ್ಬರ ಬಂಧನ
ಬೆಂಗಳೂರು,ಸೆ.9-ಕೆಲಸ ನೀಡಿದ್ದ ಮನೆ ಹಾಗೂ ಕಚೇರಿಯಲ್ಲೇ ಹಣ, ಆಭರಣ ಕಳವು ಮಾಡಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿರುವ ಬನಶಂಕರಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 26.15 ಲಕ್ಷ ನಗದು ಹಾಗೂ 24.96 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬನಶಂಕರಿ 7 ನೇ ಹಂತದ 4ನೇ ಕ್ರಾಸ್ ಮನೆಯೊಂದರಲ್ಲಿ ಕಳೆದ ಮೂರು ತಿಂಗಳಿನಿಂದ ಮನೆಗೆಲಸ ಮಾಡಿಕೊಂಡಿದ್ದ ವ್ಯಕ್ತಿ ಕೊಠಡಿಯ ಬೀರುವಿನಲ್ಲಿದ್ದ ಹಣ, ಆಭರಣ ಕಳವು ಮಾಡಿದ್ದಾನೆ.ಆಭರಣ ಕಳವು ಆಗಿರುವ ಬಗ್ಗೆ ಮನೆ ಮಾಲೀಕರು ಮನೆಗೆಲಸದವನ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀ ಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮನೆಗೆಲಸ ದವನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಹಣ, ಆಭರಣಗಳನ್ನು ಕಳವು ಮಾಡಿರುವುದಾಗಿ, ಆ ಆಭರಣಗಳನ್ನು ಬನಶಂಕರಿಯ ಕೆ.ಆರ್.ರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯಲ್ಲಿ ಅಡಮಾನವಿಟ್ಟು ಕಾರು ಮತ್ತು ಬೈಕ್ ಖರೀದಿಸಿರುವುದಾಗಿ ಹೇಳಿದ್ದಾನೆ.ಆರೋಪಿಯ ಮಾಹಿತಿಯಂತೆ ಜ್ಯೂವೆಲರಿ ಅಂಗಡಿಯಿಂದ 130 ಗ್ರಾಂ ಚಿನ್ನಾಭರಣ,ದ್ವಿಚಕ್ರವಾಹನದ ಡಿಕ್ಕಿಯಲ್ಲಿಟ್ಟಿದ್ದ 14 ಗ್ರಾಂ ಚಿನ್ನಾಭರಣ, 19 ಗ್ರಾಂ ಬೆಳ್ಳಿ ವಸ್ತುಗಳನ್ನು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.
26.15 ಲಕ್ಷ ಹಣ ಜಪ್ತಿ :
ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಹಣ ಕಳವು ಮಾಡಿದ್ದ ಕೆಲಸಗಾರನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ 26.15 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ. ಬನಶಂಕರಿ 2ನೇ ಹಂತದ ಶ್ರೀರಾಮ ರಸ್ತೆಯ ನಿವಾಸಿಯೊಬ್ಬರು ಕೋರ ಮಂಗಲದಲ್ಲಿ ಮನಿ ಎಕ್‌್ಸಚೆಂಜ್ ಕಚೇರಿ ಇಟ್ಟುಕೊಂಡಿದ್ದಾರೆ.
ಈ ಕಚೇರಿಯಲ್ಲಿ ಸುಮಾರು 4 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಉದ್ಯೋಗಿಯೊಬ್ಬ ಕಚೇರಿಗೆ ಸಂಬಂಧಪಟ್ಟ ಕೆಲಸಗಳನ್ನು ಮನೆಯಿಂದ ಕಚೇರಿಗೆ , ಕಚೇರಿಯಿಂದ ಮನೆಗೆ ಹಣ ತೆಗೆದುಕೊಂಡು ಹೋಗುವುದು ಹಾಗೂ ಬ್ಯಾಂಕಿನ ಕೆಲಸಗಳನ್ನು ಮಾಡುತ್ತಿದ್ದನು.ಆ.14 ರಂದು ಕಚೇರಿಯಲ್ಲಿದ್ದ 26.80 ಲಕ್ಷ ಹಣವನ್ನು ತಮ ಮಗನಿಗೆ ತಲುಪಿಸುವಂತೆ ಹಣ ಕೊಟ್ಟಿ ಮಾಲೀಕರು ಕಳುಹಿಸಿದಾಗ ಆತ ಹಣ ತಲುಪಿಸದೇ ಹಣದೊಂದಿಗೆ ಪರಾರಿಯಾಗಿದ್ದನು. ಈ ಬಗ್ಗೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆ ಉದ್ಯೋಗಿಯನ್ನು ತಿಲಕ್‌ನಗರದ ಆತನ ಮನೆಯಿಂದಲೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಣವನ್ನು ತೆಗೆದುಕೊಂಡು ಬಂದಿರುವುದಾಗಿ ಹೇಳಿದ್ದಾನೆ.
ಆತ ಮನೆಯಲ್ಲಿಟ್ಟಿದ್ದ 26.15 ಲಕ್ಷ ಹಣವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮನೆಗಳ್ಳನ ಬಂಧನ:18 ಲಕ್ಷ ವೌಲ್ಯದ ಆಭರಣ ಜಪ್ತಿ
ಬೆಂಗಳೂರು,ಸೆ.9-ಅಪ್ರಾಪ್ತ ಮಗನೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 18 ಲಕ್ಷ ಮೌಲ್ಯದ 116 ಗ್ರಾಂ ಚಿನ್ನಾಭರಣ ಹಾಗೂ 150 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಳ್ಳಗಾನಹಳ್ಳಿ ಹಾಗು ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದ್ದ ಎರಡು ಮನೆಗಳ್ಳತನ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹರಿನಗರದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.
